ಅಶ್ಲೀಲ ವಿಡಿಯೋ ನೋಡಲ್ಲ ಎಂದ 6 ವರ್ಷದ ಬಾಲಕಿಯನ್ನು ಕೊಲೆಗೈದ ಅಪ್ರಾಪ್ತರು!
ಮೂವರು ಅಪ್ರಾಪ್ತರೊಂದಿಗೆ ಅಪ್ರಾಪ್ತೆ ಅಶ್ಲೀಲ ವಿಡಿಯೋ ನೋಡಿಲ್ಲವೆಂದು, ಆಕೆಯನ್ನು ಕೊಲೆ ಮಾಡಿರುವ ಘಟನೆ ಸೆಂಟ್ರಲ್ ಅಸ್ಸೋಂನ ನಾಗಾಂವ್ ಜಿಲ್ಲೆಯ ಕಾಲಿಯಾಬಾರ್ನಲ್ಲಿ ನಡೆದಿದೆ.

ನಾಗಾಂವ್: ಮೂವರು ಅಪ್ರಾಪ್ತರೊಂದಿಗೆ ಅಪ್ರಾಪ್ತೆ ಅಶ್ಲೀಲ ವಿಡಿಯೋ ನೋಡಿಲ್ಲವೆಂದು, ಆಕೆಯನ್ನು ಕೊಲೆ ಮಾಡಿರುವ ಘಟನೆ ಸೆಂಟ್ರಲ್ ಅಸ್ಸೋಂನ ನಾಗಾಂವ್ ಜಿಲ್ಲೆಯ ಕಾಲಿಯಾಬಾರ್ನಲ್ಲಿ ನಡೆದಿದೆ.
ಅಷ್ಟೇ ಅಲ್ಲದೇ ಬಾಲಾಪರಾಧಿಗಳೊಬ್ಬರ ಪೈಕಿಯ ತಂದೆಗೆ ಈ ಘಟನೆ ಬಗ್ಗೆ ತಿಳಿದಿದ್ರೂ ಸಹ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ನಮ್ಮ ದೇಶದಲ್ಲಿ ಅಶ್ಲೀಲ ವಿಡಿಯೋ ನೋಡುವುದನ್ನು ಅಧಿಕೃತವಾಗಿ ನಿಷೇಧಿಸಲಾಗಿದೆ. ಆದ್ರೆ ಇಲ್ಲಿ ಆರು ವರ್ಷದ ಬಾಲಕಿ ನೋಡಲು ನಿರಾಕರಿಸಿದ್ದಕ್ಕೆ ಆಕೆಯನ್ನು ಕೊಲ್ಲಲಾಗಿದೆ.
ನಾಗಾಂವ್ ಜಿಲ್ಲೆಯಲ್ಲಿ ಕಲ್ಲು ಪುಡಿ ಮಾಡುವ ಗಿರಣಿಯ ಶೌಚಾಲಯದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಾಲಕಿ ಪತ್ತೆಯಾಗಿದ್ದಾಳೆ. ಅಲ್ಲಿನ ಓರ್ವ ಹುಡುಗನಿಂದ ಮಾಹಿತಿ ಪಡೆದ ಬಾಲಕಿ ಮನೆಯವರು ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿ, ನಂತರ ಆಸ್ಪತ್ರೆಗೆ ಕರೆದೊಯ್ದರು. ಆದ್ರೆ ಅಲ್ಲಿ ವೈದ್ಯರು ಆಕೆ ಸತ್ತಿದ್ದಾಳೆ ಎಂದು ಹೇಳಿದ್ದಾರೆ.
ಈ ಮೂವರು ದಿನನಿತ್ಯ ಅಶ್ಲೀಲ ವಿಡಿಯೋಗಳನ್ನು ನೋಡುತ್ತಿದ್ದರು. ಆ ದಿನ ಮಧ್ಯಾಹ್ನ ಸಹ ಅಶ್ಲೀಲ ವಿಡಿಯೋ ನೋಡುತ್ತಿದ್ದರು. ಆ ವೇಳೆ ಹುಡುಗಿಗೆ ಅಶ್ಲೀಲ ವಿಡಿಯೋ ನೋಡಲು ಹೇಳಿದರು. ಆಕೆ ವಿಡಿಯೋ ನೋಡಲು ನಿರಾಕರಿಸಿದಳು. ಇದರಿಂದ ಕುಪಿತರಾದ ಆ ಮೂವರು ಬಾಲಕರು ಆಕೆ ಮೇಲೆ ದಾಳಿ ಮಾಡಿ ಕಲ್ಲುಗಳಿಂದ ಹೊಡೆದು ಬರ್ಬರವಾಗಿ ಕೊಂದಿದ್ದಾರೆ. ಬುಧವಾರ ಪೊಲೀಸರು 8 ರಿಂದ 11 ವರ್ಷದೊಳಗಿನ ಮೂವರು ಅಪ್ರಾಪ್ತ ವಯಸ್ಕರನ್ನು ಬಂಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


