ಔರಂಗಬಾದ್, ಉಸ್ಮಾನಾಬಾದ್ ನಗರಗಳಿಗೆ ಮತ್ತೆ ಹೆಸರು ಬದಲಾಯಿಸಿದ ಶಿಂಧೆ ಸರ್ಕಾರ
ಮಹಾರಾಷ್ಟ್ರದಲ್ಲಿನ ಔರಂಗಬಾದ್ ಮತ್ತು ಉಸ್ಮಾನಾಬಾದ್ ನಗರಗಳ ಹೆಸರನ್ನು ಕ್ರಮವಾಗಿ ಛತ್ರಪತಿ ಸಾಂಬಾಜಿನಗರ ಮತ್ತು ಧಾರಶಿವ್ ಎಂದು ಮರು ನಾಮಕರಣ ಮಾಡಲು ಏಕನಾಥ್ ಶಿಂಧೆ ನೇತೃತ್ವದ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಮುಂಬೈ: ಮಹಾರಾಷ್ಟ್ರದಲ್ಲಿನ ಔರಂಗಬಾದ್ ಮತ್ತು ಉಸ್ಮಾನಾಬಾದ್ ನಗರಗಳ ಹೆಸರನ್ನು ಕ್ರಮವಾಗಿ ಛತ್ರಪತಿ ಸಾಂಬಾಜಿನಗರ ಮತ್ತು ಧಾರಶಿವ್ ಎಂದು ಮರು ನಾಮಕರಣ ಮಾಡಲು ಏಕನಾಥ್ ಶಿಂಧೆ ನೇತೃತ್ವದ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಕಳೆದ ತಿಂಗಳು ಉದ್ಧವ್ ಠಾಕ್ರೆ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಔರಂಗಬಾದ್ ಗೆ ಸಾಂಬಾಜಿನಗರ ಎಂದು ಹೆಸರಿಡಲು ತೀರ್ಮಾನಿಸಲಾಗಿತ್ತು. ಆದರೆ, ಶಿಂಧೆ ಸರ್ಕಾರ ಇಂದು ಮತ್ತೆ ಛತ್ರಪತಿ ಎಂಬ ಹೆಸರನ್ನು ಅದರಲ್ಲಿ ಸೇರಿಸಿದೆ.
ಈ ನಗರಗಳಿಗೆ ಉದ್ದವ್ ಠಾಕ್ರೆ ನೇತೃತ್ವದ ಸರ್ಕಾರ ಹೆಸರು ಮರು ನಾಮಕರಣ ಮಾಡಲು ತೆಗೆದುಕೊಂಡಿರುವ ತೀರ್ಮಾನ ಅಕ್ರಮವಾಗಿದೆ ಎಂದು ಜೂನ್ 30 ರಂದು ಏಕನಾಥ್ ಶಿಂಧೆ ಮತ್ತು ದೇವೇಂದ್ರ ಫಡ್ನವೀಸ್ ಅಧಿಕಾರ ವಹಿಸಿಕೊಂಡಾಗ ಹೇಳಿದ್ದರು.
ಆದಾಗ್ಯೂ, ಈಗ ಮತ್ತೆ ಹೆಸರನ್ನು ಬದಲಾಯಿಸಲಾಗಿದೆ. ಪ್ರಸ್ತುತ ಏಕನಾಥ್ ಸಿಂಧೆ ಮತ್ತು ಫಡ್ನವೀಸ್ ಮಾತ್ರ ಸಂಪುಟದಲ್ಲಿದ್ದು, ಅದು ಇನ್ನೂ ವಿಸ್ತರಣೆಯಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


