ದೇಶ

ಕೃಷಿ ಕಾನೂನು ಬಗ್ಗೆ ನಮ್ಮ ವರದಿ ಶೀಘ್ರ ಬಿಡುಗಡೆ ಮಾಡಿ: ಸಿಜೆಐಗೆ ಸುಪ್ರೀಂ ನೇಮಿತ ಸಮಿತಿಯ ಸದಸ್ಯರಿಂದ ಪತ್ರ

ಕೃಷಿ ಕಾನೂನುಗಳ ಕುರಿತು ನಾವು ನೀಡಿರುವ ವರದಿಯನ್ನು ಶೀಘ್ರವಾಗಿ ಬಹಿರಂಗಪಡಿಸಬೇಕು ಎಂದು ಮೂರು ಕೃಷಿ ಕಾಯ್ದೆಗಳ ಪರಾಮರ್ಶೆಗೆ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಅನಿಲ್ ಘನವತ್ ಅವರು...

ಕೃಷಿ ಕಾನೂನು ಬಗ್ಗೆ ನಮ್ಮ ವರದಿ ಶೀಘ್ರ ಬಿಡುಗಡೆ ಮಾಡಿ: ಸಿಜೆಐಗೆ ಸುಪ್ರೀಂ ನೇಮಿತ ಸಮಿತಿಯ ಸದಸ್ಯರಿಂದ ಪತ್ರ
ಕೃಷಿ ಕಾಯ್ದೆ ನಂತರ ಸಂಭ್ರಮಿಸುತ್ತಿರುವ ರೈತರು
Published On :

ನವದೆಹಲಿ: ಕೃಷಿ ಕಾನೂನುಗಳ ಕುರಿತು ನಾವು ನೀಡಿರುವ ವರದಿಯನ್ನು ಶೀಘ್ರವಾಗಿ ಬಹಿರಂಗಪಡಿಸಬೇಕು ಅಥವಾ ಆ ಅಧಿಕಾರವನ್ನು ಸಮಿತಿಗೆ ನೀಡಬೇಕು ಎಂದು ಮೂರು ಕೃಷಿ ಕಾಯ್ದೆಗಳ ಪರಾಮರ್ಶೆಗೆ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಅನಿಲ್ ಘನವತ್ ಅವರು ಮಂಗಳವಾರ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ(ಸಿಜೆಐ)ಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಶೆಟ್ಕರಿ ಸಂಘಟನೆಯ ಹಿರಿಯ ನಾಯಕರಾಗಿರುವ ಘನವತ್ ಅವರು ಪ್ರತೇಕವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಿದ ನಂತರವೂ ಅಗತ್ಯ ಕೃಷಿ ಸುಧಾರಣೆಗಳಿಗೆ ಒತ್ತಾಯಿಸಿ ಮುಂದಿನ ಎರಡು ತಿಂಗಳಲ್ಲಿ ಒಂದು ಲಕ್ಷ ರೈತರನ್ನು ಸಂಘಟಿಸಿ ದೆಹಲಿಗೆ ಕರೆತರುವುದಾಗಿ ಹೇಳಿದ್ದಾರೆ.

ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ)ಗೆ ಕಾನೂನು ಗ್ಯಾರಂಟಿ ಮಾಡಲು ಮತ್ತು ಎಂಎಸ್‌ಪಿಯಲ್ಲಿ ಎಲ್ಲಾ ಕೃಷಿ-ಬೆಳೆಗಳ ಖರೀದಿಯನ್ನು ಖಚಿತಪಡಿಸಿಕೊಳ್ಳುವ ಪ್ರತಿಭಟನಾನಿರತ ರೈತರ ಬೇಡಿಕೆಯು "ಕಾರ್ಯಸಾಧ್ಯವಲ್ಲ ಮತ್ತು ಕಾರ್ಯಗತಗೊಳಿಸಲು ಸಾಧ್ಯವಿಲ್ಲ" ಎಂದು ಅವರು ತಿಳಿಸಿದ್ದಾರೆ.

ನವೆಂಬರ್ 23 ರಂದು ಸಿಜೆಐ ಎನ್ ವಿ ರಮಣ ಅವರಿಗೆ ಬರೆದ ಪತ್ರದಲ್ಲಿ, ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಸರ್ಕಾರದ ನಿರ್ಧಾರದ ನಂತರ, ಸುಪ್ರೀಂ ನೇಮಿತ ಸಮಿತಿಯ ವರದಿಯು "ಅಪ್ರಸ್ತುತವಾಗಲಿದೆ". ಆದರೆ ಸಮಿತಿಯ ಶಿಫಾರಸುಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಇದೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.