ದೇಶ

ಪ್ರಧಾನಿ ಕಚೇರಿ ಕರೆಗಳಿಗೆ ಇಂಗ್ಲಿಷ್ ಪತ್ರಿಕೆಗಳು ನಡುಗುತ್ತವೆ: ಸುಬ್ರಮಣಿಯನ್‌ ಸ್ವಾಮಿ

ಪ್ರಧಾನ ಮಂತ್ರಿಯವರ ಕಾರ್ಯಾಲಯದ (ಪಿಎಂಒ) ಕರೆಗಳಿಗೆ ಇಂಗ್ಲಿಷ್ ಪತ್ರಿಕೆಗಳು ನಡುಗುತ್ತವೆ ಎಂದು ಬಿಜೆಪಿ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಹೇಳಿದ್ದಾರೆ.

ಪ್ರಧಾನಿ ಕಚೇರಿ ಕರೆಗಳಿಗೆ ಇಂಗ್ಲಿಷ್ ಪತ್ರಿಕೆಗಳು ನಡುಗುತ್ತವೆ: ಸುಬ್ರಮಣಿಯನ್‌ ಸ್ವಾಮಿ
ಸುಬ್ರಮಣಿಯನ್ ಸ್ವಾಮಿ
Published On :

ನವದೆಹಲಿ: ಪ್ರಧಾನ ಮಂತ್ರಿಯವರ ಕಾರ್ಯಾಲಯದ (ಪಿಎಂಒ) ಕರೆಗಳಿಗೆ ಇಂಗ್ಲಿಷ್ ಪತ್ರಿಕೆಗಳು ನಡುಗುತ್ತವೆ ಎಂದು ಬಿಜೆಪಿ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಹೇಳಿದ್ದಾರೆ. 

ಕೇಂದ್ರ ಸರ್ಕಾರದ ವಿರುದ್ಧ ನೇರಮಾತುಗಳಿಂದಲೇ ಭಾರಿ ಸುದ್ದಿಗೆ ಗ್ರಾಸವಾಗುತ್ತಿರುವ ಬಿಜೆಪಿ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಇದೀಗ ಮತ್ತೊಮ್ಮೆ ಇಂತಹುದೇ ವಿಚಾರದಿಂದ ಸುದ್ದಿಗೆ ಬಂದಿದ್ದಾರೆ. ಹೌದು.. ಟ್ವಿಟರ್ ನಲ್ಲಿ ಸ್ವಾಮಿ ಮಾಡಿರುವ ಒಂದು ಹೇಳಿಕೆ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

‘ಪಿಎಂಒ ಕರೆಗಳಿಗೆ ಇಂಗ್ಲಿಷ್ ಪತ್ರಿಕೆಗಳು ನಡುಗುತ್ತವೆ.  ಹೀಗಾಗಿ ಈ ಪತ್ರಿಕೆಗಳು ಪ್ರಧಾನಿ ಮೋದಿಯವರ ನೀತಿಗಳನ್ನು ವಿರೋಧಿಸುವವರ ಅರ್ಹವಾದ ವಿಷಯಗಳನ್ನು (ಸುದ್ದಿಗಳನ್ನು) ವರದಿ ಮಾಡುವುದಿಲ್ಲ. ದೇಶದಲ್ಲಿ ಹಲವು ಭಾಷಾ ಪತ್ರಿಕೆಗಳು ನನಗೆ ಉತ್ತಮ ಕವರೇಜ್ ನೀಡುತ್ತಿದ್ದು, ಇಲ್ಲಿಯವರೆಗೆ ನಾನು ತಲೆಕೆಡಿಸಿಕೊಂಡಿಲ್ಲ. ಆದರೆ, ಈಗ ಇಂಗ್ಲಿಷ್‌ಗಾಗಿ ನಾನು ವಿದೇಶಿ ಮಾಧ್ಯಮಗಳಿಗೂ ಬೈಟ್‌ಗಳನ್ನು ನೀಡಲು ಪ್ರಾರಂಭಿಸುತ್ತೇನೆ’ ಎಂದು ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ. 

ಮಾದಕ ವಸ್ತುಗಳ ಕಳ್ಳಸಾಗಣೆ ತಡೆದರೆ ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸಬಹುದು ಎಂಬ ಗೃಹ ಸಚಿವ ಅಮಿತ್‌ ಶಾ ಅವರ ಹೇಳಿಕೆ ಕುರಿತು ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ಸ್ವಾಮಿ, ‘ಮಾದಕ ವಸ್ತುಗಳ ಕಳ್ಳಸಾಗಣೆಯನ್ನು ತಡೆಯಲು ಗೃಹ ಸಚಿವರು ಏನು ಮಾಡಿದ್ದಾರೆ? ಅಥವಾ ಈ ಮೂಲಕ ತನ್ನ ವೈಫಲ್ಯಗಳನ್ನು ಒಪ್ಪಿಕೊಳ್ಳುತ್ತಿದ್ದಾರೆಯೇ? ಎಂದು ಶಾ ಅವರನ್ನು  ಪ್ರಶ್ನಿಸಿದ್ದರು. 

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುವ ಮೂಲಕ ಸುಬ್ರಮಣಿಯನ್‌ ಸ್ವಾಮಿ ಅವರು ಸದಾ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಸ್ವಾಮಿ, ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಯಿಂದ ಕೆಲವು ವ್ಯವಹಾರಗಳ ಪ್ರವರ್ತಕರಿಗೆ ಕನಿಷ್ಠ ಸಾರ್ವಜನಿಕ ಷೇರುದಾರರ (ಎಂಪಿಎಸ್) ನಿಯಮಗಳು ಮತ್ತು ವಿಭಿನ್ನ ವರ್ತನೆಗಳ ಅಸಂಗತತೆಯ ಕುರಿತು ಆರೋಪಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.