ಸಾಕು ನಾಯಿಗಳು ಕ್ರೂರಿ ಆಗುತ್ತಿರುವುದೇಕೆ? ಬಾಲಕನ ಮೇಲೆ ಪಿಟ್‌ಬುಲ್ ನಾಯಿ ದಾಳಿ: ಗಂಭೀರ ಗಾಯ
13 ವರ್ಷದ ಬಾಲಕನ ಮೇಲೆ ಪಿಟ್‌ಬುಲ್ ನಾಯಿಯೊಂದು ಕ್ರೂರವಾಗಿ ದಾಳಿ ನಡೆಸಿ ಗಂಭೀರವಾಗಿ ಘಾಸಿಗೊಳಿಸಿರುವ ಘಟನೆ ಪಂಜಾಬ್‌ನ ಗುರುದಾಸ್ ಪುರ ಜಿಲ್ಲೆಯ ಕೋಟ್ಲಿ ಭಾನ್ ಸಿಂಗ್ ಗ್ರಾಮದಲ್ಲಿ ನಡೆದಿದೆ.

ಗುರುದಾಸ್ ಪುರ: 13 ವರ್ಷದ ಬಾಲಕನ ಮೇಲೆ ಪಿಟ್‌ಬುಲ್ ನಾಯಿಯೊಂದು ಕ್ರೂರವಾಗಿ ದಾಳಿ ನಡೆಸಿ ಗಂಭೀರವಾಗಿ ಘಾಸಿಗೊಳಿಸಿರುವ ಘಟನೆ ಪಂಜಾಬ್‌ನ ಗುರುದಾಸ್ ಪುರ ಜಿಲ್ಲೆಯ ಕೋಟ್ಲಿ ಭಾನ್ ಸಿಂಗ್ ಗ್ರಾಮದಲ್ಲಿ ನಡೆದಿದೆ.
ಇನ್ನು ಮನೆಯ ಒಡತಿಯನ್ನು ಪಿಟ್‌ಬುಲ್ ನಾಯಿ ದಾಳಿ ನಡೆಸಿ ಕೊಂದಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ.
ಇದನ್ನೂ ಓದಿ: ಲಖನೌ: ಮಗ ಸಾಕಿದ ಪಿಟ್‌ಬುಲ್ ನಾಯಿಯಿಂದಲೇ ತಾಯಿ ಸಾವು!
ಘಟನೆ ವೇಳೆ ತಂದೆ ಜೊತೆಯಲ್ಲಿದ್ದ ಕಾರಣ ಮಗು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮನೆಯವರ ಪ್ರಕಾರ, ತಂದೆ ಮತ್ತು ಹುಡುಗ ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ, ತನ್ನ ಮಾಲೀಕರೊಂದಿಗೆ ಹೊರಗೆ ನಿಂತಿದ್ದ ಪಿಟ್‌ಬುಲ್ ನಾಯಿ ಹುಡುಗನನ್ನು ನೋಡಿ ಬೊಗಳಲು ಪ್ರಾರಂಭಿಸಿತು.
ಶೀಘ್ರದಲ್ಲೇ, ಮಾಲೀಕರು ಆಕಸ್ಮಿಕವಾಗಿ ನಾಯಿಯನ್ನು ಕೈಬಿಟ್ಟರು, ಇದು ಹುಡುಗನ ಮೇಲೆ ದಾಳಿ ಮಾಡಲು ಕಾರಣವಾಯಿತು. ನಂತರ ಮಾಲೀಕರು ನಾಯಿಯನ್ನು ನಿಯಂತ್ರಿಸಿ ಮನೆಗೆ ತೆರಳಿದರು ಎಂದು ಕುಟುಂಬದವರು ತಿಳಿಸಿದ್ದಾರೆ. ಗಾಯಗೊಂಡ ಮಗುವನ್ನು ಚಿಕಿತ್ಸೆಗಾಗಿ ಬಟಾಲದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


