ಬಿಜೆಪಿ ನಾಯಕಿ ಸೋನಾಲಿ ಫೋಗಟ್ ರನ್ನು ಗೋವಾದಲ್ಲಿ ಹತ್ಯೆ ಮಾಡಲಾಗಿದೆ: ಸಹೋದರ ಆರೋಪ
ಬಿಜೆಪಿ ನಾಯಕಿ ಮತ್ತು ನಟಿ ಸೋನಾಲಿ ಫೋಗಟ್ ಅವರು ಸಹೋದ್ಯೋಗಿಗಳೊಂದಿಗೆ ಗೋವಾಕ್ಕೆ ತೆರಳಿದಾಗ ಮಂಗಳವಾರ ಬೆಳಗ್ಗೆ ಗೋವಾದಲ್ಲಿ ನಿಧನರಾಗಿದ್ದು, ಹೃದಯಘಾತದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು.

ಪಣಜಿ: ಬಿಜೆಪಿ ನಾಯಕಿ ಮತ್ತು ನಟಿ ಸೋನಾಲಿ ಫೋಗಟ್ ಅವರು ಸಹೋದ್ಯೋಗಿಗಳೊಂದಿಗೆ ಗೋವಾಕ್ಕೆ ತೆರಳಿದಾಗ ಮಂಗಳವಾರ ಬೆಳಗ್ಗೆ ಗೋವಾದಲ್ಲಿ ನಿಧನರಾಗಿದ್ದು, ಹೃದಯಘಾತದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ಇದು ಸಹಜ ಸಾವಲ್ಲ, ಕೊಲೆ ಎಂದು ಸೋನಾಲಿ ಫೋಗಟ್ ಸಹೋದರ ರಿಂಕು ಧಾಕಾ ಅವರು ಆರೋಪಿಸಿದ್ದಾರೆ.
ಸೋನಾಲಿ ಫೋಗಟ್ ಅವರ ಇಬ್ಬರು ಸಹಚರರು ತನ್ನ ಸಹೋದರಿಯನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ರಿಂಕು ಢಾಕಾ ಅವರು ಗೋವಾ ಪೊಲೀಸರಿಗೆ ದೂರು ನೀಡಿದ್ದಾರೆ.
ಸೋನಾಲಿ ಅವರು ಸಾಯುವ ಸ್ವಲ್ಪ ಸಮಯದ ಮೊದಲು, ತನ್ನ ತಾಯಿ, ಸಹೋದರಿ ಮತ್ತು ಸೋದರ ಮಾವನ ಜೊತೆ ಮಾತನಾಡಿದ್ದರು. ಈ ಸಮಯದಲ್ಲಿ ಅವರು ತೀವ್ರ ಗೊಂದಲಕ್ಕೊಳಗಾಗಿದ್ದರು ಮತ್ತು ತನ್ನ ಇಬ್ಬರು ಸಹೋದ್ಯೋಗಿಗಳ ವಿರುದ್ಧ ದೂರಿದ್ದಳು ಎಂದು ಅವರ ಸಹೋದರ ರಿಂಕು ಢಾಕಾ ಹೇಳಿದ್ದಾರೆ.
ಸೋನಾಲಿ ಸಾವಿನ ನಂತರ ಹರಿಯಾಣದಲ್ಲಿರುವ ಅವರ ಫಾರ್ಮ್‌ಹೌಸ್‌ನಿಂದ ಸಿಸಿಟಿವಿ ಕ್ಯಾಮೆರಾಗಳು, ಲ್ಯಾಪ್‌ಟಾಪ್ ಮತ್ತು ಇತರ ಪ್ರಮುಖ ವಸ್ತುಗಳು ನಾಪತ್ತೆಯಾಗಿವೆ ಎಂದು ರಿಂಕು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾದ ಅಂಜುನ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೋನಾಲ್ ಫೋಗಟ್ 2016 ರಲ್ಲಿ ಧಾರಾವಾಹಿ ಏಕ್ ಮಾ ಜೋ ಲಾಖೋಂ ಕೆ ಲಿಯೇ ಬಾನಿ ಅಮ್ಮಾ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು. ನಂತರ ಅವರು ಹರ್ಯಾನ್ವಿ ಚಲನಚಿತ್ರ ಛೋರಿಯನ್ ಛೋರೋನ್ ಎಸ್ ಕಾಮ್ ನಹಿ ಹೋತಿಯಲ್ಲಿ ಕಾಣಿಸಿಕೊಂಡರು. ಅವರು ಹಲವಾರು ಪಂಜಾಬಿ ಮತ್ತು ಹರ್ಯಾನ್ವಿ ಸಂಗೀತ ವೀಡಿಯೊಗಳ ಭಾಗವಾಗಿದ್ದಾರೆ. ಕೊನೆಯದಾಗಿ ದಿ ಸ್ಟೋರಿ ಆಫ್ ಬದ್ಮಾಶ್‌ಗಢ್ (2019) ಎಂಬ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು.
ಡಿಸೆಂಬರ್ 2016ರಲ್ಲಿ, ಅವರು ತಮ್ಮ ಪತಿ ಸಂಜಯ್ ಫೋಗಟ್ ಅವರನ್ನು ಕಳೆದುಕೊಂಡಿದ್ದರು. ಇವರಿಗೆ ಯಶೋಧರ ಫೋಗಟ್ ಎಂಬ ಮಗಳಿದ್ದಾಳೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


