ಕೃಷಿ ಸುಧಾರಣಾ ಕಾನೂನಿಗೆ ಅಡಿಪಾಯ ಹಾಕಿದ್ದು ಬಾದಲ್ ಸೋದರರು, ಕೇಂದ್ರ ಅದನ್ನು ಕಾಪಿ ಹೊಡೆದಿದೆ ಅಷ್ಟೇ: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸಿಧು
ಈ ಬಗ್ಗೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಸಿಧು ಅವರು ಬಾದಲ್ ಅವರ ಹಳೆಯ ವಿಡಿಯೋಗಳನ್ನು ಪ್ರದರ್ಶನ ಮಾಡಿದ್ದಾರೆ. ಆ ವಿಡಿಯೋದಲ್ಲಿ ಪ್ರಕಾಶ್ ಸಿಂಗ್ ಬಾದಲ್ ಅವರು ಕೇಂದ್ರದ ಕೃಷಿ ಸುಧಾರಣಾ ಕಾನೂನನ್ನು ಹೊಗಳುತ್ತಿರುವುದು ಕಂಡು ಬಂದಿದೆ.

ಚಂಡೀಘಡ: ರೈತರ ಪ್ರತಿಭಟನೆಗೆ ಕಾರಣವಾಗಿರುವ ವಿವಾದಾತ್ಮಕ ಕೃಷಿ ಸುಧಾರಣಾ ಕಾನೂನಿನ ಮೂಲ ನಿರ್ಮಾತೃ ಶಿರೋಮಣಿ ಅಕಾಲಿ ದಳ ಎಂದು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವ್ ಜೋತ್ ಸಿಂಗ್ ಸಿಧು ಆರೋಪಿಸಿದ್ದಾರೆ. ಅಕಾಲಿದಳದ ಮುಖ್ಯಸ್ಥ ಪ್ರಕಾಶ್ ಸಿಂಗ್ ಬಾದಲ್ ಅವರದೇ ಯೋಜನೆ ಅದು ಎಂದು ಸಿಧು ಕೆಟಕಿಯಾಡಿದ್ದಾರೆ.
ಸಿಧು ಆರೋಪಕ್ಕೆ ಪ್ರತಿಕ್ರಿಯಿಸಿರುವ ಶಿರೋಮಣಿ ಅಕಾಲಿ ದಳ ಸಿಧು ಜನರನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ರೈತ ಸಮುದಾಯಕ್ಕೆ ನಿಜಕ್ಕೂ ಸಹಾಯ ಮಾಡುವ ಹಾಗಿದ್ದರೆ 2017ರಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಎಪಿಎಂಸಿ ಕಾಯ್ದೆಯನ್ನು ಹಿಂದಕ್ಕೆ ಪಡೆಯಲಿ ಎಂದು ಟಾಂಗ್ ನೀಡಿದ್ದಾರೆ.
ಈ ಬಗ್ಗೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಸಿಧು ಅವರು ಬಾದಲ್ ಅವರ ಹಳೆಯ ವಿಡಿಯೋಗಳನ್ನು ಪ್ರದರ್ಶನ ಮಾಡಿದ್ದಾರೆ. ಆ ವಿಡಿಯೋದಲ್ಲಿ ಪ್ರಕಾಶ್ ಸಿಂಗ್ ಬಾದಲ್ ಅವರು ಕೇಂದ್ರದ ಕೃಷಿ ಸುಧಾರಣಾ ಕಾನೂನನ್ನು ಹೊಗಳುತ್ತಿರುವುದು ಕಂಡು ಬಂದಿದೆ. ನಂತರದ ವಿಡಿಯೋದಲ್ಲಿ ಅವರು ಅದೇ ಕಾನೂನನ್ನು ತೆಗಳುತ್ತಿರುವುದು ಕಂಡು ಬಂದಿದೆ.
Related Article
ಕೃಷಿ ಕಾಯಿದೆ ವಿರೋಧಿಸಿ ಸೆ. 27 ರಂದು ರೈತ ಸಂಘಟನೆಗಳಿಂದ 'ಭಾರತ್ ಬಂದ್'
ಬಿಜೆಪಿ ಸರ್ಕಾರ ರೈತರ ಹೋರಾಟವನ್ನು ಗೌರವಿಸಬೇಕು ಮತ್ತು ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು: ಅಖಿಲೇಶ್ ಯಾದವ್
'ರೈತರೊಂದಿಗೆ ಚರ್ಚೆಗೆ ಕೇಂದ್ರ ಸಿದ್ಧ, ದೇಶದಾದ್ಯಂತ 10 ಸಾವಿರ ಕೃಷಿ ಉತ್ಪಾದಕರ ಸಂಘ ಸ್ಥಾಪನೆ': ಶೋಭಾ ಕರಂದ್ಲಾಜೆ
ನೂತನ ಕೃಷಿ ಕಾನೂನುಗಳಿಂದ ಬಿಜೆಪಿಯ ಕೋಟ್ಯಾಧಿಪತಿ ಸ್ನೇಹಿತರಿಗಷ್ಟೇ ಲಾಭ, ರೈತರಿಗಲ್ಲ: ಪ್ರಿಯಾಂಕಾ ಗಾಂಧಿ ವಾದ್ರಾ
ಕೃಷಿ ಕ್ಷೇತ್ರದ ಸ್ಟಾರ್ಟ್ ಅಪ್ ಗೆ ಪ್ರಶಸ್ತಿ: ಬೆಂಗಳೂರು ಯುವತಿಯ ಯಶೋಗಾಥೆ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


