ದೇಶ

ಪಾಕಿಸ್ತಾನಕ್ಕೆ ಬೇಹುಗಾರಿಕೆ: ಪೊಲೀಸರಿಂದ ಗ್ಯಾಸ್ ಏಜೆನ್ಸಿ ಮಾಲೀಕನ ಬಂಧನ!

ಭಾರತೀಯ ಸೇನೆಯ ಚಲನವಲನದ ಮಾಹಿತಿಯನ್ನು ಪಾಕಿಸ್ತಾನದ ನಿರ್ವಾಹಕರಿಗೆ ರವಾನಿಸಿದ ಆರೋಪದ ಮೇಲೆ ರಾಜಸ್ಥಾನದ ಜುಂಜುನು ಜಿಲ್ಲೆಯ ಎಲ್‌ಪಿಜಿ ಸಿಲಿಂಡರ್ ವಿತರಣಾ ಏಜೆನ್ಸಿಯ ಮಾಲೀಕರನ್ನು ಬಂಧಿಸಲಾಗಿದೆ.

ಪಾಕಿಸ್ತಾನಕ್ಕೆ ಬೇಹುಗಾರಿಕೆ: ಪೊಲೀಸರಿಂದ ಗ್ಯಾಸ್ ಏಜೆನ್ಸಿ ಮಾಲೀಕನ ಬಂಧನ!
ಸಾಂದರ್ಭಿಕ ಚಿತ್ರ
Published On :

ಜೈಪುರ: ಭಾರತೀಯ ಸೇನೆಯ ಚಲನವಲನದ ಮಾಹಿತಿಯನ್ನು ಪಾಕಿಸ್ತಾನದ ನಿರ್ವಾಹಕರಿಗೆ ರವಾನಿಸಿದ ಆರೋಪದ ಮೇಲೆ ರಾಜಸ್ಥಾನದ ಜುಂಜುನು ಜಿಲ್ಲೆಯ ಎಲ್‌ಪಿಜಿ ಸಿಲಿಂಡರ್ ವಿತರಣಾ ಏಜೆನ್ಸಿಯ ಮಾಲೀಕರನ್ನು ಬಂಧಿಸಲಾಗಿದೆ. 

ರಾಜಸ್ಥಾನ ಪೊಲೀಸರು ಮತ್ತು ಸೇನಾ ಗುಪ್ತಚರ ವಿಭಾಗದ ಜಂಟಿ ಕಾರ್ಯಾಚರಣೆ ನಡೆಸಿ ಗೂಢಚರ್ಯೆ ಆರೋಪದ ಮೇಲೆ ಜುಂಜುನು ಜಿಲ್ಲೆಯ ನರಹರ್ ಗ್ರಾಮದ ನಿವಾಸಿ 30 ವರ್ಷದ ಸಂದೀಪ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ.

ಸೇನಾ ವಿಭಾಗದಕ್ಕೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಿತರಿಸುವಾಗ ಸಂದೀಪ್ ಭಾರತೀಯ ಸೇನೆಗೆ ಸಂಬಂಧಿಸಿದ ಕಾರ್ಯತಂತ್ರದ ಮಾಹಿತಿ ಮತ್ತು ಛಾಯಾಚಿತ್ರಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಸೇನಾ ನೆಲೆಯ ಸೂಕ್ಷ್ಮ ಮಾಹಿತಿ ಮತ್ತು ಛಾಯಾಚಿತ್ರಗಳನ್ನು ನೀಡಲು ಆರೋಪಿಗೆ ಪಾಕಿಸ್ತಾನದ ಗೂಢಚರ್ಯರು ಹಣದ ಆಮಿಷ ನೀಡಿದ್ದರು. ಆರೋಪಿಯನ್ನು ಸೆಪ್ಟೆಂಬರ್ 12ರಂದು ವಿಚಾರಣೆಗಾಗಿ ಬಂಧಿಸಲಾಗಿದೆ ಎಂದು ಡಿಜಿಪಿ(ಗುಪ್ತಚರ) ಉಮೇಶ್ ಮಿಶ್ರಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.