ಎರಡನೇ ಮದುವೆಗೆ ಅನುಮತಿ ಕಡ್ಡಾಯ: ಬಿಹಾರ ಸರ್ಕಾರ
ಬಿಹಾರ ಸರ್ಕಾರದ ಉದ್ಯೋಗಿಗಳು ಎರಡನೇ ಬಾರಿಗೆ ಮದುವೆಯಾಗಲು ಬಯಸಿದ್ದಲ್ಲಿ ತಮ್ಮ ಇಲಾಖೆಗಳಿಗೆ ಸೂಚಿಸಬೇಕು ಮತ್ತು ಅಗತ್ಯ ಅನುಮತಿಯನ್ನು ಪಡೆದ ನಂತರವೇ ಮುಂದುವರಿಯಬೇಕು ಎಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಪಾಟ್ನಾ: ಬಿಹಾರ ಸರ್ಕಾರದ ಉದ್ಯೋಗಿಗಳು ಎರಡನೇ ಬಾರಿಗೆ ಮದುವೆಯಾಗಲು ಬಯಸಿದ್ದಲ್ಲಿ ತಮ್ಮ ಇಲಾಖೆಗಳಿಗೆ ಸೂಚಿಸಬೇಕು ಮತ್ತು ಅಗತ್ಯ ಅನುಮತಿಯನ್ನು ಪಡೆದ ನಂತರವೇ ಮುಂದುವರಿಯಬೇಕು ಎಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಎಲ್ಲಾ ಸರ್ಕಾರಿ ಅಧಿಕಾರಿಗಳು ತಮ್ಮ ವೈವಾಹಿಕ ಸ್ಥಿತಿಯ ಬಗ್ಗೆ ತಿಳಿಸಬೇಕು ಮತ್ತು ಅಗತ್ಯ ಅನುಮತಿಯನ್ನು ಪಡೆದ ನಂತರವೇ ಎರಡನೇ ವಿವಾಹಕ್ಕೆ ಅರ್ಹರಾಗಬೇಕೆಂದು ರಾಜ್ಯ ಸರ್ಕಾರವು ಹೊಸ ಅಧಿಸೂಚನೆಯಲ್ಲಿ ಹೇಳಿದೆ.
ಅಧಿಸೂಚನೆಯ ಪ್ರಕಾರ, ಎರಡನೇ ಬಾರಿಗೆ ಮದುವೆಯಾಗಲು ಯೋಜಿಸುವ ಯಾವುದೇ ಉದ್ಯೋಗಿ ಮೊದಲು ಸಂಗಾತಿಯಿಂದ ವಿಚ್ಛೇದನ ಪಡೆಯಬೇಕು ಮತ್ತು ಸಂಬಂಧಿಸಿದ ಇಲಾಖೆಗೆ ತಿಳಿಸಬೇಕು. ಉದ್ಯೋಗಿಯ ಮೊದಲ ಪತ್ನಿ ಅಥವಾ ಪತಿ ವಿರೋಧಿಸಿದರೆ, ಎರಡನೇ ಪತ್ನಿ ಅಥವಾ ಪತಿಗೆ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ನಿರಾಕರಿಸಲಾಗುತ್ತದೆ ಎಂದು ಹೇಳಿದೆ.
ಇದನ್ನೂ ಓದಿ: ತೆರೆಗೆ ಬರಲು ಸಜ್ಜಾಗುತ್ತಿದೆ ಅಟಲ್ ಬಿಹಾರಿ ವಾಜಪೇಯಿ ಸಿನಿಮಾ, ಪ್ರಮುಖ ಪಾತ್ರಧಾರಿ ನಟನ ಹುಡುಕಾಟದಲ್ಲಿ ನಿರ್ಮಾಪಕರು
ಏತನ್ಮಧ್ಯೆ, ಸರ್ಕಾರಿ ನೌಕರನು ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯದೆ ಎರಡನೇ ಮದುವೆಯಾಗಿ ಸೇವಾ ಅವಧಿಯಲ್ಲಿ ಮರಣಹೊಂದಿದರೆ, ಅವನ ಅಥವಾ ಅವಳ ಎರಡನೇ ಹೆಂಡತಿ/ಪತಿ ಮತ್ತು ಅವರ ಮಕ್ಕಳು ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ಅರ್ಹರಾಗಿರುವುದಿಲ್ಲ. ರಾಜ್ಯ ಸರ್ಕಾರ ಮೊದಲ ಪತ್ನಿಯ ಮಕ್ಕಳಿಗೆ ಆದ್ಯತೆ ನೀಡಲಿದೆ ಎಂದು ತಿಳಿಸಿದೆ.
ಎಲ್ಲಾ ವಿಭಾಗೀಯ ಆಯುಕ್ತರು, ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ), ಡಿಜಿಪಿ ಹೋಮ್ ಗಾರ್ಡ್, ಡಿಜಿಪಿ ಕಾರಾಗೃಹ ಮತ್ತು ಸಂಬಂಧಪಟ್ಟ ಪ್ರತಿಯೊಬ್ಬ ಅಧಿಕಾರಿಯನ್ನು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಜಾರಿಗೊಳಿಸಲು ಸರ್ಕಾರ ಸೂಚಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


