ನೀಟ್ ಪರೀಕ್ಷೆ ಫೇಲ್ ಆಗುವ ಭಯದಿಂದ ವಿದ್ಯಾರ್ಥಿನಿ ಆತ್ಮಹತ್ಯೆ: ತಮಿಳುನಾಡಿನಲ್ಲಿ ನೀಟ್ ಗೆ ಇದು ಎರಡನೇ ಬಲಿ
ವಿದ್ಯಾರ್ಥಿನಿ ಕನ್ನಿಮೋಳಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 562 ಅಂಕಗಳನ್ನು ಪಡೆದಿದ್ದಳು. ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಕಠಿಣವಾಗಿತ್ತು ಎಂದು ಆಕೆ ಪೋಷಕರಲ್ಲಿ ಹೇಳಿಕೊಂಡಿದ್ದಳು.

ಚೆನ್ನೈ: ಅರಿಯಲುರ್ ಜಿಲ್ಲೆಯ ಸತಂಪಡಿ ಗ್ರಾಮದ 19 ವರ್ಷದ ವಿದ್ಯಾರ್ಥಿನಿ ಕೆ.ಕನ್ನಿಮೋಳಿ ಅತ್ಮಹತ್ಯೆ ಮಾಡಿಕೊಂಡಾಕೆ. ಆಕೆ ಇತ್ತೀಚಿಗಷ್ಟೆ ನೀಟ್ ಪ್ರವೇಶ ಪರೀಕ್ಷೆ ಬರೆದಿದ್ದಳು. ಪರೀಕ್ಷೆಯಲ್ಲಿ ಫೇಲ್ ಆಗುವ ಭಯದಿಂದ ಆಕೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಾಲಕಿಯ ಪೋಷಕರಿಬ್ಬರೂ ವಕೀಲರಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಕನ್ನಿಮೋಳಿ ಬೇಸರದಿಂದಿದ್ದಳು ಎನ್ನಲಾಗಿದೆ. ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಕಠಿಣವಾಗಿತ್ತು ಎಂದು ಆಕೆ ಪೋಷಕರಲ್ಲಿ ಹೇಳಿಕೊಂಡಿದ್ದಳು. ಹಾಗಾಗಿ ತಾನು ಪರೀಕ್ಷೆ ಪಾಸಾಗುವುದಿಲ್ಲ ಎಂದು ಆಕೆ ಹೇಳಿದ್ದಳು. ಪೋಷಕರು ಆಕೆಗೆ ಸಮಾಧಾನ ಹೇಳಿದ್ದರೂ ಆಕೆ ಬೇಸರದಿಂದ ಹೊರ ಬಂದಿರಲಿಲ್ಲ. ಪೋಷಕರು ಕಾರ್ಯಕ್ರಮ ನಿಮಿತ್ತ ಪಕ್ಕದ ಊರಿಗೆ ಹೋಗಿದ್ದ ಸಮಯದಲ್ಲಿ ಕನ್ನಿಮೋಳಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಕನ್ನಿಮೋಳಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 562 ಅಂಕಗಳನ್ನು ಪಡೆದಿದ್ದಳು. ಇತ್ತೀಚಿಗಷ್ಟೆ ಧನುಷ್ ಎಂಬ ನೀಟ್ ಪರೀಕ್ಷೆ ಬರೆದಿದ್ದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದ. ಸರ್ಕಾರ ನೀಟ್ ಪರೀಕ್ಷೆ ರದ್ದು ಪಡಿಸುವ ವಿಚಾರವಾಗಿ ಕೆಲವು ಸಮಯದಿಂದ ಹೇಳಿಕೆಗಳನ್ನು ನೀಡಿತ್ತು. ನೀಟ್ ಪರೀಕ್ಷೆ ರದ್ದಾಗುವುದೆಂದು ಹಲವು ಮಂದಿ ವಿದ್ಯಾರ್ಥಿಗಳು ಚೆನ್ನಾಗಿ ತಯಾರಾಗಿರಲಿಲ್ಲ. ಸರ್ಕಾರದ ಗೊಂದಲಮಯ ಹೇಳಿಕೆಯಿಂದ ವಿದ್ಯಾರ್ಥಿಗಳು ಒತ್ತಡಕ್ಕೀಡಾಗಿದ್ದಾರೆ ಎಂದು ಪ್ರತಿ ಪಕ್ಷ ಆರೋಪಿಸಿತ್ತು.
Related Article
ಮಧ್ಯಪ್ರದೇಶ ಬೋರ್ಡ್ ಎಕ್ಸಾಂ ಫಲಿತಾಂಶಕ್ಕೆ ಅತೃಪ್ತಿ: ಲಿಖಿತ ಪರೀಕ್ಷೆ ಬರೆಯಲು 14,000 ವಿದ್ಯಾರ್ಥಿಗಳು ಮುಂದು
ಚೀನಾದಲ್ಲಿ 6-7 ವರ್ಷದ ಮಕ್ಕಳಿಗೆ ಲಿಖಿತ ಪರೀಕ್ಷೆ ನಿಷೇಧ: ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರುವ ಉದ್ದೇಶ!
ಉತ್ತರ ಕನ್ನಡ ಜಿಲ್ಲೆಯ ಕುಗ್ರಾಮ ಶೀಗೆಹಳ್ಳಿಯ ವಿದ್ಯಾರ್ಥಿನಿ ಚೈತ್ರ ಹೆಗಡೆಗೆ 20 ಚಿನ್ನದ ಪದಕ!
ಗದಗ: ವಿದ್ಯಾರ್ಥಿಗಳನ್ನು ತಲುಪಲು ವಿಡಿಯೊ ಮಾರ್ಗ ಕಂಡುಕೊಂಡ ಶಿಕ್ಷಕ!
ಮೈಸೂರು: ರಾಷ್ಟ್ರ ಪ್ರಶಸ್ತಿ ಪಡೆಯಲು ವಿದ್ಯಾರ್ಥಿನಿಗೆ ಸಹಾಯ ಮಾಡಿದ ಕಲಾ ಶಿಕ್ಷಕಿ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


