ಉತ್ತರ ಭಾರತದಲ್ಲಿ ದಟ್ಟ ಮಂಜು: 3 ದಿನಗಳ ಕಾಲ 279 ರೈಲು, 100 ಕ್ಕೂ ಅಧಿಕ ವಿಮಾನಗಳ ಸಂಚಾರ ವ್ಯತ್ಯಯ
ಉತ್ತರ ಭಾರತದಲ್ಲಿ ದಟ್ಟ ಮಂಜು ಕವಿದಿದ್ದು, ವಾತಾವರಣದ ವೈಪರಿತ್ಯದಿಂದ ದೆಹಲಿ ಒಂದರಲ್ಲೇ 100 ಕ್ಕೂ ಅಧಿಕ ವಿಮಾನಗಳ ವ್ಯತ್ಯಯ ಉಂಟಾಗಿದೆ.

ನವದೆಹಲಿ: ಉತ್ತರ ಭಾರತದಲ್ಲಿ ದಟ್ಟ ಮಂಜು ಕವಿದಿದ್ದು, ವಾತಾವರಣದ ವೈಪರಿತ್ಯದಿಂದ ದೆಹಲಿ ಒಂದರಲ್ಲೇ 100 ಕ್ಕೂ ಅಧಿಕ ವಿಮಾನಗಳ ವ್ಯತ್ಯಯ ಉಂಟಾಗಿದೆ.
ದೆಹಲಿಯಲ್ಲಿ ತೀವ್ರ ಚಳಿ ಇದ್ದು, ವಾತಾವರಣದ ವೈಪರಿತ್ಯದ ಪರಿಣಾಮ ದೆಹಲಿಯಿಂದ ಕಾರ್ಯನಿರ್ವಹಣೆ ಮಾಡಬೇಕಿದ್ದ 100 ಕ್ಕೂ ಹೆಚ್ಚು ವಿಮಾನಗಳ ಸಂಚಾರ ಕನಿಷ್ಟ ಇನ್ನೂ 3 ದಿನಗಳ ಕಾಲ ವ್ಯತ್ಯಯವಾಗಲಿದೆ ಎಂದು ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಎಎನ್ಐ ಗೆ ಮಾಹಿತಿ ನೀಡಿದ್ದಾರೆ.
ವರ್ಷಾಂತ್ಯದ ರಜೆ ದಿನಗಳ ಹಿನ್ನೆಲೆಯಲ್ಲಿ ನವದೆಹಲಿ ವಿಮಾನ ನಿಲ್ದಾಣದಲ್ಲಿ ಜನ ದಟ್ಟಣೆ ಉಂಟಾಗಿದ್ದು ಅದನ್ನು ನಿರ್ವಹಿಸಲಾಗುತ್ತಿದೆ. ಆದರೆ ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ ದಟ್ಟ ಮಂಜು ಆವರಿಸಿರುವುದರಿಂದ ವಿಮಾನ ವ್ಯತ್ಯಯ ಉಂಟಾಗಿ ಪ್ರಯಾಣಿಕರಿಗೆ ಅನನುಕೂಲವಾಗಿದೆ.
ಸಿಎಟಿ-III ಪೂರಕ ಪೈಲಟ್ ಗಳನ್ನು ಕೆಲವು ವಿಮಾನ ಸಂಸ್ಥೆಗಳು ನಿಯೋಜನೆ ಮಾಡದೇ ಇರುವುದೂ ಸಹ ವಿಮಾನಗಳ ವ್ಯತ್ಯಯಕ್ಕೆ ಕಾರಣವಾಗಿದೆ. ದೆಹಲಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಲಿಮಿಟೆಡ್ ಪ್ರಯಾಣಿಕರಿಗೆ ತಮ್ಮ ವಿಮಾನಗಳ ಸ್ಥಿತಿಗತಿಗಳನ್ನು ಪರಿಶೀಲಿಸಿಕೊಳ್ಳುವಂತೆ ಸೂಚನೆ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


