ಮೆಟ್ಟಿಲುಗಳ ಮೇಲೆ ಬಿದ್ದ ಲಾಲು ಪ್ರಸಾದ್ ಯಾದವ್: ಭುಜದ ಮೂಳೆ ಮುರಿತ
ಆರ್ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಪಾಟ್ನಾದಲ್ಲಿರುವ ರಾಬ್ರಿದೇವಿ ಅವರ ಮನೆಯ ಮೆಟ್ಟಿಲುಗಳ ಮೇಲೆ ಎಡವಿ ಬಿದ್ದಿದ್ದು, ಅವರ ಭುಜದಲ್ಲಿ ಮುರಿತ ಉಂಟಾಗಿದೆ.

ಪಾಟ್ನಾ: ಆರ್ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಪಾಟ್ನಾದಲ್ಲಿರುವ ರಾಬ್ರಿದೇವಿ ಅವರ ಮನೆಯ ಮೆಟ್ಟಿಲುಗಳ ಮೇಲೆ ಎಡವಿ ಬಿದ್ದಿದ್ದು, ಅವರ ಭುಜದಲ್ಲಿ ಮುರಿತ ಉಂಟಾಗಿದೆ.
ವಯೋಸಹಜ, ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಲಾಲು ಪ್ರಸಾದ್ ಅವರು ಕಿಡ್ನಿ ಸಮಸ್ಯೆಯ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲು ಸಿದ್ಧತೆ ನಡೆಸಿದ್ದರು. ಈ ಮಧ್ಯೆ ಅವಘಡ ಸಂಭವಿಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅವರ ಭುಜದಲ್ಲಿ ಮುರಿತವಾಗಿರುವುದು ಎಂಆರ್ ಐ ಪರೀಕ್ಷೆಗಳಿಂದ ಗೊತ್ತಾಗಿದೆ. ಭುಜ ಹೊಂದಿಕೊಳ್ಳಲೆಂದು ಅವರಿಗೆ ಕಟ್ಟು ಹಾಕಲಾಗಿದೆ. ಭುಜದ ಮುರಿತ ಮತ್ತು ಬೆನ್ನಿನ ಗಾಯದ ಹೊರತಾಗಿ ಅವರಿಗೆ ಇನ್ಯಾವುದೇ ಸಮಸ್ಯೆಯಾಗಿಲ್ಲ ಎಂದೂ ಮಾಹಿತಿ ಲಭ್ಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


