ಭಾರತದ ಬುಡಕಟ್ಟು ಜನಸಂಖ್ಯೆಗೆ ಕೋವಿಡ್-19 ನ ಅಪಾಯ ಹೆಚ್ಚು: ಅಧ್ಯಯನ ವರದಿ
ಅಂಡಮಾನ್ ದ್ವೀಪದಲ್ಲಿ ಪ್ರತ್ಯೇಕವಾಗಿ ವಾಸಿಸುವ ಒಂಗೆ,ಜರವ ರೀತಿಯ ಭಾರತದ ಬುಡಕಟ್ಟು ಜನಸಂಖ್ಯೆಗೆ ಕೋವಿಡ್-19 ನ ಅಪಾಯ ಹೆಚ್ಚು ಇರಲಿದೆ ಎಂದು ಅಧ್ಯಯನ ವರದಿ ಎಚ್ಚರಿಸಿದೆ.

ನವದೆಹಲಿ: ಅಂಡಮಾನ್ ದ್ವೀಪದಲ್ಲಿ ಪ್ರತ್ಯೇಕವಾಗಿ ವಾಸಿಸುವ ಒಂಗೆ,ಜರವ ರೀತಿಯ ಭಾರತದ ಬುಡಕಟ್ಟು ಜನಸಂಖ್ಯೆಗೆ ಕೋವಿಡ್-19 ನ ಅಪಾಯ ಹೆಚ್ಚು ಇರಲಿದೆ ಎಂದು ಅಧ್ಯಯನ ವರದಿ ಎಚ್ಚರಿಸಿದೆ.
ಸಿಎಸ್ ಐಆರ್- ಸಿಸಿಎಂಬಿ ಹಾಗೂ ಬಿಹೆಚ್ ಯು ಸಂಶೋಧಕರು ನಡೆಸಿದ ಅಧ್ಯಯನ ವರದಿ ಇದಾಗಿದೆ.
ಜರ್ನಲ್ ಜೀಸ್&ಇಮ್ಯುನಿಟಿಯಲ್ಲಿ ಈ ಅಧ್ಯಯನ ವರದಿ ಪ್ರಕಟಗೊಂಡಿದ್ದು, ಸರ್ಕಾರ ಈ ಪ್ರತ್ಯೇಕವಾಗಿ ವಾಸಿಸುವ ಮಂದಿಗೆ ಹೆಚ್ಚಿನ ಆದ್ಯತೆಯ ಭದ್ರತೆ ಹಾಗೂ ಕಾಳಜಿಯನ್ನು ವಹಿಸಬೇಕೆಂದು ಸಲಹೆ ನೀಡಿದೆ.
ಹೈದರಾಬಾದ್ ನ ಸೆಲ್ಯುಲಾರ್ ಮತ್ತು ಆಣ್ವಿಕ ಜೀವಶಾಸ್ತ್ರಕ್ಕಾಗಿ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಕೇಂದ್ರದ ಪರಿಷತ್ (CSIR-CCMB) ನ ಕುಮಾರಸ್ವಾಮಿ ತ್ಯಾಗರಾಜ್ ಹಾಗೂ ಬನಾರಸ್ ಹಿಂದೂ ವಿವಿಯ ಪ್ರೊಫೆಸರ್ ಗ್ಯಾನೇಶ್ವರ್ ಚೌಬೆ ಜಾಗತಿಕ ಮಟ್ಟದಲ್ಲಿ ವಿವಿಧ ಜನಾಂಗೀಯ ಗುಂಪುಗಳನ್ನು ಕೋವಿಡ್-19 ವೈರಾಣು ಪರಿಣಾಮ ಬೀರಿದೆ ಎಂಬುದನ್ನು ಗುರುತಿಸಿದ್ದಾರೆ.
ಇತ್ತೀಚೆಗಷ್ಟೇ ಬ್ರೆಜಿಲ್ ನಲ್ಲಿ ದೇಶೀಯ ಜನಾಂಗೀಯ ಗುಂಪುಗಳನ್ನು SARS-CoV-2 ವೈರಾಣುಗಳು ತೀವ್ರವಾಗಿ ಬಾಧಿಸಿರುವುದು ವರದಿಯಾಗಿದೆ. ಈ ಜನಾಂಗೀಯ ಗುಂಪಿನಲ್ಲಿ ಕೋವಿಡ್ ನಿಂದ ಸಂಭವಿಸಿರುವ ಸಾವಿನ ಪ್ರಮಾಣ ಬೇರೆಯದ್ದಕ್ಕೆ ಹೋಲಿಕೆ ಮಾಡಿದರೆ ದುಪ್ಪಟ್ಟಿದೆ ಎನ್ನುತ್ತಾರೆ ಸಂಶೋಧಕರು.
ಈ ಸಾಂಕ್ರಾಮಿಕದ ಕಾರಣದಿಂದಾಗಿ ಹಲವಾರು ಪ್ರದೇಶಗಳಲ್ಲಿ ಅಲ್ಲಿನ ದೇಶೀಯ ಸಮುದಾಯಗಳು ಅವನತಿಯ ಅಂಚಿಗೂ ಹೋಗಿರುವುದನ್ನು ಸಂಶೋಧಕರು ಉಲ್ಲೇಖಿಸಿದ್ದಾರೆ.
ಸಂಶೋಧಕರ ಮಾಹಿತಿಯ ಪ್ರಕಾರ, ಅಂಡಮಾನ್ ಸೇರಿದಂತೆ ಭಾರತದ ವಿವಿಧ ಭಾಗಗಳಲ್ಲಿ ಹಲವಾರು ಸಣ್ಣ ಬುಡಕಟ್ಟು ಜನಾಂಗಗಳಿದ್ದು ಕೋವಿಡ್-19 ಕರಿನೆರಳು ಇವರ ಮೇಲೆಯೂ ಬೀರಬಹುದು ಎಂಬ ಆತಂಕ ವ್ಯಕ್ತವಾಗಿದೆ.
13 ವಿವಿಧ ಸಂಸ್ಥೆಗಳಿಂದ 11ವಿಜ್ಞಾನಿಗಳಿರುವ ತಂಡದಲ್ಲಿ ಸಂಶೋಧಕರು 227 ಭಾರತೀಯ ವಿವಿಧ ಜನಾಂಗಗಳ ಜಿನೋಮ್ ವಿಶ್ಲೇಷಣೆಯನ್ನು ನಡೆಸಿದ್ದು, ಈ ಪೈಕಿ ಈ ಜನಸಂಖ್ಯೆಯಲ್ಲಿ ತಮ್ಮ ಜೀನೋಮ್‌ನಲ್ಲಿ ದೀರ್ಘ ಹೋಮೋಜೈಗಸ್ ವಿಭಾಗಗಳನ್ನು ಹೊಂದಿರುವವರು ಕೋವಿಡ್-19 ನಿಂದ ಹೆಚ್ಚು ಅಪಾಯ ಎದುರಿಸುತ್ತಿರುತ್ತಾರೆ ಎಂಬ ಮಾಹಿತಿ ಬಹಿರಂಗವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


