ಹತ್ಯೆ ಪ್ರಕರಣದ ತನಿಖೆಗೆ "ಬಾಬಾ" ಮಾರ್ಗದರ್ಶನ ಪಡೆದ ಮಧ್ಯಪ್ರದೇಶ ಪೊಲೀಸ್ ಅಧಿಕಾರಿ ಅಮಾನತು!
ಯಾವುದಾದರೂ ಪೊಲೀಸ್ ಅಧಿಕಾರಿ ಹತ್ಯೆ ಪ್ರಕರಣವೊಂದರಲ್ಲಿ ಧಾರ್ಮಿಕ ಬೋಧಕ (ಬಾಬಾ) ಸಹಾಯ ಪಡೆದ ಉದಾಹರಣೆಗಳನ್ನು ನೋಡಿದ್ದೀರಾ? ಹಾಗೊಂದು ವೇಳೆ ಇದ್ದರೆ ಅದು ಸಿನಿಮಾಗಳಲ್ಲಷ್ಟೇ ಎಂದುಕೊಳ್ಳಬೇಡಿ. ನಿಜ ಜೀವನದಲ್ಲೂ ಇಂಥಹದ್ದೊಂದು ಯಡವಟ್ಟು ನಡೆದಿದೆ.

ಭೋಪಾಲ್: ಯಾವುದಾದರೂ ಪೊಲೀಸ್ ಅಧಿಕಾರಿ ಹತ್ಯೆ ಪ್ರಕರಣವೊಂದರಲ್ಲಿ ಧಾರ್ಮಿಕ ಬೋಧಕ (ಬಾಬಾ) ಸಹಾಯ ಪಡೆದ ಉದಾಹರಣೆಗಳನ್ನು ನೋಡಿದ್ದೀರಾ? ಹಾಗೊಂದು ವೇಳೆ ಇದ್ದರೆ ಅದು ಸಿನಿಮಾಗಳಲ್ಲಷ್ಟೇ ಎಂದುಕೊಳ್ಳಬೇಡಿ. ನಿಜ ಜೀವನದಲ್ಲೂ ಇಂಥಹದ್ದೊಂದು ಯಡವಟ್ಟು ನಡೆದಿದೆ.
ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಬಮಿತಾ ಪೊಲೀಸ್ ಠಾಣೆಯ ಎಎಸ್ಐ ಹತ್ಯೆ ಪ್ರಕರಣವೊಂದರಲ್ಲಿ ಆರೋಪಿಗಳನ್ನು ಹಿಡಿಯುವುದಕ್ಕಾಗಿ ಬಾಬಾ ಸಹಾಯ ಪಡೆದು ಈಗ ಅಮಾನತುಗೊಂಡಿದ್ದಾರೆ.
ಎಎಸ್ಐ ಎ. ಶರ್ಮಾ ಎಂಬುವವರು ಬಾಬಾ ಪಂಡೋಖರ್ ಸರ್ಕಾರ್ ಮಹಾರಾಜ್ ಎಂಬಾತನ ಬಳಿ 17 ವರ್ಷದ ಬಾಲಕಿಯ ಹತ್ಯೆ ಪ್ರಕರಣದ ಶಂಕಿತರನ್ನು ಗುರುತಿಸಲು ದೈವಿಕ ಸಹಾಯ ಕೇಳಿರುವ ಪೊಲೀಸ್ ಅಧಿಕಾರಿಯಾಗಿದ್ದಾರೆ.
ಧಾರ್ಮಿಕ ಬೋಧಕನ ಸಹಾಯ ಪಡೆಯುವುದು ಮಾತ್ರವಲ್ಲದೇ, ಆತನ ಮಾರ್ಗದರ್ಶನದಂತೆ ಹತ್ಯೆಯಾದ ಬಾಲಕಿಯ ಸಂಬಂಧಿಯನ್ನು ಈ ಪೊಲೀಸ್ ಅಧಿಕಾರಿ ಬಂಧಿಸಿದ್ದರು.
ಈ ಘಟನೆ ಬಗ್ಗೆ ಕ್ರಮ ಕೈಗೊಂಡಿರುವ ಛತ್ತರ್‌ಪುರ ಜಿಲ್ಲೆಯ ಎಸ್ ಪಿ ಸಚಿನ್ ಶರ್ಮಾ, ಎಎಸ್ಐ ಎ ಶರ್ಮ ಅವರನ್ನು ಹಾಗೂ ಜಿಲ್ಲಾ ಪೊಲೀಸ್ ಠಾಣೆಗೆ ಸಂಬಂಧಿಸಿದ ಉಸ್ತುವಾರಿ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮುಂದಿನ ತನಿಖೆಯನ್ನು ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್ ಡಿಒಪಿ-ಖಜುರಾಹೊ) ಮನ್ಮೋಹನ್ ಸಿಂಗ್ ಬಘೇಲ್ ಅವರು ನಡೆಸಲಿದ್ದಾರೆ ಎಂದು ಎಸ್ ಪಿ ಶಶಾಂಕ್ ಜೈನ್ ಹೇಳಿದ್ದಾರೆ.
ಬಮಿತಾ ಪೊಲೀಸ್ ಠಾಣೆಯ ಎಎಸ್ಐ ಭಕ್ತಾದಿಗಳ ಹಿಂಡಿನ ನಡುವೆ ಬಾಬಾ ಸಹಾಯ ಕೇಳುತ್ತಿದ್ದ 2.50 ನಿಮಿಷಗಳ ವೀಡಿಯೋ ವೈರಲ್ ಆಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


