ದೇಶ

ನಾಲ್ಕು ಕಾಲು, ನಾಲ್ಕು ಕೈ ಹೊಂದಿರುವ ಮಗುವಿನ ಬದುಕು ಹಸನಾಗಿಸಿದ ನಟ ಸೋನು ಸೂದ್

ಬಾಲಿವುಡ್ ನಟ ಸೋನು ಸೂದ್ ಮಾನವೀಯ ನೆಲೆಗಟ್ಟಿನಲ್ಲಿ ಇದುವರೆಗೆ ಹಲವರಿಗೆ ನೆರವಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಒಂಟಿ ಕಾಲಿನಲ್ಲಿ ಶಾಲೆಗೆ ತೆರಳುತ್ತಿದ್ದ ಬಾಲಕಿಗೆ ಸ್ಟಂಟ್ ಕಾಲು ಕೊಡಿಸಿ...

ನಾಲ್ಕು ಕಾಲು, ನಾಲ್ಕು ಕೈ ಹೊಂದಿರುವ ಮಗುವಿನ ಬದುಕು ಹಸನಾಗಿಸಿದ ನಟ ಸೋನು ಸೂದ್
ಸೋನು ಸೂದ್ - ಬಾಲಕಿ
Published On :

ನವದೆಹಲಿ: ಬಾಲಿವುಡ್ ನಟ ಸೋನು ಸೂದ್ ಮಾನವೀಯ ನೆಲೆಗಟ್ಟಿನಲ್ಲಿ ಇದುವರೆಗೆ ಹಲವರಿಗೆ ನೆರವಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಒಂಟಿ ಕಾಲಿನಲ್ಲಿ ಶಾಲೆಗೆ ತೆರಳುತ್ತಿದ್ದ ಬಾಲಕಿಗೆ ಸ್ಟಂಟ್ ಕಾಲು ಕೊಡಿಸಿ, ಆಕೆಯ ಬದುಕಿಗೊಂದು ವಿಶ್ವಾಸ ತುಂಬಿದ್ದರು.

ಇದೀಗ ಮತ್ತೊಂದು ಮಗುವಿನ ಬದುಕಿಗೆ ಆಶಾ ಕಿರಣವಾಗಿದ್ದಾರೆ. ಹೌದು ನಾಲ್ಕು ಕಾಲು, ನಾಲ್ಕು ಕೈ ಹೊಂದಿರುವ ಬಿಹಾರದ ಮಗುವಿಗೆ ಸಹಾಯ ಹಸ್ತ ಚಾಚಿದ್ದಾರೆ.

ಚೌಮುಕಿ ಎಂಬ ಮಗು ಹುಟ್ಟುವಾಗಲೇ ನಾಲ್ಕು ಕಾಲು, ನಾಲ್ಕು ಕೈ ಹೊಂದಿತ್ತು. ಮಗುವನ್ನು ಭೇಟಿ ಮಾಡಿದ ಅವರು ಮಗುವಿನ ಶಸ್ತ್ರಚಿಕಿತ್ಸೆಗೆ ಹಣ ನೀಡಿ, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಆ ಮಗುವಿನ ಜೀವನವನ್ನು ಸುಂದರವನ್ನಾಗಿ ಮಾಡಿದ್ದಾರೆ. ಈ ಕುರಿತಾಗಿ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಚೌಮುಖಿ ತನ್ನ ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಆಸ್ಪತ್ರೆಯ ಹಾಸಿಗೆಯ ಮೇಲೆ ವಿಶ್ರಾಂತಿ ಪಡೆಯುತ್ತಿರುವ ಫೋಟೋ ಹಂಚಿಕೊಂಡ ಅವರು, ಚೌಮುಖಿಯೊಂದಿಗಿನ ನನ್ನ ಪ್ರಯಾಣ ಯಶಸ್ವಿಯಾಗಿದೆ. ಚೌಮುಖಿ ನಾಲ್ಕು ಕಾಲುಗಳು ಮತ್ತು ನಾಲ್ಕು ಕೈಗಳೊಂದಿಗೆ ಜನಿಸಿದ ಬಿಹಾರದ ಹುಡುಗಿ. ಯಶಸ್ವಿ ಶಸ್ತ್ರಚಿಕಿತ್ಸೆ ನಂತರ ಈಗ ಅವಳು ತನ್ನ ಮನೆಗೆ ಮರಳಲು ಸಿದ್ಧಳಾಗಿದ್ದಾಳೆ ಎಂದು ಪೋಸ್ಟ್‌ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.