ದೇಶ

ಒಡಿಶಾದಲ್ಲಿ ಇಬ್ಬರು ರಷ್ಯಾ ಪ್ರಜೆಗಳ ಸಾವು; ಪೊಲೀಸರಿಂದ ತನಿಖೆ- ಎಂಇಎ

ಒಡಿಶಾದಲ್ಲಿ ಇಬ್ಬರು ರಷ್ಯಾ ಪ್ರಜೆಗಳ ಸಾವಿನ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಪೂರ್ಣಗೊಳ್ಳುವವರೆಗೆ ಅದರಲ್ಲಿ ಮೂಗು ತೂರಿಸಲು ಬಯಸುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಗುರುವಾರ ಹೇಳಿದ್ದಾರೆ.

ಒಡಿಶಾದಲ್ಲಿ ಇಬ್ಬರು ರಷ್ಯಾ ಪ್ರಜೆಗಳ ಸಾವು; ಪೊಲೀಸರಿಂದ ತನಿಖೆ- ಎಂಇಎ
ರಷ್ಯಾ ಸಂಸದ ಪಾವೆಲ್ ಆಂಟೋವ್, ಎಂಇಎ ವಕ್ತಾರ ಬಾಗ್ಚಿ
Published On :

ಭುವನೇಶ್ವರ: ಒಡಿಶಾದಲ್ಲಿ ಇಬ್ಬರು ರಷ್ಯಾ ಪ್ರಜೆಗಳ ಸಾವಿನ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಪೂರ್ಣಗೊಳ್ಳುವವರೆಗೆ ಅದರಲ್ಲಿ ಮೂಗು ತೂರಿಸಲು ಬಯಸುವುದಿಲ್ಲ ಎಂದು  ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಗುರುವಾರ ಹೇಳಿದ್ದಾರೆ.

ಒಡಿಶಾದ ರಾಯಗಡ ಜಿಲ್ಲೆಯ ಹೋಟೆಲ್‌ವೊಂದರಲ್ಲಿ ಜನಪ್ರತಿನಿಧಿ ಸೇರಿದಂತೆ ಇಬ್ಬರು ರಷ್ಯಾದ ನಾಗರಿಕರು ಶವವಾಗಿ ಪತ್ತೆಯಾಗಿದ್ದರು. ರಷ್ಯಾದ ಸಂಸದ ಮತ್ತು ಉದ್ಯಮಿ ಪಾವೆಲ್ ಆಂಟೋವ್ (65) ಡಿಸೆಂಬರ್ 24 ರಂದು ಹೋಟೆಲ್‌ನ ಮೂರನೇ ಮಹಡಿಯಿಂದ ಬಿದ್ದು  ಸಾವನ್ನಪ್ಪಿದ್ದರು. ಅವರ ಸಹ-ಪ್ರಯಾಣಿಕ ವ್ಲಾಡಿಮಿರ್ ಬಿಡೆನೋವ್  ಡಿಸೆಂಬರ್ 22 ರಂದು ಅವರ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. 

ಈ ಕುರಿತು ಪ್ರತಿಕ್ರಿಯಿಸಿದ ಬಾಗ್ಚಿ,  ಘಟನೆ ಬಗ್ಗೆ ನಮಗೆ ತಿಳಿದಿದೆ. ಒಡಿಶಾ ಪೊಲೀಸರು ನಮ್ಮ ಕಾನೂನಿನ ಪ್ರಕಾರ ತನಿಖೆ ನಡೆಸುತ್ತಿದ್ದಾರೆ. "ಇದೊಂದು ದುರದೃಷ್ಟಕರ ಸಾವಿನ ಘಟನೆಯಾಗಿದ್ದು, ವಿವರಗಳು ತಿಳಿದುಬರಬೇಕಾಗಿದೆ. ಪೊಲೀಸರ ತನಿಖೆಯಲ್ಲಿ ಮೂಗು ತೂರಿಸುವುದಿಲ್ಲ ಎಂದರು.

 ದೆಹಲಿ ಮೂಲದ ಟ್ರಾವೆಲ್ ಗೈಡ್ ಜಿತೇಂದ್ರ ಸಿಂಗ್ ಅವರೊಂದಿಗೆ ಡಿಸೆಂಬರ್ 21 ರಂದು ಇವರಿಬ್ಬರೂ ಹೋಟೆಲ್‌ಗೆ ಚೆಕ್ ಇನ್ ಮಾಡಿದ್ದರು. ಬಿದ್ದ ನಂತರ ಗಾಯಗೊಂಡು ರಷ್ಯಾದ ಸಂಸದರು ಮೃತಪಟ್ಟಿರುವುದಾಗಿ ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ. ಆದರೆ ಬಿಡೆನೋವ್ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.