ನ್ಯಾಷನಲ್ ಹೆರಾಲ್ಡ್ ಪ್ರಕರಣ: ಮಲ್ಲಿಕಾರ್ಜುನ ಖರ್ಗೆಗೆ ಸಮನ್ಸ್ ನೀಡಿದ್ದ ಇ.ಡಿ ವಿರುದ್ಧ ಕಾಂಗ್ರೆಸ್ ಕಿಡಿ
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿರುವುದು ಸಂಸತ್ತಿಗೆ ಮತ್ತು ಸಂಸದರಿಗೆ ಮಾಡಿರುವ 'ಅವಮಾನ' ಎಂದಿರುವ ಕಾಂಗ್ರೆಸ್, ಇದು ಮರುಕಳಿಸದಂತೆ ನೋಡಿಕೊಳ್ಳಲು ಉಭಯ ಸದನಗಳ ಅಧ್ಯಕ್ಷರು ಇದು ಸೂಕ್ತ ಸಮಯ ಎಂದು ಸೋಮವಾರ ಹೇಳಿದೆ.

ನವದೆಹಲಿ: ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿರುವುದು ಸಂಸತ್ತಿಗೆ ಮತ್ತು ಸಂಸದರಿಗೆ ಮಾಡಿರುವ 'ಅವಮಾನ' ಎಂದಿರುವ ಕಾಂಗ್ರೆಸ್, ಇದು ಮರುಕಳಿಸದಂತೆ ನೋಡಿಕೊಳ್ಳಲು ಉಭಯ ಸದನಗಳ ಅಧ್ಯಕ್ಷರು ಇದು ಸೂಕ್ತ ಸಮಯ ಎಂದು ಸೋಮವಾರ ಹೇಳಿದೆ.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖರ್ಗೆ ಅವರು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಗುರುವಾರ ಹೇಳಿತ್ತು.
'ಸಂಸತ್ತಿನ ಅಧಿವೇಶನ ನಡೆಯುತ್ತಿರುವಾಗ ಇ.ಡಿ ಖರ್ಗೆ ಅವರಿಗೆ ಸಮನ್ಸ್ ನೀಡಿರುವುದು ವಿರೋಧ ಪಕ್ಷದ ನಾಯಕ (ಎಲ್‌ಒಪಿ) ಮತ್ತು ಕಾಂಗ್ರೆಸ್‌ಗೆ ಕಿರುಕುಳ ನೀಡುವ ಏಕೈಕ ಉದ್ದೇಶದಿಂದ ಮಾಡಲಾಗಿದೆ. ಯಂಗ್ ಇಂಡಿಯನ್‌ನ ಕಛೇರಿಯಲ್ಲಿ ಇ.ಡಿಯಿಂದ ಹುಡುಕಾಟ ನಡೆಸುವ ಈ ಕಸರತ್ತನ್ನು ವಿರೋಧ ಪಕ್ಷದ ನಾಯಕರನ ಅಧಿಕೃತ ವಕೀಲರ ಉಪಸ್ಥಿತಿಯಲ್ಲಿ ಉತ್ತಮವಾಗಿ ನಡೆಸಬಹುದಿತ್ತು' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಆದರೆ, ಇ.ಡಿ ಈ ಮನವಿಗೆ ಸಮ್ಮತಿಸಲಿಲ್ಲ ಮತ್ತು ಅವರ ಉಪಸ್ಥಿತಿಗೆ ಒತ್ತಾಯಿಸಿತು. ಸದನವು ಅಧಿವೇಶನದಲ್ಲಿದ್ದರೂ, ಖರ್ಗೆ ಅವರು ಸಮನ್ಸ್‌ಗೆ ಬದ್ಧರಾಗಿದ್ದರು ಮತ್ತು ಅದರ ಪ್ರಕಾರ ಯಂಗ್ ಇಂಡಿಯನ್ ಕಚೇರಿಗೆ ಹೋದರು ಎಂದು ರಮೇಶ್ ಹೇಳಿದರು.
