ದೇಶ

ಪ್ರಧಾನಿ ಮೋದಿ ಆಸ್ತಿ ವಿವರ ಬಹಿರಂಗ: ಇದ್ದ ತುಂಡು ಭೂಮಿಯೂ ದಾನ, ಆದರೆ ಆದಾಯದಲ್ಲಿ ಹೆಚ್ಚಳ!

ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿ ವಿವರ ಬಹಿರಂಗವಾಗಿದೆ. ಮೋದಿಯವರು 2.23 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.

ಪ್ರಧಾನಿ ಮೋದಿ ಆಸ್ತಿ ವಿವರ ಬಹಿರಂಗ: ಇದ್ದ ತುಂಡು ಭೂಮಿಯೂ ದಾನ, ಆದರೆ ಆದಾಯದಲ್ಲಿ ಹೆಚ್ಚಳ!
ಪ್ರಧಾನಿ ಮೋದಿ
Published On :

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿ ವಿವರ ಬಹಿರಂಗವಾಗಿದೆ. ಮೋದಿಯವರು 2.23 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಅವೆಲ್ಲವೂ ಬಹುತೇಕ ಬ್ಯಾಂಕ್ ಠೇವಣಿಗಳಾಗಿವೆ. ಆದರೆ ಅವರು ಗಾಂಧಿನಗರದ ಒಂದು ತುಂಡು ಭೂಮಿಯಲ್ಲಿ ತಮ್ಮ ಪಾಲನ್ನು ದಾನ ಮಾಡಿರುವುದರಿಂದ ಯಾವುದೇ ಸ್ಥಿರ ಆಸ್ತಿಯನ್ನು ಹೊಂದಿಲ್ಲ ಎಂದು ಅವರು ಇತ್ತೀಚಿನ ಆಸ್ತಿ ವಿವರ ಬಹಿರಂಗಪಡಿಸಿದ್ದಾರೆ.

ಅವರು ಯಾವುದೇ ಬಾಂಡ್, ಷೇರು ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಯಾವುದೇ ಹೂಡಿಕೆಯನ್ನು ಹೊಂದಿಲ್ಲ. ಯಾವುದೇ ವಾಹನವನ್ನು ಹೊಂದಿಲ್ಲ. ಆದರೆ 1.73 ಲಕ್ಷ ರೂ. ಮೌಲ್ಯದ ನಾಲ್ಕು ಚಿನ್ನದ ಉಂಗುರಗಳನ್ನು ಹೊಂದಿದ್ದಾರೆ ಎಂದು ಅವರ ಘೋಷಣೆಯ ಪ್ರಕಾರ ಮಾರ್ಚ್ 31 ರವರೆಗೆ ನವೀಕರಿಸಿರುವ ಆಸ್ತಿ ವಿವರದಲ್ಲಿ ತಿಳಿದುಬಂದಿದೆ.

ಪಿಎಂ ಮೋದಿಯವರ ಚರ ಆಸ್ತಿಯು ಒಂದು ವರ್ಷದಲ್ಲಿ  26.13 ಲಕ್ಷ ರೂ. ಹೆಚ್ಚಾಗಿದೆ. ಆದರೆ ಅವರ ಬಳಿ ಮಾರ್ಚ್ 31, 2021 ರಂತೆ ಇದ್ದ 1.1 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಯನ್ನು ಆಗ ಹೊಂದಿಲ್ಲ. ಪ್ರಧಾನ ಮಂತ್ರಿಗಳ ಕಚೇರಿ (PMO) ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ವಿವರಗಳ ಪ್ರಕಾರ ಮಾರ್ಚ್ 31, 2022 ರಂತೆ ಅವರ ಒಟ್ಟು ಆಸ್ತಿ  ಮೌಲ್ಯ 2,23,82,504 ರೂ.

ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅಕ್ಟೋಬರ್ 2002 ರಲ್ಲಿ ಮೋದಿ ಅವರು ಜಂಟಿಯಾಗಿ ವಸತಿ ನಿವೇಶನ ಖರೀದಿಸಿದ್ದರು. ಅದರಲ್ಲಿ ಮೂವರು ಪಾಲುದಾರರಿದ್ದರು. ಸರ್ವೆ ಸಂಖ್ಯೆ 401/ಎ ನಲ್ಲಿ ಇದ್ದ ಆ ಭೂಮಿಯನ್ನು ದಾನ ಮಾಡಲಾಗಿದೆ. ಹೀಗಾಗಿ ಅದರ ಮೇಲೆ ಮೋದಿ ಅವರ ಮಾಲೀಕತ್ವ ಇಲ್ಲ ಎಂದು ತಿಳಿಸಲಾಗಿದೆ.

ಮಾರ್ಚ್ 31, 2022 ರಂತೆ ಪ್ರಧಾನ ಮಂತ್ರಿಯವರ ಕೈಯಲ್ಲಿರುವ ನಗದು 35,250 ರೂ. ಮತ್ತು ಅಂಚೆ ಕಚೇರಿಯಲ್ಲಿ ಅವರ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳ ಮೊತ್ತ  9,05,105 ರೂ. 1,89,305 ರೂ. ಮೌಲ್ಯದ ಜೀವ ವಿಮಾ ಪಾಲಿಸಿಗಳನ್ನು ಹೊಂದಿದ್ದಾರೆ.

ತಮ್ಮ ಆಸ್ತಿಯನ್ನು ಘೋಷಿಸಿದ ಪ್ರಧಾನಿಯವರ ಸಂಪುಟ ಸಹೋದ್ಯೋಗಿಗಳ ಪೈಕಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಾರ್ಚ್ 31, 2022 ರಂತೆ  2.54 ಕೋಟಿ ರೂ. ಮೌಲ್ಯದ ಚರ ಮತ್ತು 2.97 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಯನ್ನು ಹೊಂದಿದ್ದಾರೆ.

ಎಲ್ಲಾ 29 ಕ್ಯಾಬಿನೆಟ್ ಮಂತ್ರಿಗಳಲ್ಲಿ, ಕಳೆದ ಹಣಕಾಸು ವರ್ಷದಲ್ಲಿ ತಮ್ಮದೇ ಮತ್ತು ಅವರ ಅವಲಂಬಿತರ ಆಸ್ತಿಯನ್ನು ಘೋಷಿಸಿದವರಲ್ಲಿ ಧರ್ಮೇಂದ್ರ ಪ್ರಧಾನ್, ಜ್ಯೋತಿರಾದಿತ್ಯ ಸಿಂಧಿಯಾ, ಆರ್‌ಕೆ ಸಿಂಗ್, ಹರ್ದೀಪ್ ಸಿಂಗ್ ಪುರಿ, ಪರ್ಶೋತ್ತಮ್ ರೂಪಲಾ ಮತ್ತು ಜಿ ಕಿಶನ್ ರೆಡ್ಡಿ ಕೂಡ ಸೇರಿದ್ದಾರೆ.

ಕಳೆದ ಹಣಕಾಸು ವರ್ಷದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ತಮ್ಮ ಆಸ್ತಿಯನ್ನು ಘೋಷಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.