ಅಮರನಾಥ ಮೇಘಸ್ಫೋಟ ದುರಂತ: ಈಗ ಕೇದಾರನಾಥ ಯಾತ್ರೆ ಸ್ಥಗಿತ!
ಅಮರನಾಥ ಗುಹಾ ದೇಗುಲದ ಬಳಿ ಸಂಭವಿಸಿದ ಮೇಘಾಸ್ಫೋಟದಿಂದಾಗಿ ಹಠಾತ್ ಸಂಭವಿಸಿದ ಪ್ರವಾಹದಲ್ಲಿ 16 ಮಂದಿ ಮೃತಪಟ್ಟು ಹಲವರು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೇದಾರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.

ಅಮರನಾಥ ಗುಹಾ ದೇಗುಲದ ಬಳಿ ಸಂಭವಿಸಿದ ಮೇಘಾಸ್ಫೋಟದಿಂದಾಗಿ ಹಠಾತ್ ಸಂಭವಿಸಿದ ಪ್ರವಾಹದಲ್ಲಿ 16 ಮಂದಿ ಮೃತಪಟ್ಟು ಹಲವರು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೇದಾರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.
ಸೋನಪ್ರಯಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಹಾಗೂ ಯಾತ್ರಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರುದ್ರಪ್ರಯಾಗ ಜಿಲ್ಲಾಡಳಿತ ತಿಳಿಸಿದೆ.
ಅಮರನಾಥ ಗುಹಾ ದೇಗುಲದ ಸಮೀಪವಿರುವ ಟೆಂಟ್‌ಗಳು ಮತ್ತು ಸಮುದಾಯ ಅಡುಗೆಮನೆಗಳು ಶುಕ್ರವಾರ ಸಂಜೆ ಸುರಿದ ಮಳೆಯ ನಂತರ ನೀರಿನ ರಭಸದಿಂದ ಹರಿದು ಬಂದ ಮಣ್ಣು ಮತ್ತು ಕಲ್ಲುಗಳಿಂದ ಜಖಂಗೊಂಡಿವೆ. ಇದು ಹೆಚ್ಚು ಸ್ಥಳೀಕರಣಗೊಂಡ ಮೋಡವಾಗಿತ್ತು. ಅಂತಹ ಮಳೆ ಈ ವರ್ಷದ ಆರಂಭದಲ್ಲಿಯೂ ಇಂತಹ ಘಟನೆಗಳು ಸಂಭವಿಸಿತ್ತು.
ಅಮರನಾಥ ಗುಹೆಯ ಬಳಿ ಹಠಾತ್ ಪ್ರವಾಹದ ನಂತರ ಅಲ್ಲಿ ಸಿಲುಕಿದ್ದ 15 ಸಾವಿರ ಯಾತ್ರಿಕರನ್ನು ಪಂಜತರ್ನಿ ಮೂಲ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


