ಬಜೆಟ್ ಅಧಿವೇಶನದ ಉತ್ತರಾರ್ಧ ಹೊಸ ಸಂಸತ್ ಭವನದಲ್ಲಿ...
ಮಾರ್ಚ್ ತಿಂಗಳಲ್ಲಿ ಹೊಸ ಸಂಸತ್ ಭವನ ಉದ್ಘಾಟನೆಯಾಗಲಿದ್ದು, ಬಜೆಟ್ ಅಧಿವೇಶನದ ಉತ್ತರಾರ್ಧ ಹೊಸ ಸಂಸತ್ ಭವನದಲ್ಲಿ ನಡೆಯಲಿದೆ.

ನವದೆಹಲಿ: ಮಾರ್ಚ್ ತಿಂಗಳಲ್ಲಿ ಹೊಸ ಸಂಸತ್ ಭವನ ಉದ್ಘಾಟನೆಯಾಗಲಿದ್ದು, ಬಜೆಟ್ ಅಧಿವೇಶನದ ಉತ್ತರಾರ್ಧ ಹೊಸ ಸಂಸತ್ ಭವನದಲ್ಲಿ ನಡೆಯಲಿದೆ.
ಹೊಸ ಸಂಸತ್ ಭವನದ ಕಾಮಗಾರಿ ಚುರುಕಿನಿಂದ ಸಾಗುತ್ತಿದ್ದು, ಫೆಬ್ರವರಿ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಬಜೆಟ್ ಅಧಿವೇಶನದ ಪೂರ್ವಾರ್ಧ ಜ.30 ಅಥವಾ 31 ರಂದು ಪ್ರಾರಂಭವಾಗಲಿದ್ದು ರಾಷ್ಟ್ರಪತಿ ದ್ರೌಪದಿ ಮುರ್ಮು ಜಂಟಿ ಸದನವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕೇಂದ್ರ ಬಜೆಟ್ ಫೆ.1 ರಂದು ಮಂಡನೆಯಾಗಲಿದ್ದು, ಮೊದಲಾರ್ಧ ಫೆ.8 ಅಥವಾ 9 ರಂದು ಪೂರ್ಣಗೊಳ್ಳುತ್ತದೆ. ದ್ವಿತೀಯಾರ್ಧ ಮಾರ್ಚ್ ನಲ್ಲಿ ಆರಂಭವಾಗಿ ಮೇ ಮೊದಲ ವಾರದವರೆಗೂ ಮುಂದುವರೆಯಲಿದೆ.
ದೇಶದ ಶಕ್ತಿಕೇಂದ್ರ ಸೆಂಟ್ರಲ್ ವಿಸ್ಟಾದ ಭಾಗವಾಗಿ ಹೊಸ ಸಂಸತ್ ನ್ನು ನಿರ್ಮಿಸಲಾಗುತ್ತಿದೆ. ಹೊಸ ಸಂಸತ್ ಭವನಕ್ಕೆ 2020 ರ ಡಿಸೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು.
ಹೊಸ ಸಂಸತ್ ಭವನವನ್ನು ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ನಿರ್ಮಿಸುತ್ತಿದ್ದು, ಭಾರತದ ಪ್ರಜಾಪ್ರಭುತ್ವದ ಪರಂಪರೆಯನ್ನು ಪ್ರದರ್ಶಿಸುವ ಭವ್ಯ ಸಂವಿಧಾನ ಹಾಲ್, ಗ್ರಂಥಾಲಯ, ಹಲವು ಸಮಿತಿಗಳ ಕೊಠಡಿಗಳು ಇರಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


