ಅಂತರ್ಧರ್ಮೀಯ ವಿವಾಹಗಳನ್ನು ಸರ್ಕಾರ ನಿರ್ಬಂಧಿಸುವಂತಿಲ್ಲ: ದೆಹಲಿ ಹೈಕೋರ್ಟ್
ಅಂತರ್ಧರ್ಮೀಯ ವಿವಾಹಗಳನ್ನು ಸರ್ಕಾರ ನಿರ್ಬಂಧಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ನವದೆಹಲಿ: ಅಂತರ್ಧರ್ಮೀಯ ವಿವಾಹಗಳನ್ನು ಸರ್ಕಾರ ನಿರ್ಬಂಧಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಇಬ್ಬರು ವಿದೇಶಿಗರು ತಮ್ಮ ವಿವಾಹವನ್ನು ಸಿಂಧುಗೊಳಿಸಬೇಕು ಹಾಗೂ ಅದನ್ನು 1954 ರ ವಿದೇಶಿ ಕಾಯ್ದೆಯ ಪ್ರಕಾರ, ವಿವಾಹವನ್ನು ನೋಂದಣಿ ಮಾಡಲು ಅನುಮತಿ ನೀಡುವಂತೆ ದೆಹಲಿ ಹೈಕೋರ್ಟ್ ಗೆ ಮನವಿ ಮಾಡಿದ್ದರು.
ಕೆನಡಾದ ಪೌರತ್ವ ಹೊಂದಿದ್ದ ಹಿಂದೂ ಮಹಿಳೆ ಹಾಗೂ ಅಮೇರಿಕನ್ ಪೌರತ್ವ ಹೊಂದಿರುವ ಕ್ರೈಸ್ತ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಯಶ್ವಂತ್ ವರ್ಮಾ, ಈ ಅಭಿಪ್ರಾಯ ಪ್ರಕಟಿಸಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ತಮ್ಮ ಕಕ್ಷಿದಾರರು ದೆಹಲಿಯಲ್ಲಿ 6 ತಿಂಗಳಿನಿಂದ ಇದ್ದು, ಇನ್ನೂ ಹೆಚ್ಚಿನ ಅವಧಿ ಇಲ್ಲಿಯೇ ಇರಲು ಉದ್ದೇಶಿಸಿದ್ದಾರೆ ಹಾಗೂ ವಿಶೇಷ ವಿವಾಹ ಕಾಯ್ದೆ (ಎಸ್ಎಂಎ) ಅಡಿಯಲ್ಲಿ ವಿವಾಹವಾಗಲು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಬೇರೆ ಕಾನೂನುಗಳು ಅಂತರ್ಧರ್ಮೀಯ ವಿವಾಹವನ್ನು ನಿರ್ಬಂಧಿಸುವುದರಿಂದ ವಿಶೇಷ ವಿವಾಹ ಕಾಯ್ದೆಯಡಿ ವಿವಾಹವಾಗುವುದಕ್ಕೆ ಉದ್ದೇಶಿಸಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ. ಅಂತರ್ಧರ್ಮೀಯ ವಿವಾಹಗಳನ್ನು ಸರ್ಕಾರ ನಿರ್ಬಂಧಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದ್ದು, ಮುಂದಿನ ವಿಚಾರಣೆಯನ್ನು ಡಿಸೆಂಬರ್ 15 ಕ್ಕೆ ಮುಂದೂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


