ಪಿಎಸ್ ಯು ಗಳ ಕಾರ್ಯನಿರ್ವಹಿಸದ 17 ಗಣಿಗಳು ಹರಾಜಿಗೆ
ಸಾರ್ವಜನಿಕ ವಲಯದ ಉದ್ಯಮಗಳು ವಾಪಸ್ ನೀಡಿರುವ 17 ಗಣಿಗಳನ್ನು ಹರಾಜು ಹಾಕಲು ಸರ್ಕಾರ ಚಿಂತನೆ ನೀಡಿದೆ. ಈ 17 ಗಣಿಗಳು ಸದ್ಯಕ್ಕೆ ಕಾರ್ಯನಿರ್ವಹಿಸದ ಗಣಿಗಳಾಗಿವೆ ಎಂದು ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ನವದೆಹಲಿ: ಸಾರ್ವಜನಿಕ ವಲಯದ ಉದ್ಯಮಗಳು ವಾಪಸ್ ನೀಡಿರುವ 17 ಗಣಿಗಳನ್ನು ಹರಾಜು ಹಾಕಲು ಸರ್ಕಾರ ಚಿಂತನೆ ನೀಡಿದೆ. ಈ 17 ಗಣಿಗಳು ಸದ್ಯಕ್ಕೆ ಕಾರ್ಯನಿರ್ವಹಿಸದ ಗಣಿಗಳಾಗಿವೆ ಎಂದು ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ವಿವಿಧ ಕ್ಷೇತ್ರಗಳಿಗೆ ಇಂಧನ ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳುವುದಕ್ಕಾಗಿ ದೇಶಿಯವಾಗಿ ಕಲ್ಲಿದ್ದಲು ಉತ್ಪಾದನೆ ಹೆಚ್ಚಿಸಲು ಸರ್ಕಾರ ಕ್ರಮ ವಹಿಸಿರುವ ಸಂದರ್ಭದಲ್ಲಿ ಸಚಿವ ಪ್ರಹ್ಲಾದ್ ಜೋಶಿ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
"ಭಾನುವಾರದಂದು 17 ಬ್ಲಾಕ್ ಗಳು ಸರ್ಕಾರಕ್ಕೆ ವಾಪಸ್ ಬಂದಿವೆ, ಅವು ಉತ್ತಮವಾಗಿದ್ದು, ಈಗ ಹರಾಜು ಹಾಕಲು ಇಡುತ್ತಿದ್ದೇವೆ" ಎಂದು ಜೋಶಿ ಹೇಳಿದ್ದಾರೆ.
ಎನ್ ಎಂ ಡಿಸಿ ಹಗೂ ಎಫ್ಐಸಿಸಿಐ ಆಯೋಜಿಸಿದ್ದ ಭಾರತೀಯ ಖನಿಜಗಳು ಮತ್ತು ಲೋಹಗಳ ಉದ್ಯಮದ ವಿಷಯದ ಕುರಿತ ಸಮ್ಮೇಳನದಲ್ಲಿ ಜೋಶಿ ಮಾತನಾಡುತ್ತಿದ್ದರು, ಕಲ್ಲಿದ್ದಲು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾರ್ವಕನಿಕ ವಲಯದ ಉದ್ಯಮಗಳಿಗೆ ದೊಡ್ಡ ಗಣಿಗಳನ್ನು ನಿಭಾಯಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು.
10-15 ವರ್ಷಗಳ ನಂತರವೂ ಕಾರ್ಯನಿರ್ವಹಣೆ ಮಾಡದ ಗಣಿಗಳನ್ನು ಸರ್ಕಾರ ವಾಪಸ್ ಪಡೆಯಲು ನಿರ್ಧರಿಸಿದೆ, ಈ ಬಗ್ಗೆ ರಾಜ್ಯಗಳ ಮುಖ್ಯಮಂತ್ರಿಗಳು, ಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ ಎಂದು ಜೋಶಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


