ದೇಶ

ಕೆಮ್ಮಿನ ಸಿರಪ್ ನಿಂದ ಉಜ್ಬೇಕಿಸ್ತಾನ ಮಕ್ಕಳ ಸಾವು; ವಿವರಣೆ ನೀಡದ ಮ್ಯಾರಿಯೊನ್‌ ಬಯೊಟೆಕ್‌ ಸಂಸ್ಥೆ ಅಮಾನತು

ಕೆಮ್ಮಿನ ಸಿರಪ್ ನಿಂದ ಉಜ್ಬೇಕಿಸ್ತಾನ ಮಕ್ಕಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡದ ಮ್ಯಾರಿಯೊನ್‌ ಬಯೊಟೆಕ್‌ ಸಂಸ್ಥೆ ಸದಸ್ಯತ್ವವನ್ನು ಭಾರತೀಯ ಔಷಧ ರಫ್ತು ಉತ್ತೇಜನ ಮಂಡಳಿ (ಫಾರ್ಮ್‌ಎಕ್ಸಿಲ್‌) ಅಮಾನತು ಮಾಡಿದೆ.

ಕೆಮ್ಮಿನ ಸಿರಪ್ ನಿಂದ ಉಜ್ಬೇಕಿಸ್ತಾನ ಮಕ್ಕಳ ಸಾವು; ವಿವರಣೆ ನೀಡದ ಮ್ಯಾರಿಯೊನ್‌ ಬಯೊಟೆಕ್‌ ಸಂಸ್ಥೆ ಅಮಾನತು
ಮರಿಯನ್ ಬಯೋಟೆಕ್
Published On :

ಹೈದರಾಬಾದ್‌: ಕೆಮ್ಮಿನ ಸಿರಪ್ ನಿಂದ ಉಜ್ಬೇಕಿಸ್ತಾನ ಮಕ್ಕಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡದ ಮ್ಯಾರಿಯೊನ್‌ ಬಯೊಟೆಕ್‌ ಸಂಸ್ಥೆ ಸದಸ್ಯತ್ವವನ್ನು ಭಾರತೀಯ ಔಷಧ ರಫ್ತು ಉತ್ತೇಜನ ಮಂಡಳಿ (ಫಾರ್ಮ್‌ಎಕ್ಸಿಲ್‌) ಅಮಾನತು ಮಾಡಿದೆ.

ಭಾರತೀಯ ಔಷಧ ರಫ್ತು ಉತ್ತೇಜನ ಮಂಡಳಿ (ಫಾರ್ಮ್‌ಎಕ್ಸಿಲ್‌) ಮ್ಯಾರಿಯೊನ್ ಬಯೊಟೆಕ್‌ನ ಸದಸ್ಯತ್ವವನ್ನು ಅಮಾನತಿನಲ್ಲಿರಿಸಿದೆ. ಮ್ಯಾರಿಯೊನ್‌ ಬಯೊಟೆಕ್‌ನ ಔಷಧ ನೀಡಲಾಗಿದ್ದ ಉಜ್ಬೇಕಿಸ್ತಾನದ 18 ಮಕ್ಕಳು ಮೃತಪಟ್ಟ ಬಗ್ಗೆ ವಿವರಣೆ ನೀಡದೇ ಇದ್ದುದಕ್ಕೆ ಮಂಡಳಿಯು ಈ ಕ್ರಮ ತೆಗೆದುಕೊಂಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ಕೋರಿ ಕಂಪನಿಗೆ ನೋಟಿಸ್‌ ನೀಡಲಾಗಿತ್ತು. ಆದರೆ ನೋಟಿಸ್‌ಗೆ ಉತ್ತರಿಸದ ಕಾರಣ ಕಂಪನಿತ ಸದಸ್ಯತ್ವ ವನ್ನು ಅಮಾನತು ಮಾಡಲಾಗಿದೆ. ಅಂತೆಯೇ ಅಮಾನತು ಹಿಂತೆಗೆದುಕೊಳ್ಳುವವರೆಗೆ ಡಾಕ್ (ವಾಣಿಜ್ಯ ಇಲಾಖೆ) ಫಾರ್ಮೆಕ್ಸಿಲ್ ಮೂಲಕ ನೀಡುವ ಪ್ರೋತ್ಸಾಹವನ್ನು ವಿಸ್ತರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ನೋಯ್ಡಾ ಮೂಲದ ಮರಿಯನ್ ಬಯೋಟೆಕ್, ಅದರ ಕೆಮ್ಮಿನ ಸಿರಪ್ ಸೇವಿಸಿದ ನಂತರ ಉಜ್ಬೇಕಿಸ್ತಾನ್‌ನಲ್ಲಿ 18 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿತ್ತು.  ಬಳಿಕ ಅದನ್ನು ವೀಕ್ಷಣೆಯಲ್ಲಿಡಲಾಗಿತ್ತು. ಮರಿಯನ್ ಬಯೋಟೆಕ್ ರಿಯಲ್ ಎಸ್ಟೇಟ್ ಮತ್ತು ಆಸ್ಪತ್ರೆಗಳಲ್ಲಿ ಅಸ್ತಿತ್ವವನ್ನು ಹೊಂದಿರುವ ಎಮೆನಾಕ್ಸ್ ಗುಂಪಿನ ಪ್ರಮುಖ ಸಂಸ್ಥೆಯಾಗಿದೆ. ಮರಿಯನ್ ಬಯೋಟೆಕ್ 2010 ರಿಂದ ಸಣ್ಣ-ಪ್ರಮಾಣದ ತಯಾರಕರಾಗಿ ಮತ್ತು 2016 ರಿಂದ ವ್ಯಾಪಾರಿ ರಫ್ತುದಾರರಾಗಿ ಫಾರ್ಮೆಕ್ಸಿಲ್‌ನೊಂದಿಗೆ ನೋಂದಾಯಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.