ಬಿಜೆಪಿ ನಾಯಕನಿಗೆ 5 ಡೋಸ್ ಕೋವಿಡ್ ಲಸಿಕೆ, 2022 ಕ್ಕೆ 6ನೇ ಡೋಸ್ ನಿಗದಿ
ಬಿಜೆಪಿಯ ನಾಯಕರೊಬ್ಬರು ಲಸಿಕೆ ಪಡೆದ ಪ್ರಮಾಣಪತ್ರ ಡೌನ್ ಲೋಡ್ ಮಾಡಿದಾಗ ಆತನಿಗೆ ಶಾಕ್ ಕಾದಿತ್ತು. ಏಕೆಂದರೆ ಪಡೆದಿರುವುದು 2 ಡೋಸ್ ಲಸಿಕೆಯಾದರೂ ಪ್ರಮಾಣಪತ್ರದಲ್ಲಿ ತೋರಿಸುತ್ತಿರುವುದು 5 ಡೋಸ್!!

ಲಖನೌ: ಬಿಜೆಪಿಯ ನಾಯಕರೊಬ್ಬರು ಲಸಿಕೆ ಪಡೆದ ಪ್ರಮಾಣಪತ್ರ ಡೌನ್ ಲೋಡ್ ಮಾಡಿದಾಗ ಆತನಿಗೆ ಶಾಕ್ ಕಾದಿತ್ತು. ಏಕೆಂದರೆ ಪಡೆದಿರುವುದು 2 ಡೋಸ್ ಲಸಿಕೆಯಾದರೂ ಪ್ರಮಾಣಪತ್ರದಲ್ಲಿ ತೋರಿಸುತ್ತಿರುವುದು 5 ಡೋಸ್!!
ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಸರ್ಧಾನ ಪ್ರದೇಶದ ರಾಮ್ ಪಾಲ್ ಸಿಂಗ್ (73) 79 ನೇ ಬೂತ್ ನಂಬರ್ ನ ಬಿಜೆಪಿ ಅಧ್ಯಕ್ಷರಾಗಿದ್ದು, ಹಿಂದು ಯುವ ವಾಹಿನಿಯ ಸದಸ್ಯರೂ ಆಗಿದ್ದಾರೆ.
ರಾಮ್ ಪಾಲ್ ಸಿಂಗ್ ಅವರು ಡೌನ್ ಲೋಡ್ ಮಾಡಿದ್ದ ಲಸಿಕೆ ಪ್ರಮಾಣಪತ್ರದಲ್ಲಿ 5 ಡೋಸ್ ಲಸಿಕೆಯನ್ನು ನೀಡಲಾಗಿದೆ ಎಂದು ತೋರಿಸುತ್ತಿದೆ. ಅದಷ್ಟೇ ಅಲ್ಲದೇ 2021 ರ ಡಿಸೆಂಬರ್ ನಿಂದ ಜನವರಿ 2022 ರ ಅವಧಿಯಲ್ಲಿ 6 ನೇ ಡೋಸ್ ಲಸಿಕೆಯೂ ನಿಗದಿಯಾಗಿದೆ.
ರಾಮ್ ಪಾಲ್ ಸಿಂಗ್ ಆರೋಗ್ಯ ಇಲಾಖೆ ವಿರುದ್ಧ ನಿರ್ಲಕ್ಷ್ಯದ ಆರೋಪ ಮಾಡಿದ್ದು, ಈ ಸಂಬಂಧ ತನಿಖೆಗೆ ಆದೇಶಿಸಲಾಗಿದೆ.
ಸಿಂಗ್ ನೀಡಿರುವ ಮಾಹಿತಿಯ ಪ್ರಕಾರ ಮಾರ್ಚ್ 16 ರಂದು ಮೊದಲ ಡೋಸ್ ಲಸಿಕೆ ಪಡೆದಿದ್ದರು. ಎರಡನೇ ಡೋಸ್ ಲಸಿಕೆಯನ್ನು ಮೇ.08 ರಂದು ಪಡೆದಿದ್ದರು.
ಸರ್ಟಿಫಿಕೇಟ್ ನಲ್ಲಿ ಮೊದಲ ಡೋಸ್ ಲಸಿಕೆ ಮಾರ್ಚ್ 16 ಕ್ಕೆ, ಎರಡನೇ ಡೋಸ್ ಲಸಿಕೆ ಮೇ.08 ರಂದು ಮೂರನೇ ಡೋಸ್ ಲಸಿಕೆ ಮೇ.15 ರಂದು ಹಾಗೂ 4-6 ಡೋಸ್ ಲಸಿಕೆಯನ್ನು ಸೆ.15 ರಂದು ನೀಡಲಾಗಿದೆ ಎಂದು ತೋರಿಸುತ್ತಿದೆ.
ಈ ಸಂಬಂಧ ಮುಖ್ಯ ವೈದ್ಯಕೀಯ ಅಧಿಕಾರಿ ಅಖಿಲೇಶ್ ಮೋಹನ್ ಮಾತನಾಡಿದ್ದು, ಎರಡಕ್ಕಿಂತಲೂ ಹೆಚ್ಚು ಲಸಿಕೆ ಡೋಸ್ ಪಡೆದಿರುವ ಇದೇ ಮೊದಲ ಪ್ರಕರಣ ಇದಾಗಿದೆ ಎಂದು ಹೇಳಿದ್ದಾರೆ. ಮೇಲ್ನೋಟಕ್ಕೆ ಇದು ಕಿಡಿಗೇಡಿತನ ಮತ್ತು ಪಿತೂರಿಯ ಪ್ರಕರಣದಂತೆ ಕಾಣುತ್ತದೆ ಈ ಸಂಬಂಧ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
ಕೆಲವು ಕಿಡಿಗೇಡಿಗಳು ಪೋರ್ಟಲ್ ನ್ನು ಹ್ಯಾಕ್ ಮಾಡಿ ಈ ರೀತಿ ಮಾಡಿರಬಹುದು ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


