ದೇಶ

‘ಕುದುರೆಯನ್ನು ನೀರಿನ ಬಳಿ ಕರೆದುಕೊಂಡು ಹೋಗಬಹುದು, ನೀರು ಕುಡಿಯುವಂತೆ ಮಾಡುವುದು ಹೇಗೆ?’: ಮೋದಿಗೆ ಸ್ವಾಮಿ ಠಕ್ಕರ್!

ಕುದುರೆಯನ್ನು ನೀರು ಇರುವಲ್ಲಿಗೆ ಕರೆದುಕೊಂಡು ಹೋಗಬಹುದು. ಆದರೆ ಅದು ನೀರು ಕುಡಿಯುವಂತೆ ಮಾಡುವುದು ಹೇಗೆ?’ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸಿದ್ದಾರೆ.

‘ಕುದುರೆಯನ್ನು ನೀರಿನ ಬಳಿ ಕರೆದುಕೊಂಡು ಹೋಗಬಹುದು, ನೀರು ಕುಡಿಯುವಂತೆ ಮಾಡುವುದು ಹೇಗೆ?’: ಮೋದಿಗೆ ಸ್ವಾಮಿ ಠಕ್ಕರ್!
ನರೇಂದ್ರ ಮೋದಿ
Published On :

ನವದೆಹಲಿ: ಕುದುರೆಯನ್ನು ನೀರು ಇರುವಲ್ಲಿಗೆ ಕರೆದುಕೊಂಡು ಹೋಗಬಹುದು. ಆದರೆ ಅದು ನೀರು ಕುಡಿಯುವಂತೆ ಮಾಡುವುದು ಹೇಗೆ?’ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ, ಪ್ರಸ್ತುತ ಆರ್ಥಿಕ ಅವ್ಯವಸ್ಥೆ ಸರಿಪಡಿಸಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲಹೆ ನೀಡುವಂತೆ ಕೋರಿ ಇತ್ತೀಚಿನದಿನಗಳಲ್ಲಿ ನನಗೆ ಅನೇಕ ದೂರವಾಣಿ ಕರೆಗಳು ಬರುತ್ತಿವೆ.  

ಅಂಗಡಿ ಮಾಲೀಕರಿಂದಲೂ ಕರೆ ಮಾಡುತ್ತಿದ್ದಾರೆ, ಕುದುರೆಯನ್ನು ನೀರು ಇರುವಲ್ಲಿಗೆ ಕರೆದುಕೊಂಡು ಹೋಗಬಹುದು.
ಆದರೆ ಅದು ನೀರು ಕುಡಿಯುವಂತೆ ಮಾಡುವುದು ಹೇಗೆ  ಎಂದು ಅವರೆಲ್ಲರ ಬಳಿ ನಾನು ಪ್ರಶ್ನಿಸುತ್ತೇನೆ ಎಂದು ಟಾಂಗ್ ನೀಡಿದ್ದಾರೆ. ಆರ್ಥಿಕತೆಗೆ ಸಂಬಂಧಿಸಿ ಮೋದಿಯವರಿಗೆ 12ಪತ್ರಗಳನ್ನು ಬರೆದಿದ್ದೇನೆ. ಅವರು ಅವುಗಳನ್ನು ಸ್ವೀಕರಿಸಿದ್ದಾರೆಯೇ ವಿನಃ ಕ್ರಮ ಕೈಗೊಂಡಿಲ್ಲ’ ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.