ದೇಶ

ಪಾಕಿಸ್ತಾನದಿಂದ ಶಹಬ್ಬಾಸ್ ಗಿರಿ ಪಡೆದುಕೊಳ್ಳಬೇಕಾ?: ರೈತ ನಾಯಕರಿಗೆ ಕೇಂದ್ರ ಸಚಿವ ಸಂಜೀವ್ ಬಾಲಿಯಾನ್ ಪ್ರಶ್ನೆ

ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿರುವ ರೈತ ನಾಯಕರು ಪಾಕಿಸ್ತಾನವನ್ನು ಮೆಚ್ಚಿಸುವ ಉದ್ದೇಶದಿಂದ ಪ್ರತಿಭಟನೆ ಮಾಡುತ್ತಿದ್ದಾರೆ ಎನ್ನುವ ಅರ್ಥದಲ್ಲಿ ಸಚಿವರು ಮಾತನಾಡಿರುವುದಕ್ಕೆ ಆಕ್ಷೇಪ ಕೇಳಿಬಂದಿದೆ.

ಪಾಕಿಸ್ತಾನದಿಂದ ಶಹಬ್ಬಾಸ್ ಗಿರಿ ಪಡೆದುಕೊಳ್ಳಬೇಕಾ?: ರೈತ ನಾಯಕರಿಗೆ ಕೇಂದ್ರ ಸಚಿವ ಸಂಜೀವ್ ಬಾಲಿಯಾನ್ ಪ್ರಶ್ನೆ
ಕೇಂದ್ರ ಸಚಿವ ಸಂಜೀವ್ ಬಾಲಿಯಾನ್
Published On :

ನವದೆಹಲಿ: ಕೇಂದ್ರದ ನೂತನ ಕೃಷಿ ಕಾನೂನು ವಿರೋಧಿಸಿ ಭಾನುವಾರ ನಡೆದ ರೈತರ ಕಿಸಾನ್ ಮಹಾಪಂಚಾಯತ್ ಸಭೆಯನ್ನು ರಾಜಕೀಯ ಸಮಾವೇಶ ಎಂದು ಕೇಂದ್ರ ಸಚಿವ ಸಂಜೀವ್ ಬಾಲಿಯಾನ್ ಟೀಕೆ ಮಾಡಿದ್ದಾರೆ. 

ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ನಡೆದ ಕಿಸಾನ್ ಮಹಾಪಂಚಾಯತ್ ಅನ್ನು ಸಂಯುಕ್ತ ಕಿಸಾನ್ ಮೋರ್ಚಾ ಆಯೋಜನೆ ಮಾಡಿತ್ತು. ಈ ಬಗ್ಗೆ ಟೀಕೆ ಮಾಡಿರುವ ಸಂಜೀವ್ ಬಾಲಿಯಾನ್ ಕಿಸಾನ್ ಪಂಚಾಯತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರೈತ ನಾಯಕರನ್ನು ಕುರಿತು, ನಿಮಗೆ ಪಾಕಿಸ್ತಾನದಿಂದ ಶಹಬ್ಬಾಸ್ ಗಿರಿ ಪಡೆದುಕೊಳ್ಳಬೇಕಾ ಎಂದು ಪ್ರಶ್ನೆ ಹಾಕಿದ್ದಾರೆ. 

ಸಂಜೀವ್ ಬಾಲಿಯಾನ್ ಅವರು ಮುಜಾಫರ್ ನಗರದ ಸಂಸದರಾಗಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿರುವ ರೈತರು ಪಾಕಿಸ್ತಾನವನ್ನು ಮೆಚ್ಚಿಸುವ ಉದ್ದೇಶದಿಂದ ಪ್ರತಿಭಟನೆ ಮಾಡುತ್ತಿದ್ದಾರೆ ಎನ್ನುವ ಅರ್ಥದಲ್ಲಿ ಸಚಿವರು ಮಾತನಾಡಿರುವುದಕ್ಕೆ ಆಕ್ಷೇಪ ಕೇಳಿಬಂದಿದೆ.

Related Article

'ರೈತರು ನಮ್ಮ ಆಪ್ತ ಬಂಧುಗಳು, ಅವರ ನೋವು ಅರ್ಥಮಾಡಿಕೊಳ್ಳಬೇಕು: ಬಿಜೆಪಿ ನಾಯಕ ವರುಣ್‌ ಗಾಂಧಿ

' ಮುಖ್ಯಮಂತ್ರಿ ರೈತ ವಿದ್ಯಾನಿಧಿ' ಯೋಜನೆಗೆ ಚಾಲನೆ: ವಿದ್ಯಾರ್ಥಿಗಳಿಗೆ ಸ್ಕಾಲರ್ ಷಿಪ್, ಸಿಎಂ ಬೊಮ್ಮಾಯಿ ಮಹಾತ್ವಾಕಾಂಕ್ಷಿ ಕಾರ್ಯಕ್ರಮ

ಕರ್ನಾಟಕದಲ್ಲಿ ರೈತರ ಆದಾಯ ದ್ವಿಗುಣಗೊಳಿಸುವುದು ಅದ್ಭುತ ಯೋಜನೆ; ಆದರೆ ಸವಾಲುಗಳು ಅನೇಕ

ರೈತರ 'ಮಹಾಪಂಚಾಯತ್' ತಡೆಯಲು ಬಂದರೆ ಬಲವಂತವಾಗಿ ನುಗ್ಗುವೆವು: ಕಿಸಾನ್ ಮೋರ್ಚಾ ಮುಖಂಡ ರಾಕೇಶ್ ಟಿಕಾಯಿತ್ ಗುಡುಗು

'ರೈತರೊಂದಿಗೆ ಚರ್ಚೆಗೆ ಕೇಂದ್ರ ಸಿದ್ಧ, ದೇಶದಾದ್ಯಂತ 10 ಸಾವಿರ ‌ಕೃಷಿ ಉತ್ಪಾದಕರ ಸಂಘ ಸ್ಥಾಪನೆ': ಶೋಭಾ ಕರಂದ್ಲಾಜೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.