ಕಾಂಚೀಪುರಂ: ಚರ್ಚ್ ಬಳಿ ಯುವಕನ ರುಂಡ, ಕಿ.ಮೀ ದೂರದ ಕ್ವಾರಿಯಲ್ಲಿ ಮುಂಡ; ಕೊಲೆ ಹಿಂದೆ ಪ್ರತೀಕಾರದ ಹೊಗೆ!
ಪರಿಚಯಸ್ಥರ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಚರ್ಚ್ ನಿಂದ ಹೊರಬರುತ್ತಿದ್ದ ಅಭಿಷೇಕ್ ಎಂಬಾತನನ್ನು ಕಳೆದ ವರ್ಷ ವೆಟ್ರಿವೇಲ್ ತಂಡ ಹತ್ಯೆ ಮಾಡಿತ್ತು. ಇದೀಗ ಅದೇ ಸ್ಥಳದಲ್ಲಿ ವೆಟ್ರಿವೇಲ್ ರುಂಡ ಪತ್ತೆಯಾಗಿದೆ.

ಚೆನ್ನೈ: ಯುವಕನ ತಲೆಯನ್ನು ಕತ್ತರಿಸಿ ರುಂಡವನ್ನು ಚರ್ಚ್ ಮುಂದೆ ಎಸೆದಿರುವ ಭೀಕರ ಘಟನೆ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಎರುಮಯುರ್ ನಗರದಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿ 21 ವರ್ಷದ ವೆಟ್ರಿವೆಲ್ ಎಂದು ತಿಳಿದುಬಂದಿದೆ. ವೆಟ್ರಿವೆಲ್ ಕಾಲೇಜು ವಿದ್ಯಾರ್ಥಿಯಾಗಿದ್ದು ಗ್ಯಾಂಗ್ ಕಟ್ಟಿಕೊಂಡು 2020ರ ಅಕ್ಟೋಬರ್ ತಿಂಗಳಲ್ಲಿ ಅಭಿಷೇಕ್ ಎಂಬುವನನ್ನು ಹತ್ಯೆ ಮಾಡಿದ್ದ.
ಅಭಿಷೇಕ್ ಪರಿಚಯಸ್ಥರ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಚರ್ಚ್ ನಿಂದ ಹೊರಬರುತ್ತಿರುವ ವೇಳೆ ವೆಟ್ರಿವೇಲ್ ತಂದ ಆತನನ್ನು ಹತ್ಯೆ ಮಾಡಿತ್ತು. ಇದೀಗ ಅದೇ ಸ್ಥಳದಲ್ಲಿ ವೆಟ್ರಿವೇಲ್ ರುಂಡ ಪತ್ತೆಯಾಗಿದೆ. ಪೊಲೀಸರು ವೆಟ್ರಿವೇಲ್ ಕೊಲೆಯ ಹಿಂದೆ ಹಳೆಯ ದ್ವೇಷ ಇರಬಹುದು ಎಂದು ಶಂಕಿಸಿದ್ದಾರೆ.
ವೆಟ್ರಿವೇಲ್ ನ ಉಳಿದ ದೇಹ ಚರ್ಚ್ ನಿಂದ ಹಲವಾರು ಕಿ.ಮೀ ದೂರದ ಕಲ್ಲು ಕ್ವಾರಿಯ ಬಳಿ ಪತ್ತೆಯಾಗಿದೆ. ಅಭಿಷೇಕ್ ಕೊಲೆಗೂ ಹಳೆಯ ದ್ವೇಷವೇ ಕಾರಣ ಎನ್ನುವುದು ವಿಪರ್ಯಾಸ. ಅಭಿಷೇಕ್ ನ ಸಹೋದರ ಈ ಹಿಂದೆ ವೆಟ್ರಿವೇಲ್ ಗ್ಯಾಂಗ್ ಸದಸ್ಯನನ್ನು ಕೊಲೆ ಮಾಡಲು ಯತ್ನಿಸಿತ್ತು. ಅದಕ್ಕೆ ಪ್ರತೀಕಾರವಾಗಿ ವೆಟ್ರಿವೇಲ್ ಅಭಿಷೇಕ್ ಹತ್ಯೆಗೆ ಸಂಚು ರೂಪಿಸಿ ಕೊಲೆಗೈದಿದ್ದ.
Related Article
ಸೌದಿ ಅರೇಬಿಯಾದಿಂದ ಕರ್ನಾಟಕ ತಲುಪಿದ ಮೃತದೇಹ: ಸಂಬಂಧಿಕರಿಂದ ಕೊಲೆ ಆರೋಪ
ಕ್ಯಾಮ್ಸ್ ಕಾರ್ಯದರ್ಶಿ ಕೊಲೆ ಯತ್ನ ಪ್ರಕರಣ; ಪ್ರಮುಖ ಆರೋಪಿ ಸೇರಿ 7 ಮಂದಿ ಬಂಧನ
ಬೆಂಗಳೂರಿನಲ್ಲಿ ವೃದ್ಧ ದಂಪತಿ ಕೊಲೆ ಪ್ರಕರಣ: ಅನಂತಪುರದಲ್ಲಿ ಆರೋಪಿಗಳ ಬಂಧನ
ಬೆಂಗಳೂರು: ಕಲ್ಲು ಎತ್ತಿ ಹಾಕಿ ಸ್ನೇಹಿತನ ಕೊಲೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


