ಗುಜರಾತ್ ಚುನಾವಣೆ: ಕಾಂಗ್ರೆಸ್ ವೀಕ್ಷಕರಾಗಿ ಬಿಕೆ ಹರಿಪ್ರಸಾದ್, ಕೆ.ಹೆಚ್.ಮುನಿಯಪ್ಪ ನೇಮಕ
ಗುಜರಾತ್ ವಿಧಾನಸಭಾ ಚುನಾವಣೆಯ ಮೇಲುಸ್ತುವಾರಿ ನೋಡಿಕೊಳ್ಳಲು ವೀಕ್ಷಕರನ್ನು ಕಾಂಗ್ರೆಸ್ ಸೋಮವಾರ ನೇಮಕ ಮಾಡಿದೆ. ಐದು ವಲಯ ವೀಕ್ಷಕರನ್ನು ನೇಮಕ ಮಾಡಿರುವ ಕಾಂಗ್ರೆಸ್, 32 ಲೋಕಸಭಾ ಕ್ಷೇತ್ರಗಳಲ್ಲಿ ತಲಾ 32 ವೀಕ್ಷಕರು ಮತ್ತು ಐವರು ಇತರ ವೀಕ್ಷಕರನ್ನು ನೇಮಿಸಿದೆ.

ನವದೆಹಲಿ: ಗುಜರಾತ್ ವಿಧಾನಸಭಾ ಚುನಾವಣೆಯ ಮೇಲುಸ್ತುವಾರಿ ನೋಡಿಕೊಳ್ಳಲು ವೀಕ್ಷಕರನ್ನು ಕಾಂಗ್ರೆಸ್ ಸೋಮವಾರ ನೇಮಕ ಮಾಡಿದೆ. ಐದು ವಲಯ ವೀಕ್ಷಕರನ್ನು ನೇಮಕ ಮಾಡಿರುವ ಕಾಂಗ್ರೆಸ್, 32 ಲೋಕಸಭಾ ಕ್ಷೇತ್ರಗಳಲ್ಲಿ ತಲಾ 32 ವೀಕ್ಷಕರು ಮತ್ತು ಐವರು ಇತರ ವೀಕ್ಷಕರನ್ನು ನೇಮಿಸಿದೆ.
ಕರ್ನಾಟಕದ ಬಿ.ಕೆ. ಹರಿಪ್ರಸಾದ್ ಮತ್ತು ಕೆ.ಹೆಚ್.ಮುನ್ನಿಯಪ್ಪ ಅವರನ್ನು ಸಹ ವಲಯ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. ಬಿ. ಕೆ. ಹರಿಪ್ರಸಾದ್ ಉತ್ತರ ವಲಯದ ವೀಕ್ಷಕರಾಗಿದ್ದಾರೆ. ಇದರ ಕೇಂದ್ರ ಕಚೇರಿ ಅಹಮದಾಬಾದ್ ನಲ್ಲಿದೆ. ಕೆ.ಹೆಚ್ ಮುನಿಯಪ್ಪ ಐದನೇ ವಲಯ ವೀಕ್ಷಕರಾಗಿದ್ದಾರೆ.
ಉಳಿದಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವ್ಹಾಣ್ ಮತ್ತಿತರನ್ನು ಕೂಡಾ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. ವಾಸ್ನಿಕ್ ದಕ್ಷಿಣ ವಲಯ ಉಸ್ತುವಾರಿ ಹೊತ್ತಿದ್ದರೆ, ಪೃಥ್ವಿ ರಾಜ್ ಚವ್ಹಾಣ್ ಅವರನ್ನು ಬರೋಡಾಕ್ಕೆ ನೇಮಕ ಮಾಡಲಾಗಿದೆ. ಮೋಹನ್ ಪ್ರಕಾಶ್ ಸೌರಾಷ್ಟ್ರ ವಲಯದ ವೀಕ್ಷಕರಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ ನಲ್ಲಿ ಎರಡು ದಶಕಗಳಿಂದ ಅಧಿಕಾರದಲ್ಲಿರುವ ಬಿಜೆಪಿಯನ್ನು ಕಿತ್ತೊಗೆಯಲು ಕಾಂಗ್ರೆಸ್ ಶತ ಪ್ರಯತ್ನ ನಡೆಸುತ್ತಿದೆ. 182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 8 ರಂದು ಮತಗಳ ಎಣಿಕೆ ಕಾರ್ಯ ನಡೆದು ಅಂದೇ ಫಲಿತಾಂಶ ಪ್ರಕಟವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


