ಮತ್ತೆ ಸೋಂಕು ಹೆಚ್ಚು ಸಾಧ್ಯತೆ; BA.2.75 ಇತರೆ ಓಮಿಕ್ರಾನ್ ಉಪ ತಳಿಗಳ ನಿಗಾವಣೆ ಅಗತ್ಯ: ಡಾ. ಎನ್.ಕೆ. ಅರೋರಾ
ಕಳೆದ ಆರು ತಿಂಗಳಲ್ಲಿ ದೇಶದಲ್ಲಿ ಆತಂಕಕಾರಿ ಹೊಸ ಕೋವಿಡ್ ರೂಪಾಂತರಿ ವರದಿಯಾಗಿಲ್ಲ. ಆದಾಗ್ಯೂ, ಕೆಲವು ಓಮಿಕ್ರಾನ್ ಉಪ ತಳಿಗಳು ಮತ್ತೆ ಸೋಂಕನ್ನು ಪ್ರಚೋದಿಸುವುದರಿಂದ ಅವುಗಳ ಪ್ರಸರಣ ಕುರಿತ ನಿಕಟ ಮೇಲ್ವಿಚಾರಣೆ ಅಗತ್ಯವಾಗಿದೆ ಎಂದು ಪ್ರತಿರಕ್ಷಣೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ ಮುಖ್ಯಸ್ಥ ಡಾ.ಎನ್. ಕೆ ಅರೋರಾ ಹೇಳಿದ್ದಾರೆ.

ನವದೆಹಲಿ: ಕಳೆದ ಆರು ತಿಂಗಳಲ್ಲಿ ದೇಶದಲ್ಲಿ ಆತಂಕಕಾರಿ ಹೊಸ ಕೋವಿಡ್ ರೂಪಾಂತರಿ ವರದಿಯಾಗಿಲ್ಲ. ಆದಾಗ್ಯೂ, ಕೆಲವು ಓಮಿಕ್ರಾನ್ ಉಪ ತಳಿಗಳು ಮತ್ತೆ ಸೋಂಕನ್ನು ಪ್ರಚೋದಿಸುವುದರಿಂದ ಅವುಗಳ ಪ್ರಸರಣ ಕುರಿತ ನಿಕಟ ಮೇಲ್ವಿಚಾರಣೆ ಅಗತ್ಯವಾಗಿದೆ ಎಂದು ಪ್ರತಿರಕ್ಷಣೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ ಮುಖ್ಯಸ್ಥ ಡಾ.ಎನ್. ಕೆ ಅರೋರಾ ಹೇಳಿದ್ದಾರೆ.
ದೇಶದಾದ್ಯಂತ, ಓಮಿಕ್ರಾನ್‌ನ BA.2 ಮತ್ತು BA.2.38 ಸೇರಿದಂತೆ ಅದರ ಉಪ ತಳಿಗಳು ಪ್ರಬಲವಾದ ತಳಿಗಳಾಗಿವೆ. ಇತ್ತೀಚೆಗೆ, BA.4 ಮತ್ತು BA.5 ಕೆಲವು ಶೇಕಡಾ 10 ಮಾದರಿಗಳಲ್ಲಿ ಕಂಡುಬಂದಿವೆ. ಬಿಎ.2.75 ಕೂಡ ಪತ್ತೆಯಾಗಿದೆ. ಅವುಗಳಲ್ಲಿ ಹಲವು ಮರುಸೋಂಕನ್ನು ಪ್ರಚೋದಿಸಬಹುದು, ಆದರೆ ಅವು ತೀವ್ರವಾದ ಕಾಯಿಲೆಗೆ ಸಂಬಂಧಿಸಿಲ್ಲ. ಒಟ್ಟಾರೆಯಾಗಿ, ಉಪ-ತಳಿಗಳು ವಿಕಸನಗೊಳ್ಳುತ್ತಿವೆ ಮತ್ತು ಅವುಗಳ ಪ್ರಸರಣವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಬೇಕಾಗಿದೆ" ಎಂದು ಡಾ ಅರೋರಾ ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಡಾ. ಅರೋರಾ ಪ್ರಕಾರ ಪ್ರಸ್ತುತದಲ್ಲಿನ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ ಮೂರನೇ ಅಲೆಯ ಭಾಗವಾಗಿದೆ. ನಾಲ್ಕನೇ ಅಲೆ ಅಲ್ಲ. ಇದಕ್ಕೆ ಇನ್ನೊಂದು ಅಯಾಮವಿದೆ. ಹೆಚ್ಚಿನ ಜನಸಾಂದ್ರತೆ ಹೊಂದಿರುವ ಮಹಾನಗರಗಳು ಮತ್ತು ದೊಡ್ಡ ನಗರಗಳಿಗೆ ಪ್ರಕರಣಗಳು ಹೆಚ್ಚಾಗಿ ಸೀಮಿತವಾಗಿವೆ.
ಇತ್ತೀಚೆಗೆ, ಸಣ್ಣ ಪಟ್ಟಣಗಳಲ್ಲಿಯೂ ಏರಿಕೆಯಾಗಿದೆ. ಜನಸಂಖ್ಯಾ ಸಾಂದ್ರತೆ, ಹೆಚ್ಚಿದ ಪ್ರಯಾಣ ಮತ್ತು ಸಭೆ, ಸಮಾರಂಭಗಳು, ಜೊತೆಗೆ ಕೋವಿಡ್ ಶಿಷ್ಟಾಚಾರ ಪಾಲಿಸದಿರುವುದು ಮತ್ತಿತರ ಕಾರಣಗಳಿಂದ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಮುಖ ವಿಷಯವೆಂದರೆ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ರೋಗಿಗಳು ಲಸಿಕೆ ತೆಗೆದುಕೊಂಡಿದ್ದಾರೆ. ಮತ್ತು ಸಾಮಾನ್ಯ-ಶೀತ ಅಥವಾ ಸೌಮ್ಯವಾದ ಇನ್ಫ್ಲುಯೆನ್ಸ ತರಹದ ಕಾಯಿಲೆಗಳನ್ನು ಹೊಂದಿರುತ್ತಾರೆ ಎಂದು ಅವರು ಹೇಳಿದರು.
ಈ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಭಾರತ ಮತ್ತು ಇತರ ದೇಶಗಳಲ್ಲಿ ಪತ್ತೆಯಾದ ಓಮಿಕ್ರಾನ್ ರೂಪಾಂತವಾದ BA.2.75 ಉಪ ತಳಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಗಮನಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ BA.2.75 ಎಂದು ಕರೆಯಲ್ಪಡುವ ಉಪ- ತಳಿ ಹೊರಹೊಮ್ಮಿದೆ. ಇದು ಭಾರತದಲ್ಲಿ ಮೊದಲು ವರದಿಯಾಗುತ್ತಿದ್ದು, ತದನಂತರ ಸುಮಾರು 10 ಇತರ ದೇಶಗಳಲ್ಲಿ ವರದಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


