ಗೂಗಲ್ ಕ್ರೋಮ್ ಬಳಕೆದಾರರೇ ಎಚ್ಚರ! ಹ್ಯಾಕರ್ ಗಳು ಸುಲಭವಾಗಿ ಹ್ಯಾಕ್ ಮಾಡುವ ಸಾಧ್ಯತೆ- ಕೇಂದ್ರ ಸರ್ಕಾರ
ನವದೆಹಲಿ: ಗೂಗಲ್ ಕ್ರೋಮ್ ಬಳಕೆದಾರರಿಗೆ ಭಾರತ ಸರ್ಕಾರ ಎಚ್ಚರಿಕೆ ನೀಡಿದೆ. ಗೂಗಲ್ ಕ್ರೋಮ್ ನಲ್ಲಿ ಕೆಲವು ನ್ಯೂನತೆಗಳು ಕಂಡುಬಂದಿವೆ. ಇದರಿಂದಾಗಿ ಹ್ಯಾಕರ್ ಗಳು ಅದರ ಲಾಭ ಪಡೆದು ಕಂಪ್ಯೂಟರ್ ನ್ನು ಸುಲಭವಾಗಿ ಹ್ಯಾಕ್ ಮಾಡುವ ಸಾಧ್ಯತೆಯಿದೆ.

ನವದೆಹಲಿ: ಗೂಗಲ್ ಕ್ರೋಮ್ ಬಳಕೆದಾರರಿಗೆ ಭಾರತ ಸರ್ಕಾರ ಎಚ್ಚರಿಕೆ ನೀಡಿದೆ. ಗೂಗಲ್ ಕ್ರೋಮ್ ನಲ್ಲಿ ಕೆಲವು ನ್ಯೂನತೆಗಳು ಕಂಡುಬಂದಿವೆ. ಇದರಿಂದಾಗಿ ಹ್ಯಾಕರ್ ಗಳು ಅದರ ಲಾಭ ಪಡೆದು ಕಂಪ್ಯೂಟರ್ ನ್ನು ಸುಲಭವಾಗಿ ಹ್ಯಾಕ್ ಮಾಡುವ ಸಾಧ್ಯತೆಯಿದೆ ಎಂದು ಐಟಿ ಸಚಿವಾಲಯದ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (SERT-in) ಡೆಸ್ಕ್ ಟಾಪ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. SERT-in ಈ ಹಿಂದೆ Apple iOS, Apple Ipad ಮತ್ತು Macos ನಲ್ಲಿನ ದೋಷಗಳ ಬಗ್ಗೆಯೂ ಎಚ್ಚರಿಕೆ ನೀಡಿತ್ತು.
SERT-in ನೀಡಿರುವ ಮಾಹಿತಿ ಪ್ರಕಾರ, ಗೂಗಲ್ ಕ್ರೋಮ್ ನಲ್ಲಿ ಹಲವು ನ್ಯೂನತೆಗಳಿವೆ. ಈ ನ್ಯೂನತೆಗಳ ಲಾಭ ಪಡೆದುಕೊಂಡು ಹ್ಯಾಕರ್ ಗಳು ನಿಮ್ಮ ಸಿಸ್ಟಮ್ ಗೆ ರಚಿಸಲಾದ ಕಾರ್ಪಟೆಡ್ ರಿಕ್ವೆಸ್ಟ್ ಕಳುಹಿಸುವ ಮೂಲಕ ಆರ್ಬಿಟರಿ ಕೋಡ್ ನ್ನು ಕಾರ್ಯಗತಗೊಳಿಸಬಹುದು. ಈ ಕೋಡ್ ನಿಮ್ಮ ಕಂಪ್ಯೂಟರ್ ನ ಆ್ಯಂಟಿ ವೈರಸ್ ನ್ನು ಬೈಪಾಸ್ ಮಾಡಿ ಸಂಪೂರ್ಣವಾಗಿ ಹ್ಯಾಕ್ ಮಾಡಬಹುದಾಗಿದೆ.
ನಿಮ್ಮ ಕಂಪ್ಯೂಟರ್ ಸುರಕ್ಷಿತವಾಗಿರಬೇಕೆ?
ಹ್ಯಾಕಿಂಗ್ ತಪ್ಪಿಸಲು ಬಳಕೆದಾರರು ಮೊದಲು ತಮ್ಮ ಗೂಗಲ್ ಕ್ರೋಮ್ ನ್ನು ಇತ್ತೀಚಿನ ಆವೃತ್ತಿಗೆ ನವೀಕರಿಸಬೇಕಾಗುತ್ತದೆ. ಅಲ್ಲದೇ, ಬಳಕೆದಾರರು ಅಪರಿಚಿತ ಲಿಂಕ್ ಗಳನ್ನು ಕ್ಲಿಕ್ ಮಾಡುವುದನ್ನು ಮತ್ತು ಅಪರಿಚಿತ ವೆಬ್ ಸೈಟ್ ಗಳಿಗೆ ಭೇಟಿ ನೀಡುವುದನ್ನು ತಪ್ಪಿಸಬೇಕು. ಇದರಿಂದ ನಿಮ್ಮ ಕಂಪ್ಯೂಟರ್ ಸುರಕ್ಷಿತವಾಗಿರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


