ಬ್ರಿಟನ್ ನ್ಯಾಯಾಲಯದ ಅಂಗಳದಲ್ಲಿ ಭಾರತ ಪಾಕ್ ವಿಭಜನೆಯ ಕಾಲದ ಲಾರ್ಡ್ ಮೌಂಟ್ ಬ್ಯಾಟನ್ ಡೈರಿ, ಪತ್ರಗಳು
ಬ್ರಿಟಿಷರ ಕಾಲದ ಭಾರತದ ಕೊನೆಯ ವೈಸ್ ರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಗೆ ಸೇರಿದ ಖಾಸಗಿ ಡೈರಿ ಹಾಗೂ ಪತ್ರಗಳನ್ನು ಸಾರ್ವಜನಿಕರಿಗಾಗಿ ಬಿಡುಗಡೆಗೊಳಿಸಬೇಕೋ ಬೇಡವೋ ಎಂಬುದರ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ.

ಲಂಡನ್: ಬ್ರಿಟಿಷರ ಕಾಲದ ಭಾರತದ ಕೊನೆಯ ವೈಸ್ ರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಗೆ ಸೇರಿದ ಖಾಸಗಿ ಡೈರಿ ಹಾಗೂ ಪತ್ರಗಳನ್ನು ಸಾರ್ವಜನಿಕರಿಗಾಗಿ ಬಿಡುಗಡೆಗೊಳಿಸಬೇಕೋ ಬೇಡವೋ ಎಂಬುದರ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಈ ವಾರವೇ ಈ ಬಗ್ಗೆ ತೀರ್ಪು ಹೊರಬೀಳಲಿದೆ.
ಮೌಂಟ್ ಬ್ಯಾಟನ್ ಅವರ ಪತ್ರಗಳು 1930ರ ಸಮಯದಲ್ಲಿ ಬರೆದವಾಗಿವೆ. ಬ್ರಿಟಿಷ್- ಭಾರತದ ಇತಿಹಾಸದ ಕುರಿತು ಈ ಪತ್ರಗಳು ಬೆಳಕು ಚೆಲ್ಲಲಿವೆ ಎಂದು ಪರಿಣತರು, ಇತಿಹಾಸಹಾರರು ಅಭಿಪ್ರಾಯಪಟ್ಟಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ ಭಾರತ ಪಾಕಿಸ್ತಾನ ವಿಭಜನೆಯ ಕುರಿತಾಗಿ ಮೌಂಟ್ ಬ್ಯಾಟನ್ ಪತ್ರಗಳಲ್ಲಿ ಹೊಸ ವಿಚಾರಗಳು ಹೊರಬೀಳಲಿರುವ ಸಾಧ್ಯತೆಯೂ ಇದೆ. ಇವೆಲ್ಲಾ ಕಾರಣಗಳಿಂದ ಇದೇ ಶುಕ್ರವಾರ ನಡೆಯಲಿರುವ ನ್ಯಾಯಾಲಯ ವಿಚಾರಣೆ ಪ್ರಮುಖ ಪಾತ್ರ ವಹಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


