ದೆಹಲಿ ಆಪ್ ಸರ್ಕಾರದಿಂದ ಶಾಲಾಮಕ್ಕಳಿಗೆ 'ದೇಶಭಕ್ತಿ ಧ್ಯಾನ್' ಪಠ್ಯ ಪುಸ್ತಕ ಬಿಡುಗಡೆ: ಮಕ್ಕಳಲ್ಲಿ ದೇಶಭಕ್ತಿ ಬೆಳೆಸಲು ಕ್ರಮ
ದೆಹಲಿ ಆಪ್ ಸರ್ಕಾರ ಶಾಲಾ ಮಕ್ಕಳು ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ 'ದೇಶಭಕ್ತಿ ಧ್ಯಾನ್' ಎನ್ನುವ ದೇಶಪ್ರೇಮ ಪಠ್ಯವನ್ನು ಸಿದ್ಧಪಡಿಸಿದೆ. ಪ್ರತಿದಿನ ಬೆಳಿಗ್ಗೆ ತರಗತಿ ಶುರುವಿನಲ್ಲಿ ವಿದ್ಯಾರ್ಥಿಗಳು ನಾನು ಭಾರತ ದೇಶವನ್ನು ಗೌರವಿಸುತ್ತೇನೆ ಎಂದು ಜೋರಾಗಿ ಪಠಿಸಬೇಕು.

ನವದೆಹಲಿ: ದೆಹಲಿ ಆಪ್ ಸರ್ಕಾರ ಶಾಲಾ ಮಕ್ಕಳು ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ 'ದೇಶಭಕ್ತಿ ಧ್ಯಾನ್' ಎನ್ನುವ ದೇಶಪ್ರೇಮ ಪಠ್ಯವನ್ನು ಸಿದ್ಧಪಡಿಸಿದೆ. ಪ್ರತಿದಿನ ಬೆಳಿಗ್ಗೆ ತರಗತಿ ಶುರುವಿನಲ್ಲಿ ವಿದ್ಯಾರ್ಥಿಗಳು ನಾನು ಭಾರತ ದೇಶವನ್ನು ಗೌರವಿಸುತ್ತೇನೆ ಎಂದು ಜೋರಾಗಿ ಪಠಿಸಬೇಕು.
ಪ್ರತಿದಿನ ತರಗತಿ ಶುರುವಾಗುವ ಮುನ್ನ ಬೆಳಿಗ್ಗೆ 5 ನಿಮಿಷಗಳ ಕಾಲ ದೇಶಭಕ್ತಿ ಬೆಳೆಸುವ ಕಾರ್ಯಕ್ರಮವನ್ನು ಮಕ್ಕಳಿಗಾಗಿ ನಡೆಸಲಾಗುವುದು. ಅದರಲ್ಲಿ ಭಾರತ ಏಕೆ ಮಹಾನ್ ದೇಶ ಮತ್ತು ಏಕೆ ಇನ್ನೂ ನಮ್ಮ ದೇಶ ಅಭಿವೃದ್ಧಿ ಹೊಂದಿಲ್ಲ ಎನ್ನುವ ವಿಚಾರವನ್ನು ಮಕ್ಕಳಿಗೆ ಪ್ರಸ್ತುತ ಪಡಿಸಲಾಗುವುದು.
6ರಿಂದ ದ್ವಿತೀಯ ಪಿಯುಸಿ ತನಕ ವಿದ್ಯಾರ್ಥಿಗಳಿಗೆ ದೇಶಪ್ರೇಮ ಪಠ್ಯ ಬೋಧನೆ ಮಾಡಲಾಗುವುದು. ಪ್ರತಿದಿನ 5 ನಿಮಿಷಗಳ ದೇಶಭಕ್ತಿ ಕುರಿತ ವಿಚಾರ ಪ್ರಸ್ತುತಿ ಹೊರತಾಗಿ 40 ನಿಮಿಷಗಳ ಕಾಲ ವಿದ್ಯಾರ್ಥಿಗಳಿಗೆ ದೇಶಪ್ರೇಮ ಪಠ್ಯ ಬೋಧನೆ ಮಾಡಲಾಗುವುದು.
ಇದನ್ನೂ ಓದಿ: ದೆಹಲಿ ಸರ್ಕಾರದ ಯೋಜನೆಗಳಿಗೆ ನಟ ಸೋನು ಸೂದ್ ರಾಯಭಾರಿ
6- 8ನೇ ತರಗತಿ ವಿದ್ಯಾರ್ಥಿಗಳಿಗೆ ವಾರದಲ್ಲಿ ಒಂದು ದಿನ ಈ ಬೋಧನೆ ನಡೆಯಲಿದ್ದರೆ, 9- ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಾರಕ್ಕೆ ಎರಡು ದಿನ ದೇಶಪ್ರೇಮ ಕುರಿತ ತರಗತಿ ನಡೆಸಲಾಗುವುದು.
Related Article
ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಪ್ರಾಯೋಜಿತ: ಸಿಎಂ ಬೊಮ್ಮಾಯಿ
ದೆಹಲಿ- ಮುಂಬೈ ಎಕ್ಸ್ ಪ್ರೆಸ್ ವೇ ಹೆದ್ದಾರಿಯಿಂದ ತಿಂಗಳಿಗೆ 1,000- 1,500 ಕೋಟಿ ಆದಾಯ: ನಿತಿನ್ ಗಡ್ಕರಿ
ನಿಮ್ಮನ್ನು ದೆಹಲಿಗೆ ಕಳಿಸ್ತಾರೆ ಹುಶಾರ್: ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ಎಚ್ಚರಿಕೆ
ದೆಹಲಿಯ ಸುಮಾರು 3 ಲಕ್ಷ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ 2 ಸಾವಿರ ರೂ. ಆರ್ಥಿಕ ನೆರವು: ಉಪ ಮುಖ್ಯಮಂತ್ರಿ ಸಿಸೋಡಿಯಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


