ದೇಶ

ಕೊಟ್ಟಾಯಂ ನಲ್ಲಿ 10 ಮಂದಿ ನಾಪತ್ತೆ: ಐಎಎಫ್ ನೆರವು ಕೋರಿಕೆ 

ಕೊಟ್ಟಾಯಂ ನಲ್ಲಿ 10 ಮಂದಿ ನಾಪತ್ತೆ: ಐಎಎಫ್ ನೆರವು ಕೋರಿಕೆ 
ಕೇರಳದಲ್ಲಿ ದಾರಾಕಾರ ಮಳೆ
Published On :

ಕೇರಳದ ಕೇಂದ್ರ ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಕೊಟ್ಟಾಯಂ ನಲ್ಲಿ 10 ಮಂದಿ ನಾಪತ್ತೆಯಾಗಿದ್ದಾರೆ. 

ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತ ಕಂಡಿರುವ ಪರಿಣಾಮ 10 ಮಂದಿ ನಾಪತ್ತೆಯಾಗಿದ್ದಾರೆ. ಕೊಟ್ಟಾಯಂ-ಇಡುಕ್ಕಿ ಜಿಲ್ಲೆಗಳ ಗಡಿ ಭಾಗಗಳಲ್ಲಿ ಭೂಕುಸಿತ ಕಂಡಿದ್ದು ಆತಂಕಕಾರಿ ಪರಸ್ಥಿತಿಯ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚಾರಣೆಗೆ ರಾಜ್ಯ ಸರ್ಕಾರ ಸೇನೆ ಹಾಗೂ ವಾಯುಪಡೆ ನೆರವು ಕೋರಿದೆ. ಸಿಎಂ ಕಚೇರಿ ಈ ಬಗ್ಗೆ ಮಾಹಿತಿ ನೀಡಿದ್ದು, ಕೊಟ್ಟಾಯಂ-ಇಡುಕ್ಕಿ ಜಿಲ್ಲೆಗಳಲ್ಲಿ ಭೂಕುಸಿತ ಉಂಟಾಗಿದ್ದು ಕೆಲವು ಕುಟುಂಬಗಳು ಪ್ರತ್ಯೇಕಗೊಂಡಿವೆ.

ಕೂಟ್ಟಿಕಲ್ ಮತ್ತು ಪೆರುವಂತನಂ ಗಳಲ್ಲೂ ಭೂ ಕುಸಿತ ಉಂಟಾಗಿದ್ದು ಈ ಘಟನೆಗಳಲ್ಲಿ 10 ಮಂದಿ ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಸಂಬಂಧ ಭಾರತೀಯ ವಾಯುಪಡೆ ಹಾಗೂ ಸೇನೆ ಪ್ರತಿಕ್ರಿಯೆ ನೀಡಿದ್ದು, ನೆರವು ನೀಡುವುದಾಗಿ ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಮಿ-17 ಹಾಗೂ ಸಾರಂಗ್ ಹೆಲಿಕಾಫ್ಟರ್ ಗಳನ್ನು ಈಗಾಗಲೇ ಸ್ಟ್ಯಾಂಡ್ ಬೈ ಮೋಡ್ ನಲ್ಲಿ ಇರಿಸಲಾಗಿದೆ. ದಕ್ಷಿಣ ಏರ್ ಕಮಾಂಡ್ ನ ಅಡಿಯಲ್ಲಿ ಬರುವ ಎಲ್ಲಾ ಬೇಸ್ ಗಳಲ್ಲೂ ಹೈ ಅಲರ್ಟ್ ಘೋಷಣೆ ಮಾಡಿದೆ ಎಂದು ವಕ್ತಾರರು ಹೇಳಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಈಗಾಗಲೇ ಸೇನೆಯನ್ನು ನಿಯೋಜಿಸಲಾಗಿದೆ. ಒಂದು ಕಾಲಂ ನಲ್ಲಿ ಓರ್ವ ಅಧಿಕಾರಿ, 2 ಜೆಸಿಒಗಳು ಹಾಗೂ 30 ಇನ್ನಿತರ ಶ್ರೇಣಿಯ ಸೇನಾ ಅಧಿಕಾರಿಗಳು ಈಗಾಗಲೇ ಕಂಜೀರಪ್ಪಳ್ಳಿ, ಕೊಟ್ಟಾಯಂ ಜಿಲ್ಲೆ ಪಾಂಗೋಡ್ ಸೇನಾ ಕೇಂದ್ರಕ್ಕೆ ತೆರಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.