ಬಿಹಾರ: ಸುಶೀಲ್ ಮೋದಿಯನ್ನು ರಾಜ್ಯ ರಾಜಕಾರಣದಿಂದ ದೂರವಿಟ್ಟಿರುವುದು ಬಿಜೆಪಿ ಹಿನ್ನಡೆಗೆ ಕಾರಣವೇ?
2020ರ ವಿಧಾನಸಭಾ ಚುನಾವಣೆಯ ನಂತರ ಬಿಹಾರದ ರಚನೆಯಾದ ಜೆಡಿಯು- ಬಿಜೆಪಿ ಸರ್ಕಾರ ಆರಂಭದಿಂದಲೂ ಅಲುಗಾಡುತ್ತಲೇ ಆರಂಭವಾಗಿತ್ತು. ಆದರೆ, ಸುಶೀಲ್ ಕುಮಾರ್ ಅವರಂತಹ ಬಿಜೆಪಿ ನಾಯಕರು ನಿತೀಶ್ ಕುಮಾರ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.

ನವದೆಹಲಿ: 2020ರ ವಿಧಾನಸಭಾ ಚುನಾವಣೆಯ ನಂತರ ಬಿಹಾರದ ರಚನೆಯಾದ ಜೆಡಿಯು- ಬಿಜೆಪಿ ಸರ್ಕಾರ ಆರಂಭದಿಂದಲೂ ಅಲುಗಾಡುತ್ತಲೇ ಆರಂಭವಾಗಿತ್ತು. ಆದರೆ, ಸುಶೀಲ್ ಕುಮಾರ್ ಮೋದಿ ಅವರಂತಹ ಬಿಜೆಪಿ ನಾಯಕರು ನಿತೀಶ್ ಕುಮಾರ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಸಮ್ಮಿಶ್ರ ಸರ್ಕಾರವನ್ನು ಅತ್ಯುತ್ತಮವಾಗಿ ಅರ್ಥ ಮಾಡಿಕೊಂಡಿದ್ದರು ಎಂದು ಉಭಯ ಪಕ್ಷಗಳ ಹಿರಿಯ ಮುಖಂಡರು ಬುಧವಾರ ಹೇಳಿದ್ದಾರೆ.
2005ರಿಂದಲೂ ಎನ್ ಡಿಎ ಮೈತ್ರಿಯನ್ನು ಸುಗಮವಾಗಿ ಸಾಗಿಸುತ್ತಿದ್ದ ನಿತೀಶ್ ಕುಮಾರ್ ಮತ್ತು ಸುಶೀಲ್ ಕುಮಾರ್ ಮೋದಿ ಅವರನ್ನು ಬಿಹಾರ ರಾಜಕಾರಣದಲ್ಲಿ ಸಚಿನ್ ತೆಂಡೊಲ್ಕರ್ ಹಾಗೂ ಸೌರವ್ ಗಂಗೂಲಿಗೆ ಹೋಲಿಸಲಾಗುತಿತ್ತು. ಆದರೆ, 2020 ರಲ್ಲಿ ಸಮ್ಮಿಶ್ರ ಸರ್ಕಾರ ನಾಲ್ಕನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ, ಬಿಜೆಪಿ ಸುಶೀಲ್ ಮೋದಿ ಮತ್ತು ಮತ್ತಿತರ ಕೆಲವು ಹಿರಿಯ ನಾಯಕರನ್ನು ಬಿಹಾರ ರಾಜಕೀಯದಿಂದ ದೂರವಿಟ್ಟಿತು. ಕಳೆದ ಎನ್‌ಡಿಎ ಸರ್ಕಾರದಲ್ಲಿ ಸುಶೀಲ್ ಮೋದಿ ಬದಲಿಗೆ ತಾರ್ಕಿಶೋರ್ ಪ್ರಸಾದ್ ಮತ್ತು ರೇಣು ದೇವಿ ಉಪಮುಖ್ಯಮಂತ್ರಿಗಳಾಗಿ ನಾಮನಿರ್ದೇಶನಗೊಂಡಿದ್ದರು.
ಬುಧವಾರ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಉಭಯ ಪಕ್ಷಗಳ ಹಿರಿಯ ಮುಖಂಡರು ಹೆಚ್ಚು ರಾಜಕೀಯ ಸ್ಥಾನಮಾನವನ್ನು ಹೊಂದಿಲ್ಲದ ಹೊಸ ನಾಯಕರ ಗುಂಪು ಮತ್ತು ಭಿನ್ನಾಭಿಪ್ರಾಯಗಳನ್ನು ಸಮನ್ವಯಗೊಳಿಸಲು ವಿಫಲವಾದ ಸಂವಹನದ ಕೊರತೆಯನ್ನು ಎತ್ತಿ ತೋರಿಸಿದರು.
ನಿತೀಶ್ ಕುಮಾರ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಸುಶೀಲ್ ಮೋದಿ, ನಂದ್ ಕಿಶೋರ್ ಯಾದವ್, ಪ್ರೇಮ್ ಕುಮಾರ್ ಮತ್ತು ಇತರ ಬಿಜೆಪಿ ಮುಖಂಡರ ನಾಯಕತ್ವವನ್ನು ಬಿಜೆಪಿ ಸಂಪೂರ್ಣವಾಗಿ ಬದಲಿಸಿತ್ತು. ಇವರೆಲ್ಲರೂ ಮೈತ್ರಿಯನ್ನು ಅರ್ಥ ಮಾಡಿಕೊಂಡಿದ್ದರು ಎಂದು ಮುಖಂಡರೊಬ್ಬರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


