ಪ್ರಧಾನಿ ನರೇಂದ್ರ ಮೋದಿ ಗಡ್ಡವನ್ನು ಅಣಕಿಸಿದ ಕಾಂಗ್ರೆಸ್ ಮುಖಂಡ ಕಮಲ್ ನಾಥ್: ವ್ಯಾಪಕ ಟೀಕೆ
ಮೂರು ಕೃಷಿ ಕಾನೂನುಗಳು ಕನಿಷ್ಟ ಬೆಂಬಲ ಬೆಲೆ ಮತ್ತು ಸ್ಟಾಕ್ ಮಿತಿಯ ವ್ಯವಸ್ಥೆಯನ್ನು ಹಾಳುಗೆಡವುತ್ತದೆ. ಅಲ್ಲದೆ ಈ ಕಾನೂನು ಕಾಳಸಂತೆ, ಕೈಗಾರಿಕೋದ್ಯಮಿಗಳಿಗೆ ಮಾತ್ರವೇ ಲಾಭ ತಂದುಕೊಡುತ್ತದೆ ಎಂದು ಅವರು ಆರೋಪಿಸಿದ್ದಾರೆ.
ನವದೆಹಲಿ: ಇಂಧನ ಬೆಲೆ ಏರಿಕೆಗೆ ಸಂಬಂಧಿಸಿ ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕಮಲ್ ನಾಥ್ ಪ್ರಧಾನಿ ನರೇಂದ್ರ ಮೋದಿಯವರ ಗಡ್ಡವನ್ನು ಅಣಕಿಸಿದ್ದಾರೆ. ಪ್ರಧಾನಿ ಮೋದಿಯವರ ಗಡ್ಡ ಎಷ್ಟು ಉದ್ದ ಬೆಳೆಯುತ್ತಿದೆಯೋ ಅಷ್ಟೇ ಉದ್ದಕ್ಕೆ ದೇಶದಲ್ಲಿನ ವಸ್ತುಗಳ ಬೆಲೆಯೂ ಬೆಳೆಯುತ್ತಿದೆ ಎಂದು ಕಮಲ್ ನಾಥ್ ವ್ಯಂಗ್ಯವಾಡಿದ್ದಾರೆ.
ಮೋದಿ ತಮ್ಮ ಗಡ್ಡವನ್ನು ಒಂದು ಇಂಚಿನಷ್ಟು ಟ್ರಿಮ್ ಮಾಡಬೇಕು ಇದರಿಂದ ಹಣದುಬ್ಬರ ಕಡಿಮೆಯಾಗುತ್ತದೆೆಂಡು ಕಮಲ್ ನಾಥ್ ಅಣಕವಾಡೀದ್ದಾರೆ. ಮೂರು ಕೃಷಿ ಕಾನೂನುಗಳು ಕನಿಷ್ಟ ಬೆಂಬಲ ಬೆಲೆ ಮತ್ತು ಸ್ಟಾಕ್ ಮಿತಿಯ ವ್ಯವಸ್ಥೆಯನ್ನು ಹಾಳುಗೆಡವುತ್ತದೆ. ಅಲ್ಲದೆ ಈ ಕಾನೂನು ಕಾಳಸಂತೆ, ಕೈಗಾರಿಕೋದ್ಯಮಿಗಳಿಗೆ ಮಾತ್ರವೇ ಲಾಭ ತಂದುಕೊಡುತ್ತದೆ ಎಂದು ಅವರು ಆರೋಪಿಸಿದ್ದಾರೆ.
ರಾಜ್ಯದ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಆದರೆ ಭಾರತೀಯ ಜನತಾ ಪಕ್ಷದ ನೀತಿಗಳು ಅವರ ಭವಿಷ್ಯವನ್ನು ಹಾಳುಮಾಡುತ್ತಿವೆ ಎಂದು ಕಮಲ್ ನಾಥ್ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ. ಉಪಚುನಾವಣೆ ನಡೆಯುತ್ತಿರುವ ಬದ್ವಾಹಾ ವಿಧಾನಸಭಾ ಕ್ಷೇತ್ರದ ಸನವಾಡದಲ್ಲಿ ಅವರು ಮಾತನಾಡುತ್ತಿದ್ದರು.
Related Article
ಇಂಧನ ಬೆಲೆ ಏರಿಕೆಗೆ ಕಾಂಗ್ರೆಸ್ ದೂರುವುದು ಕುಂಟುನೆಪ, ಬಿಜೆಪಿಯಿಂದ ಕಾಂಗ್ರೆಸ್-ಜೆಡಿಎಸ್ ಶಾಸಕರ ಖರೀದಿ: ಸಿದ್ದರಾಮಯ್ಯ
ನಿಜವಾದ ಇಂಧನ, ಗ್ಯಾಸ್ ಬಳಕೆದಾರರು ಯಾರೂ ಪ್ರತಿಭಟಿಸಿಲ್ಲ; ಎಲ್ಲಾ ಡ್ರಾಮಾ: ಬೆಲೆ ಏರಿಕೆಗೆ ಸಚಿವ ನಾರಾಯಣ ಗೌಡ ಸಮರ್ಥನೆ
ಜನಸಾಮಾನ್ಯರಿಗೆ ಎಲ್ಪಿಜಿ ದರ ಏರಿಕೆ ಶಾಕ್: ಮುಂದಿನ ವಾರ ದರ ಹೆಚ್ಚಾಗುವ ಸಾಧ್ಯತೆ
ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ: ಸಿದ್ದರಾಮಯ್ಯ
ತೈಲ ಬೆಲೆ ಏರಿಕೆ ಪ್ರಮುಖ ವಿಚಾರವೇ ಅಲ್ಲ, 'ಶೇ.95 ರಷ್ಟು ಜನರಿಗೆ ಪೆಟ್ರೋಲ್ ಅಗತ್ಯವಿಲ್ಲ': ಉತ್ತರ ಪ್ರದೇಶ ಸಚಿವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

