ಐಪಿಎಲ್ ಡ್ರೀಮ್ ಟೀಮ್ ಸ್ಪರ್ಧೆಯಲ್ಲಿ ಬಿಹಾರದ ಕ್ಷೌರಿಕನಿಗೆ ಜಾಕ್ ಪಾಟ್
ಬಿಹಾರದ ಕ್ಷೌರಿಕನಿಗೆ ಐಪಿಎಲ್ ಡ್ರೀಮ್ ಟೀಮ್ ಸ್ಪರ್ಧೆಯಲ್ಲಿ ಜಾಕ್ ಪಾಟ್ ಹೊಡೆದಿದ್ದು, ಒಂದು ಕೋಟಿ ರೂಪಾಯಿ ಗೆದ್ದಿದ್ದಾರೆ.

ಪಾಟ್ನ: ಬಿಹಾರದ ಕ್ಷೌರಿಕನಿಗೆ ಐಪಿಎಲ್ ಡ್ರೀಮ್ ಟೀಮ್ ಸ್ಪರ್ಧೆಯಲ್ಲಿ ಜಾಕ್ ಪಾಟ್ ಹೊಡೆದಿದ್ದು, ಒಂದು ಕೋಟಿ ರೂಪಾಯಿ ಗೆದ್ದಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಪಂದ್ಯದಲ್ಲಿ ಅಶೋಕ್ ಕುಮಾರ್ ಅವರ ಆಟಗಾರರ ಆಯ್ಕೆಗೆ ಈ ಬಹುಮಾನ ಬಂದಿದೆ.
"ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು ಹಾಗೂ ಅಶೋಕ್ ಕುಮಾರ್ ಅವರ ಆಯ್ಕೆ ನಿಖರವಾಗಿತ್ತು. ಪಂದ್ಯದ ನಂತರ ನಾನು ಮೊದಲ ಸ್ಥಾನದಲ್ಲಿದ್ದೆ ಹಾಗೂ 1 ಕೋಟಿ ರೂಪಾಯಿ ಬಹುಮಾನ ಬಂದಿದೆ". ಎಂದು ಅಶೋಕ್ ಕುಮಾರ್ ಹೇಳಿದ್ದಾರೆ.
"ಬಹುಮಾನ ಬಂದಿರುವುದರ ಬಗ್ಗೆ ಅಧಿಕೃತವಾದ ಕರೆಯೂ ಬಂದಿತ್ತು. ತೆರಿಗೆ ಕಡಿತಗೊಳಿಸಿ 70 ಲಕ್ಷ ರೂಪಾಯಿಗಳನ್ನು ಇನ್ನು ಎರಡು ದಿನಗಳಲ್ಲಿ ನನ್ನ ಖಾತೆಗೆ ಹಾಕುವುದಾಗಿ ಮಾಹಿತಿ ನೀಡಿದ್ದಾರೆ, ಆ ದಿನ ರಾತ್ರಿ ನಿದ್ದೆ ಬರಲಿಲ್ಲ" ಎಂದು ಅಶೋಕ್ ಹೇಳಿದ್ದಾರೆ.
ಮಧುಬನಿಯಲ್ಲಿ ಅಶೋಕ್ ಸಲೂನ್ ನ್ನು ಹೊಂದಿದ್ದು, ಹಲವು ವರ್ಷಗಳಿಂದ ಡ್ರೀಮ್ ಟೀಮ್ ನಲ್ಲಿ ಭಾಗಿಯಾಗುತ್ತಿದ್ದೆ. ಇದೇ ಮೊದಲ ಬಾರಿಗೆ ಗೆದ್ದಿದ್ದೇನೆ ಎಂದು ಹೇಳಿದ್ದಾರೆ.
50 ರೂಪಾಯಿ ಪ್ರವೇಶ ಶುಲ್ಕ ಪಾವತಿಸಿದ ನಂತರ ಕೋಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಆಯ್ಕೆ ಮಾಡಿದ್ದೆ. ನನ್ನ ವೃತ್ತಿಯನ್ನು ನಾನು ಇಷ್ಟಪಡುತ್ತೇನೆ ಅದನ್ನೇ ಮುಂದುವರೆಸುತ್ತೇನೆ. ಗೆದ್ದ ಹಣದಲ್ಲಿ ಸಾಲವನ್ನು ತೀರಿಸುತ್ತೇನೆ, ನಂತರ ನನ್ನ ಕುಟುಂಬದವರಿಗಾಗಿ ಮನೆ ಕಟ್ಟಿಸುತ್ತೇನೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


