ಸ್ವಾತಂತ್ರ್ಯ ಹೋರಾಟಗಾರರಿಗೆ ಡಿಜಿಟಲ್ ಗೌರವ ಸಲ್ಲಿಸಲು ಜನತೆಗೆ ಪ್ರಧಾನಿ ಮೋದಿ ಕರೆ
ಸ್ವಾತಂತ್ರ್ಯ ಹೋರಾಟಗಾರರಿಗೆ ಡಿಜಿಟಲ್ ಗೌರವ ಸಲ್ಲಿಸುವಂತೆ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಜು.23 ರಂದು ಕರೆ ನೀಡಿದ್ದಾರೆ.

ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರರಿಗೆ ಡಿಜಿಟಲ್ ಗೌರವ ಸಲ್ಲಿಸುವಂತೆ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಜು.23 ರಂದು ಕರೆ ನೀಡಿದ್ದಾರೆ.
ನವದೆಹಲಿಯ ಸೆಂಟ್ರಲ್ ಪಾರ್ಕ್ ನಲ್ಲಿ ಅಳವಡಿಸಲಾಗಿರುವ ಡಿಜಿಟಲ್ ಜ್ಯೋತ್ ಹೆಚ್ಚು ಪ್ರಜ್ವಲಿಸಲು, ಆನ್ ಲೈನ್ ಮೂಲಕ ಸಲ್ಲಿಸುವ ಪ್ರತಿಯೊಂದು ಗೌರವವೂ ಮುಖ್ಯವಾಗಲಿದೆ.
ಸೆಂಟ್ರಲ್ ಪಾರ್ಕ್ ದೆಹಲಿಯಲ್ಲಿ ಸ್ಕೈ ಬೀಮ್ ದೀಪವನ್ನು ಅಳವಡಿಸಲಾಗಿದ್ದು, ಪ್ರತಿ ಬಾರಿ ವ್ಯಕ್ತಿಗಳು ಆನ್ ಲೈನ್ ಮೂಲಕ ಗೌರವ ಸಲ್ಲಿಸಿದಾಗಲೂ ಈ ಡಿಜಿಟಲ್ ಜ್ಯೋತ್ ನ ಪ್ರಕಾಶ ಹೆಚ್ಚಾಗಲಿದೆ. ಆದ ಕಾರಣ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಸ್ವಾತಂತ್ರ್ಯೊತ್ಸವದ ಅಮೃತ ಮಹೋತ್ಸವವನ್ನು ಬಲಪಡಿಸಿ ಎಂದು ಪ್ರಧಾನಿ ಟ್ವೀಟ್ ಮೂಲಕ ಕರೆ ನೀಡಿದ್ದಾರೆ.
ಡಿಜಿಟಲ್ ಜ್ಯೋತಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹಿರೋಗಳನ್ನು ನೆನಪಿನಲ್ಲಿಡಲು ಸಲ್ಲಿಸಲಾಗುತ್ತಿರುವ ವಿಶೇಷವಾದ ಗೌರವವಾಗಿದೆ. digitaltribute.in ಮೂಲಕ ಜನತೆ ಇದರಲ್ಲಿ ಭಾಗವಹಿಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


