24 ದಿನಗಳಲ್ಲಿ 9ನೇ ಘಟನೆ: ನೋಸ್ ವೀಲ್ಹ್ ದೋಷದಿಂದ ಸ್ಪೈಸ್‌ಜೆಟ್‌ನ ದುಬೈ-ಮಧುರೈ ವಿಮಾನ ವಿಳಂಬ
ಬೋಯಿಂಗ್ ಬಿ737 ಮ್ಯಾಕ್ಸ್ ವಿಮಾನದ ನೋಸ್ ವೀಲ್ಹ್ ದೋಷದಿಂದ ಸ್ಪೈಸ್‌ಜೆಟ್‌ನ ದುಬೈ-ಮಧುರೈ ವಿಮಾನ ತಡವಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ನವದೆಹಲಿ: ಬೋಯಿಂಗ್ ಬಿ737 ಮ್ಯಾಕ್ಸ್ ವಿಮಾನದ ನೋಸ್ ವೀಲ್ಹ್ ದೋಷದಿಂದ ಸ್ಪೈಸ್‌ಜೆಟ್‌ನ ದುಬೈ-ಮಧುರೈ ವಿಮಾನ ತಡವಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರದ ಘಟನೆಯು ಕಳೆದ 24 ದಿನಗಳಲ್ಲಿ ಸ್ಪೈಸ್‌ಜೆಟ್ ವಿಮಾನದಲ್ಲಿ ತಾಂತ್ರಿಕ ದೋಷದ ಒಂಬತ್ತನೇ ಘಟನೆಯಾಗಿದೆ. ಜೂನ್ 19ರಿಂದ ಸ್ಪೈಸ್ ಜೆಟ್ ನ ವಿಮಾನದಲ್ಲಿ ಎಂಟು ತಾಂತ್ರಿಕ ಅಸಮರ್ಪಕ ಘಟನೆಗಳ ವರದಿಯಾಗಿದ್ದರಿಂದ ಜುಲೈ 6ರಂದು DGCA ಸ್ಪೈಸ್‌ಜೆಟ್‌ಗೆ ಶೋಕಾಸ್ ನೋಟಿಸ್ ನೀಡಿತು.
ಸುರಕ್ಷಿತ, ಪರಿಣಾಮಕಾರಿ ಮತ್ತು ವಿಶ್ವಾಸಾರ್ಹ ವಾಯು ಸೇವೆಗಳನ್ನು ಸ್ಥಾಪಿಸಲು ವಿಮಾನ ಸಂಸ್ಥೆ ವಿಫಲವಾಗಿದೆ ಎಂದು ವಿಮಾನಯಾನ ನಿಯಂತ್ರಕ ಹೇಳಿದೆ. ಸೋಮವಾರ, ವಿಟಿ-ಎಸ್‌ಜೆಡ್‌ಕೆ ನೋಂದಣಿ ಸಂಖ್ಯೆಯ ಬೋಯಿಂಗ್ ಬಿ 737 ಮ್ಯಾಕ್ಸ್ ವಿಮಾನವು ಮಂಗಳೂರು-ದುಬೈ ವಿಮಾನವನ್ನು ನಿರ್ವಹಿಸಿತು ಎಂದು ಡಿಜಿಸಿಎ ಅಧಿಕಾರಿಗಳು ಹೇಳಿದರು.
ಈ ವಿಷಯದ ಕುರಿತು ಸ್ಪೈಸ್‌ಜೆಟ್ ವಕ್ತಾರರು, '2022 ಜುಲೈ 11ರಂದು ಸ್ಪೈಸ್‌ಜೆಟ್ ಫ್ಲೈಟ್ SG23 ಕೊನೆಯ ಕ್ಷಣದಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ದುಬೈನಿಂದ ಮಧುರೈಗೆ ಕಾರ್ಯ ನಿರ್ವಹಿಸುವುದು ವಿಳಂಬವಾಯಿತು. ತಕ್ಷಣವೇ ಪರ್ಯಾಯ ವಿಮಾನವನ್ನು ವ್ಯವಸ್ಥೆಗೊಳಿಸಲಾಯಿತು ಮತ್ತು ಪ್ರಯಾಣಿಕರನ್ನು ಭಾರತಕ್ಕೆ ಕರೆತರಲಾಯಿತು ಎಂದರು.
'ಯಾವುದೇ ವಿಮಾನಯಾನ ಸಂಸ್ಥೆಯಲ್ಲೂ ವಿಮಾನ ವಿಳಂಬಗಳು ಸಂಭವಿಸಬಹುದು. ಈ ವಿಮಾನದಲ್ಲಿ ಯಾವುದೇ ಘಟನೆ ಅಥವಾ ಸುರಕ್ಷತೆಯ ಭಯವಿಲ್ಲ ಎಂದು ವಕ್ತಾರರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


