ಕಾಶ್ಮೀರಿ ಪಂಡಿತರಿಗೆ ಸೇರಿದ್ದ 9 ಆಸ್ತಿಗಳು ಮಾಲಿಕರಿಗೆ ಹಸ್ತಾಂತರ
ಭಯೋತ್ಪಾದಕರ ದಾಳಿಯಿಂದ ಬೇರೆಡೆಗೆ ವಲಸೆ ಹೋಗಿದ್ದ ಕಾಶ್ಮೀರ ಪಂಡಿತರಿಗೆ ಸೇರಿದ್ದ 9 ಆಸ್ತಿಗಳನ್ನು ಮೂಲ ಮಾಲಿಕರಿಗೆ ಹಸ್ತಾಂತರ ಮಾಡಲಾಗಿದೆ.

ಶ್ರೀನಗರ: ಭಯೋತ್ಪಾದಕರ ದಾಳಿಯಿಂದ ಬೇರೆಡೆಗೆ ವಲಸೆ ಹೋಗಿದ್ದ ಕಾಶ್ಮೀರ ಪಂಡಿತರಿಗೆ ಸೇರಿದ್ದ 9 ಆಸ್ತಿಗಳನ್ನು ಮೂಲ ಮಾಲಿಕರಿಗೆ ಹಸ್ತಾಂತರ ಮಾಡಲಾಗಿದೆ.
ಕಾಶ್ಮೀರದಿಂದ ವಲಸೆ ತೆರಳಿದ್ದ ಹಿಂದೂಗಳನ್ನು ಮರಳಿ ಅವರ ತವರು ಪ್ರದೇಶಕ್ಕೆ ಕರೆತರಲು ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ರಾಜ್ಯಸಭೆಗೆ ಮಾಹಿತಿ ನೀಡಲಾಗಿದೆ.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಈ ಮಾಹಿತಿ ನೀಡಿದ್ದು, ಜಮ್ಮು-ಕಾಶ್ಮೀರ ವಲಸೆ ಸ್ಥಿರ ಆಸ್ತಿ (ಸಂರಕ್ಷಣೆ, ಸಂಕಷ್ಟದ ಮಾರಾಟದಿಂದ ರಕ್ಷಣೆ ಹಾಗೂ ನಿರ್ಬಂಧ) ಕಾಯ್ದೆ 1997, ಅಡಿಯಲ್ಲಿ ಜಮ್ಮು-ಕಾಶ್ಮೀರದ ಜಿಲ್ಲೆಗಳಲ್ಲಿನ ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳು ವಲಸಿಗರ ಸ್ಥಿರಾಸ್ತಿಗೆ ಕಾನೂನಾತ್ಮಕವಾಗಿ ಪಾಲಕರಾಗಿದ್ದು, ಒತ್ತುವರಿ, ತೆರವು ಕಾರ್ಯಾಚರಣೆಯಲ್ಲಿ ಸ್ವಯಂ ಪ್ರೇರಿತರಾಗಿ ಕ್ರಮ ಕೈಗೊಳ್ಳಲಿದ್ದಾರೆ. ಇಂತಹ ಪ್ರಕರನಗಳಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳನ್ನು ವಲಸೆ ಹೋದಿದ್ದವರು ಸಂಪರ್ಕಿಸಬಹುದಾಗಿದೆ.
ಮೂಲ ಮಾಲಿಕರಿಗೆ ಇಂತಹ 9 ಆಸ್ತಿಗಳನ್ನು ವಾಪಸ್ ನೀಡಲಾಗಿದೆ ಎಂದು ಜಮ್ಮು-ಕಾಶ್ಮೀರ ಸರ್ಕಾರದ ಮಾಹಿತಿಯನ್ನು ಆಧರಿಸಿ ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ. ಆರ್ಟಿಕಲ್ 370 ರದ್ದು ನಂತರ ಈ ವರೆಗೂ 520 ವಲಸಿಗರು ತಮ್ಮ ತವರಿಗೆ ವಾಪಸ್ಸಾಗಿದ್ದು ಪ್ರಧಾನ ಮಂತ್ರಿ ಅಭಿವೃದ್ಧಿ ಪ್ಯಾಕೇಜ್-2015 ರ ಅಡಿಯಲ್ಲಿ ನೌಕರಿ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


