ದೇಶ

ಕೇರಳ: ರಾಹುಲ್ ಗಾಂಧಿಯ ಮುಖ ಸವರಿದ ಮಹಿಳೆ, ಅಕ್ಕರೆಯ ಅಪ್ಪುಗೆ ನೀಡಿದ 'ಕೈ' ಸಂಸದ- ವಿಡಿಯೋ

ಸ್ವಕ್ಷೇತ್ರ ಕೇರಳದ ವಯನಾಡ್ ಗೆ ರಾಹುಲ್ ಗಾಂಧಿ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ ತಟ್ಟೆಯಿಂದ ಮಹಿಳೆಯೊಬ್ಬರಿಗೆ ಆಹಾರವನ್ನು ನೀಡಿದ್ದು, ನಂತರ ವಯಸ್ಸಾದ ಮಹಿಳೆಯನ್ನು ಅಕ್ಕರೆಯಿಂದ ತಬ್ಬಿಕೊಳ್ಳುತ್ತಿರುವ ವಿಡಿಯೋವೊಂದನ್ನು ಕಾಂಗ್ರೆಸ್ ಹಂಚಿಕೊಂಡಿದೆ.

ಕೇರಳ: ರಾಹುಲ್ ಗಾಂಧಿಯ ಮುಖ ಸವರಿದ ಮಹಿಳೆ, ಅಕ್ಕರೆಯ ಅಪ್ಪುಗೆ ನೀಡಿದ 'ಕೈ' ಸಂಸದ- ವಿಡಿಯೋ
ರಾಹುಲ್ ಗಾಂಧಿ
Published On :

ವಯನಾಡ್: ಸ್ವಕ್ಷೇತ್ರ ಕೇರಳದ ವಯನಾಡ್ ಗೆ ರಾಹುಲ್ ಗಾಂಧಿ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ ತಟ್ಟೆಯಿಂದ ಮಹಿಳೆಯೊಬ್ಬರಿಗೆ ಆಹಾರವನ್ನು ನೀಡಿದ್ದು, ನಂತರ ವಯಸ್ಸಾದ ಮಹಿಳೆಯನ್ನು ಅಕ್ಕರೆಯಿಂದ ತಬ್ಬಿಕೊಳ್ಳುತ್ತಿರುವ ವಿಡಿಯೋವೊಂದನ್ನು ಕಾಂಗ್ರೆಸ್ ಹಂಚಿಕೊಂಡಿದೆ. ಕೆಫೆಯೊಂದರಲ್ಲಿ ಹಿರಿಯ ನಾಯಕ ಕೆ. ಸಿ. ವೇಣುಗೋಪಾಲ್ ಅವರೊಂದಿಗೆ ಕುಳಿತಿರುವ ರಾಹುಲ್ ಗಾಂಧಿಯ ಈ ಹೃದಯ ಸ್ಪರ್ಶಿ ಕ್ಷಣ ಕ್ಯಾಮರಾದಲ್ಲಿ ಸೆರೆಯಾಗಿದೆ.

'' ಅವರು ನಮ್ಮೊಂದಿಗೆ ಏಕೆ ಕುಳಿತುಕೊಳ್ಳಬಾರದು.. ಅವರಿಗೆ ಚಹಾ ಬೇಕೆ? ಎಂದು ಕೆಸಿ ವೇಣುಗೋಪಾಲ್ ಅವರನ್ನು ರಾಹುಲ್ ಪ್ರಶ್ನಿಸಿದ್ದಾರೆ. ವೇಣುಗೋಪಾಲ್ ಅದನ್ನು ಅನುವಾದಿಸಿ ನಂತರ ಮಹಿಳೆಗೆ ತನ್ನ ತಟ್ಟೆಯಿಂದ ಆಹಾರವನ್ನು ನೀಡುತ್ತಾರೆ. ರಾಹುಲ್ ಗಾಂಧಿ ಕೂಡಾ ತಮ್ಮ ತಟ್ಟೆಯಿಂದ ಆಹಾರ ತೆಗೆದು ಮಹಿಳೆಗೆ ನೀಡುತ್ತಾರೆ. ಈ ವೇಳೆ ಮಹಿಳೆ ರಾಹುಲ್ ಗಾಂಧಿಯ ಮುಖವನ್ನು ಪ್ರೀತಿಯಿಂದ ಸವರುತ್ತಾರೆ. ಆಗ ರಾಹುಲ್ ಗಾಂಧಿ ಕೂಡಾ ಅವರನ್ನು ಅಕ್ಕರೆಯಿಂದ ತಬ್ಬಿಕೊಳ್ಳುತ್ತಾರೆ.

ಲಿಪಿಯಿಲ್ಲದ ಶುದ್ಧ ಪ್ರೀತಿ ಮತ್ತು ಆರಾಧನೆ. ನಿಜವಾದ ನಾಯಕನು ತನ್ನ ಜನರು ಮತ್ತು ದೇಶಕ್ಕಾಗಿ ನಿಸ್ವಾರ್ಥವಾಗಿ ಕೆಲಸ ಮಾಡುವಾಗ ಮತ್ತು ಹೋರಾಡಿದಾಗ ಇಂತಹದನ್ನು ಪಡೆಯುತ್ತಾನೆ ಎಂದು ಕಾಂಗ್ರೆಸ್ ಟ್ವೀಟರ್ ನಲ್ಲಿ ವಿಡಿಯೋ ಫೋಸ್ಟ್ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.