ಉತ್ತರಪ್ರದೇಶ: ಮದುವೆ ಸಮಾರಂಭದಲ್ಲಿ ಊಟ ಮುಟ್ಟಿದ್ದಕ್ಕೆ ದಲಿತ ಯುವಕನಿಗೆ ಥಳಿತ
18 ವರ್ಷದ ದಲಿತ ಯುವಕನೊಬ್ಬ ಮದುವೆ ಸಮಾರಂಭದಲ್ಲಿ ಆಹಾರವನ್ನು ಮುಟ್ಟಿದ್ದಕ್ಕಾಗಿ ಆತನನ್ನು ನಿಂದಿಸಿ ಅಮಾನುಷವಾಗಿ ಥಳಿಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಗೊಂಡಾ: 18 ವರ್ಷದ ದಲಿತ ಯುವಕನೊಬ್ಬ ಮದುವೆ ಸಮಾರಂಭದಲ್ಲಿ ಆಹಾರವನ್ನು ಮುಟ್ಟಿದ್ದಕ್ಕಾಗಿ ಆತನನ್ನು ನಿಂದಿಸಿ ಅಮಾನುಷವಾಗಿ ಥಳಿಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ವಜೀರ್‌ಗಂಜ್‌ನಲ್ಲಿ ಈ ಘಟನೆ ನಡೆದಿದ್ದು, ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೌಬಸ್ತಾ ಗ್ರಾಮದ ನಿವಾಸಿ ರೇಣು ಮಾತನಾಡಿ, ತನ್ನ ಕಿರಿಯ ಸಹೋದರ ಲಲ್ಲಾ(18) ಗ್ರಾಮದಲ್ಲಿ ನಡೆದ ಮದುವೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದ ಮತ್ತು ಸಂದೀಪ್ ಪಾಂಡೆ ಎಂಬುವವರ ಮನೆಯಲ್ಲಿ ಔತಣವನ್ನು ಏರ್ಪಡಿಸಲಾಗಿತ್ತು.
ಲಲ್ಲಾ ತನಗಾಗಿ ಒಂದು ತಟ್ಟೆಯನ್ನು ತೆಗೆದುಕೊಂಡ ತಕ್ಷಣ, ಸಂದೀಪ್ ಮತ್ತು ಅವನ ಸಹೋದರರು ಆತನನ್ನು ನಿಂದಿಸಿ ಥಳಿಸಿದ್ದಾರೆ. ಲಲ್ಲಾನ ಹಿರಿಯ ಸಹೋದರ ಸತ್ಯಪಾಲ್ ಅವರನ್ನು ರಕ್ಷಿಸಲು ಮುಂದಾದಾಗ, ಆತನನ್ನು ಥಳಿಸಿ ಅವರ ಮೋಟಾರ್ ಸೈಕಲ್‌ಗೆ ಹಾನಿ ಮಾಡಿದ್ದಾರೆ.
ಸಂದೀಪ್ ಮತ್ತು ಆತನ ಸಹೋದರರ ನಡತೆಯ ಬಗ್ಗೆ ನಾವು ಗ್ರಾಮ ಪ್ರಧಾನ ಮತ್ತು ಗ್ರಾಮದ ಹಿರಿಯರಿಗೆ ತಿಳಿಸಿದ್ದೇವೆ. ಈ ವಿಷಯ ತಿಳಿದ ಆರೋಪಿಗಳು ನಮ್ಮ ಮನೆಗೆ ನುಗ್ಗಿ ಲಲ್ಲಾಗೆ ಮತ್ತೆ ಥಳಿಸಿ ವಿಧ್ವಂಸಕ ಕೃತ್ಯ ಎಸಗಿದ್ದಾರೆ ಎಂದು ರೇಣು ಆರೋಪಿಸಿದ್ದಾರೆ.
ಗೊಂಡಾದ ಎಎಎಸ್‌ಪಿ ಶಿವರಾಜ್ ಮಾತನಾಡಿ, ದುಡುಕಿನ ಅಥವಾ ನಿರ್ಲಕ್ಷ್ಯದಿಂದ ಮಾನವ ಜೀವ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವುದು, ಕ್ರಿಮಿನಲ್ ಬೆದರಿಕೆ ಮತ್ತು ದಂಗೆ ಅಡಿಯಲ್ಲಿ ಆರೋಪಿಗಳಾದ ಸಂದೀಪ್ ಪಾಂಡೆ, ಅಮರೇಶ್ ಪಾಂಡೆ, ಶ್ರವಣ್ ಪಾಂಡೆ, ಸೌರಭ್ ಪಾಂಡೆ, ಅಜಿತ್ ಪಾಂಡೆ, ವಿಮಲ್ ಪಾಂಡೆ ಮತ್ತು ಅಶೋಕ್ ಪಾಂಡೆ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುವುದು ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


