ದೇಶ

2003 ಮಾನವ ಕಳ್ಳಸಾಗಣೆ ಪ್ರಕರಣ: ಪಂಜಾಬಿ ಗಾಯಕ ದಲೇರ್ ಮೆಹೆಂದಿಗೆ ಎರಡು ವರ್ಷ ಜೈಲು

2003 ರ ಮಾನವ ಕಳ್ಳಸಾಗಣೆ ಪ್ರಕರಣ ಸಂಬಂಧ ಪಂಜಾಬಿ ಗಾಯಕ ದಲೇರ್ ಮೆಹೆಂದಿ ಅವರಿಗೆ ಪಟಿಯಾಲಾ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಘೋಷಿಸಿದೆ.

2003 ಮಾನವ ಕಳ್ಳಸಾಗಣೆ ಪ್ರಕರಣ: ಪಂಜಾಬಿ ಗಾಯಕ ದಲೇರ್ ಮೆಹೆಂದಿಗೆ ಎರಡು ವರ್ಷ ಜೈಲು
ಪಂಜಾಬಿ ಗಾಯಕ ದಲೇರ್ ಮೆಹೆಂದಿ
Published On :

ನವದೆಹಲಿ: 2003 ರ ಮಾನವ ಕಳ್ಳಸಾಗಣೆ ಪ್ರಕರಣ ಸಂಬಂಧ ಪಂಜಾಬಿ ಗಾಯಕ ದಲೇರ್ ಮೆಹೆಂದಿ ಅವರಿಗೆ ಪಟಿಯಾಲಾ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಘೋಷಿಸಿದೆ.

ಪಂಜಾಬಿ ಗಾಯಕ ದಲೇರ್ ಮೆಹೆಂದಿಗೆ ಅವರ 15 ವರ್ಷಗಳಷ್ಟು ಹಳೆಯ ಮಾನವ ಕಳ್ಳಸಾಗಣೆ ಪ್ರಕರಣದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ ಗಾಯಕನನ್ನು ಬಂಧಿಸಿ ಜೈಲಿಗೆ ಕಳುಹಿಸಿದೆ. ಪಟಿಯಾಲದ ಜಿಲ್ಲಾ ನ್ಯಾಯಾಲಯವು 2003ರ ಹಿಂದಿನ ಅಕ್ರಮ ವಲಸೆ ದಂಧೆ ಪ್ರಕರಣದಲ್ಲಿ ಪಂಜಾಬಿ ಗಾಯಕ ಫಲೇರ್ ಮೆಹಂದಿ ಶಿಕ್ಷೆಯನ್ನು ಎತ್ತಿಹಿಡಿದಿದೆ.

15 ವರ್ಷಗಳ ನಂತರ ಆದೇಶವನ್ನು ಪ್ರಕಟಿಸಿದ ಪಟಿಯಾಲ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಚ್.ಎಸ್.ಗ್ರೆವಾಲ್ ಗಾಯಕನನ್ನು ತಕ್ಷಣವೇ ಬಂಧಿಸುವಂತೆ ಆದೇಶಿಸಿದರು.

ನ್ಯಾಯಾಲಯವು ದಲೇರ್ ಮೆಹೆಂದಿಯನ್ನು ಅಪರಾಧಿ ಎಂದು ಘೋಷಿಸಿತು ಮತ್ತು ತೀರ್ಪು ಪ್ರಕಟಿಸಿತು. ಪ್ರಕರಣವು 2003 ರ ಹಿಂದಿನದು ಮತ್ತು ದಲೇರ್ ಮೆಹಂದಿ ಮತ್ತು ಅವರ ಸಹೋದರ ಶಂಶೇರ್ ಸಿಂಗ್ ವಿರುದ್ಧ ಒಟ್ಟು 31 ಪ್ರಕರಣಗಳನ್ನು ದಾಖಲಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.