'ಈ ಸಂಗತಿಯನ್ನು ಹೊರತಾಗಿಸಿಯೂ, ಸಂಸತ್ತಿನ ಅಧಿವೇಶನ ನಡೆಯುತ್ತಿರುವ ವೇಳೆ ಪ್ರತಿಪಕ್ಷದ ನಾಯಕ ಅಥವಾ ಇತರೆ ಸಂಸದರಿಗೆ ಇ.ಡಿ ಅಥವಾ ಯಾವುದೇ ಕಾನೂನು ಜಾರಿ ಸಂಸ್ಥೆಗಳು ಸಮನ್ಸ್ ನೀಡುವುದು ಪವಿತ್ರ ಸಂಸ್ಥೆ ಸಂಸತ್ತಿನ ಮತ್ತು ಸಂಸದರಿಗೆ ಮಾಡುವ ಸಂಪೂರ್ಣ ಅವಮಾನವಾಗಿದೆ' ಎಂದು ಅವರು ಹೇಳಿದರು. .
'ಇಂತಹ ಸಂದರ್ಭದಲ್ಲಿ, ಸಂಸತ್ತಿನ ಮತ್ತು ಸಂಸದರ ಪಾವಿತ್ರ್ಯತೆ ಮತ್ತು ಅದರ ಸಮಯ-ಗೌರವಕ್ಕೆ ಅನುಗುಣವಾಗಿ, ಉಭಯ ಸದನಗಳ ಸಭಾಪತಿಗಳು ಈ ಬಗ್ಗೆ ಚರ್ಚಿಸಿ ಸಂಸತ್ತು ಮತ್ತು ಸಂಸದರ ಮೇಲೆ ನಡೆಯುವ ಇಂತಹ ಘೋರ ಅವಮಾನಗಳು ಮರುಕಳಿಸದಂತೆ ನೋಡಿಕೊಳ್ಳಲು ಇದು ಸಕಾಲವಾಗಿದೆ' ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕ್ರಿಮಿನಲ್ ಪ್ರಕರಣಗಳಲ್ಲಿ ಈ ರೀತಿಯ ನಡೆಗಳಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಎಲ್ಒಪಿ ಆರೋಪಿಯಲ್ಲ ಎಂದ ಅವರು, ಲೋಕಸಭೆಯಲ್ಲಿನ ನಿಯಮ 229 ಮತ್ತು ರಾಜ್ಯಸಭೆಯಲ್ಲಿನ ನಿಯಮ 222A ನ ಗಮನ ಸೆಳೆದರು. ಇವುಗಳ ಪ್ರಕಾರ, ಸಂಸತ್ ಸದಸ್ಯನನ್ನು ಕ್ರಿಮಿನಲ್ ಆರೋಪದ ಮೇಲೆ ಬಂಧಿಸಿದಾಗ ಅಥವಾ ಕ್ರಿಮಿನಲ್ ಅಪರಾಧಕ್ಕಾಗಿ ಅಥವಾ ಜೈಲು ಶಿಕ್ಷೆಗೆ ಒಳಗಾದ ಅಥವಾ ಕಾರ್ಯನಿರ್ವಾಹಕ ಆದೇಶದಡಿಯಲ್ಲಿ ಬಂಧಿಸಲ್ಪಟ್ಟಾಗ ನ್ಯಾಯಾಧೀಶರು, ಜಿಲ್ಲಾಧಿಕಾರಿಗಳು ಅಥವಾ ಕಾರ್ಯನಿರ್ವಾಹಕ ಪ್ರಾಧಿಕಾರವು ತಕ್ಷಣವೇ ಲೋಕಸಭೆ ಸ್ಪೀಕರ್ ಅಥವಾ ರಾಜ್ಯಸಭೆಯ ಅಧ್ಯಕ್ಷರಿಗೆ ಸಂದರ್ಭಾನುಸಾರ ಮಾಹಿತಿ ಕಳುಹಿಸಬೇಕು' ಎಂದು ರಮೇಶ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


