ಮೈಸೂರು-ಚೆನ್ನೈ ಮಾರ್ಗದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಕರುವಿಗೆ ಡಿಕ್ಕಿ; ಮುಂಭಾಗಕ್ಕೆ ಹಾನಿ
ಪ್ರಧಾನಿ ನರೇಂದ್ರ ಮೋದಿ ನವೆಂಬರ್ 11ರಂದು ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗದಲ್ಲಿ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿಸಿದ್ದರು. ಇದು ಕೂಡ ಜಾನುವಾರಿಗೆ ಡಿಕ್ಕಿ ಹೊಡೆದ ಪ್ರಸಂಗ ನಡೆದಿದೆ.

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನವೆಂಬರ್ 11ರಂದು ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗದಲ್ಲಿ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿಸಿದ್ದರು. ಇದು ಕೂಡ ಜಾನುವಾರಿಗೆ ಡಿಕ್ಕಿ ಹೊಡೆದ ಪ್ರಸಂಗ ನಡೆದಿದೆ.
ನಿನ್ನೆ ಗುರುವಾರ ತಮಿಳುನಾಡಿನ ಅರಕ್ಕೋಣಂನಲ್ಲಿ ಕರುವಿಗೆ ಡಿಕ್ಕಿ ಹೊಡೆದು ಅಪಘಾತದಿಂದ ರೈಲಿನಲ್ಲಿ ಡೆಂಟ್ ಕಾಣಿಸಿಕೊಂಡಿದೆ. ಅಪಘಾತಕ್ಕೀಡಾದ ಕರು ಮೃತಪಟ್ಟಿದೆ. ಅಪಘಾತ ಸಂಭವಿಸಿದಾಗ ರೈಲು ಗಂಟೆಗೆ 90 ಕಿ.ಮೀ ವೇಗದಲ್ಲಿ ಹೋಗುತ್ತಿತ್ತು ಎಂದು ಇಂಗ್ಲಿಷ್ ದೈನಿಕವೊಂದು ವರದಿ ಮಾಡಿದೆ.
ಘಾಟ್ ಸೆಕ್ಷನ್ ನಲ್ಲಿ ತಿರುವುಗಳನ್ನು ಪರಿಗಣಿಸಿ, ಅಧಿಕಾರಿಗಳು ವಂದೇ ಭಾರತ್ ಎಕ್ಸ್ ಪ್ರೆಸ್ ನ ಸರಾಸರಿ ವೇಗವನ್ನು ಗಂಟೆಗೆ 75 ರಿಂದ 77 ಕಿಲೋಮೀಟರ್‌ಗಳಿಗೆ ನಿಗದಿಪಡಿಸಿದ್ದಾರೆ, ದೇಶದಲ್ಲಿ ಇದುವರೆಗೆ ಪ್ರಾರಂಭಿಸಲಾದ ಐದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರದಲ್ಲಿ ದಕ್ಷಿಣ ಭಾರತದ ರೈಲಿನ ವೇಗ ನಿಧಾನವಾಗಿದೆ.
ಅಪಘಾತದ ನಂತರ ಹಾನಿಯನ್ನು ಪರಿಶೀಲಿಸಲು ರೈಲು ಕೆಲವು ನಿಮಿಷಗಳವರೆಗೆ ನಿಲುಗಡೆಯಾಗಿತ್ತು. ನಂತರ ಚೆನ್ನೈಗೆ ಪ್ರಯಾಣ ಬೆಳೆಸಿತು. ಕಳೆದ ಅಕ್ಟೋಬರ್‌ನಿಂದ ವಂದೇ ಭಾರತ್ ರೈಲಿನಲ್ಲಿ ಇದು ಐದನೇ ಅಪಘಾತವಾಗಿದೆ.
ಇದನ್ನೂ ಓದಿ: ಹಳಿಗಳ ಮೇಲೆ ರೈಲು ಡಿಕ್ಕಿ ಹೊಡೆದು ಜಾನುವಾರುಗಳ ಸಾವು: ಆವರಣ ಗೋಡೆ ನಿರ್ಮಿಸಲು ರೈಲ್ವೆ ಸಚಿವಾಲಯ ಒಪ್ಪಿಗೆ
ಮಾಲೀಕರ ವಿರುದ್ಧ ಕ್ರಮ: ಭವಿಷ್ಯದಲ್ಲಿ ಈ ರೀತಿ ದನ-ಕರುಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಇಲಾಖೆಯು ಜಾನುವಾರುಗಳ ಮಾಲೀಕರನ್ನು ಪತ್ತೆಹಚ್ಚಿ, ಪ್ರಕರಣವನ್ನು ದಾಖಲಿಸುತ್ತದೆ, ಅಲ್ಲದೆ ಭಾರೀ ದಂಡವನ್ನು ವಿಧಿಸುತ್ತದೆ ಎಂದು ದಕ್ಷಿಣ ರೈಲ್ವೆಯ ಸಾರ್ವಜನಿಕ ಸಂಪರ್ಕ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಪ್ರಕಟಣೆ ತಿಳಿಸಿದೆ.
ಜಾನುವಾರುಗಳು ಹಳಿ ದಾಟಿ ಅಪಘಾತವಾಗುವುದನ್ನು ತಪ್ಪಿಸಲು ಮುಂದಿನ ಆರು ತಿಂಗಳಲ್ಲಿ 1,000 ಕಿಲೋಮೀಟರ್ ವ್ಯಾಪ್ತಿಯಲ್ಲಿ ಗಡಿ ಗೋಡೆಯನ್ನು ನಿರ್ಮಿಸಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಶ್ಣವ್ ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


