ದೇಶ

ಉತ್ತರ ಪ್ರದೇಶ: ವರುಣ ದೇವರ ಒಲಿಕೆಗಾಗಿ ಬಿಜೆಪಿ ಶಾಸಕನಿಗೆ ಮಹಿಳೆಯರಿಂದ ಕೆಸರಿನ ಸ್ನಾನ!

ಪೂರ್ವ ಉತ್ತರ ಪ್ರದೇಶದಲ್ಲಿ ಮುಂಗಾರು ಕೈಕೊಟ್ಟಿದ್ದು, ಜನತೆ ಕಂಗಾಲಾಗಿದ್ದು ವರುಣ ದೇವನ ಕೃಪೆಗೆ ಪ್ರಾರ್ಥಿಸುತ್ತಿದ್ದಾರೆ.

ಉತ್ತರ ಪ್ರದೇಶ: ವರುಣ ದೇವರ ಒಲಿಕೆಗಾಗಿ ಬಿಜೆಪಿ ಶಾಸಕನಿಗೆ ಮಹಿಳೆಯರಿಂದ ಕೆಸರಿನ ಸ್ನಾನ!
ಬಿಜೆಪಿ ಶಾಸಕನಿಗೆ ಮಹಿಳೆಯರಿಂದ ಕೆಸರಿನ ಸ್ನಾನ!
Published On :

ಮಹಾರಾಜ್ ಗಂಜ್: ಪೂರ್ವ ಉತ್ತರ ಪ್ರದೇಶದಲ್ಲಿ ಮುಂಗಾರು ಕೈಕೊಟ್ಟಿದ್ದು, ಜನತೆ ಕಂಗಾಲಾಗಿದ್ದು ವರುಣ ದೇವನ ಕೃಪೆಗೆ ಪ್ರಾರ್ಥಿಸುತ್ತಿದ್ದಾರೆ. 

ಇನ್ನು ಮಹಾರಾಜ್ ಗಂಜ್ ನ ಮಹಿಳೆಯರು ಮಳೆಗಾಗಿ ವಿಚಿತ್ರವಾದ ಪ್ರಾರ್ಥನೆ ಸಲ್ಲಿಸಿದ್ದಾರೆ. ಅದೇನೆಂದರೆ ಶಾಸಕನ ಮೇಲೆ ಕೆಸರಿನ ನೀರನ್ನು ಸುರಿಯುವುದಾಗಿದೆ.

ಬಿಜೆಪಿ ಶಾಸಕ ಹಾಗೂ ನಗರಸಭೆ ಮುಖ್ಯಸ್ಥರಿಗೆ ವರುಣ ದೇವನನ್ನು ಒಲಿಸಿಕೊಳ್ಳುವುದಕ್ಕಾಗಿ ಕೆಸರಿನ ನೀರನ್ನು ಸುರಿಯಲಾಗಿದೆ.

ಸ್ಥಳೀಯ ಮೂಲಗಳ ಪ್ರಕಾರ ಮಹಿಳೆಯರು ಬಿಜೆಪಿ ಶಾಸಕ ಜೈ ಮಂಗಲ್ ಕನೌಜಿಯಾ ಹಾಗೂ ನಗರಸಭೆ ಅಧ್ಯಕ್ಶರಾದ ಕೃಷ್ಣ ಗೋಪಾಲ್ ಜೈಸ್ವಾಲ್ ಅವರಲ್ಲಿ ಮನವಿ ಮಾಡಿದ್ದು ಈ ಪ್ರಾರ್ಥನೆಯ ಭಾಗವಾಗಿರಬೇಕೆಂದು ಕೇಳಿಕೊಂಡಿದ್ದಾರೆ. ಮಹಿಳೆಯರ ಮನವಿಯನ್ನು ಮನ್ನಿಸಿರುವ ಇಬ್ಬರೂ ನಾಯಕರೂ ತಮ್ಮ ಮೇಲೆ ಕೆಸರಿನ ನೀರನ್ನು ಹಾಕಿಸಿಕೊಂಡಿದ್ದಾರೆ.

ಈ ಪ್ರದೇಶದ ಗಣ್ಯರು ಕೆಸರಿನಲ್ಲಿ ಸ್ನಾನ ಮಾಡಿದರೆ, ವರುಣ ದೇವ ಸಂತೃಪ್ತಗೊಂಡು ಮಳೆ ಬರಲಿದೆ ಎಂಬುದು ಸ್ಥಳೀಯರ ನಂಬಿಕೆಯಾಗಿದೆ. ಅದರಂತೆಯೇ ಮಹಿಳೆಯರು ಈ ಇಬ್ಬರೂ ನಾಯಕರ ಮೇಲೆ ಕೆಸರಿನ ನೀರನ್ನು ಹಾಕಿದ ಮೇಲೆ ವರುಣ ದೇವನನ್ನು ಒಲಿಸಿಕೊಳ್ಳುವುದಕ್ಕಾಗಿ ಜಾನಪದ ಗೀತೆಗಳನ್ನು ಹಾಡಿದ್ದಾರೆ. ಈ ಪ್ರದೇಶದಲ್ಲಿ ಮಳೆಯ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಭತ್ತದ ಬೆಳೆ ಒಣಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.