ದೇಶ

ಅನುಮಾನಾಸ್ಪದ ರೀತಿಯಲ್ಲಿ ಫ್ಯಾಷನ್ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲಾ ಶವ ಪತ್ತೆ!

ಫ್ಯಾಷನ್ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲಾ ಇಂದು ಮಧ್ಯಾಹ್ನ ಬಂಜಾರಾ ಹಿಲ್ಸ್‌ನಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಅನುಮಾನಾಸ್ಪದ ರೀತಿಯಲ್ಲಿ ಫ್ಯಾಷನ್ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲಾ ಶವ ಪತ್ತೆ!
ಪ್ರತ್ಯೂಷಾ ಗರಿಮೆಲ್ಲಾ
Published On :

ಹೈದರಾಬಾದ್: ಫ್ಯಾಷನ್ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲಾ ಇಂದು ಮಧ್ಯಾಹ್ನ ಬಂಜಾರಾ ಹಿಲ್ಸ್‌ನಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

35 ವರ್ಷದ ಪ್ರತ್ಯೂಷಾ ಅವರು ಬಂಜಾರ ಹಿಲ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ಫಿಲಂ ನಗರದ ಮನೆಯೊಂದರಲ್ಲಿ ತಂಗಿದ್ದರು. ಶನಿವಾರ ಮಧ್ಯಾಹ್ನ, ಭದ್ರತಾ ತಪಾಸಣೆಗೆ ವೇಳೆ ಅವರು ಪ್ರತಿಕ್ರಿಯಿಸದ ಕಾರಣ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು.

ಬಳಿಕ ಮನೆಯ ಬಾಗಿಲು ಒಡೆದು ಪೊಲೀಸರು ಒಳ ನುಗ್ಗಿದ್ದಾಗ ಸ್ನಾನದಕೋಣೆಯಲ್ಲಿ ಶವ ಪತ್ತೆಯಾಗಿದೆ. ವಾಶ್‌ರೂಮ್‌ನಿಂದ ರಾಸಾಯನಿಕಗಳ ಬಾಟಲಿಯನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Story image

ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದು, ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ದೆಹಲಿಯಲ್ಲಿರುವ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತ್ಯುಷಾ ತನ್ನದೇ ಆದ ಫ್ಯಾಷನ್ ಲೇಬಲ್‌ನ ಸ್ಥಾಪಕರಾಗಿದ್ದರು. ಅವರ ಕೃತಿಗಳು ಪ್ರತ್ಯುಷಾ ಗರಿಮೆಲ್ಲಾ ಎಂಬ ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.