ಸೆಲ್ಫಿ ತೆಗೆಯಲು ಹೋಗಿ ಸಮುದ್ರಪಾಲಾದ ಯುವಕ: ಸೂಚನಾಫಲಕದ ಎಚ್ಚರಿಕೆ ಕಡೆಗಣಿಸಿದವನಿಗೆ ಮೃತ್ಯುಪಾಶ
ಈ ಹಿಂದೆ ಕಲ್ಲುಬಂಡೆಗಳ ಮೇಲೆ ಕಾಲು ಜಾರಿ ಹಲವು ಪ್ರವಾಸಿಗರು ಮೃತಪಟ್ಟಿದ್ದರು. ಹೀಗಾಗಿ ಆ ಜಾಗಕ್ಕೆ ಹೋಗಬೇಡಿ ಎಂದು ಎಚ್ಚರಿಕೆ ಸಂದೇಶ ಬರೆದ ಸೂಚನಾಫಲಕವೊಂದನ್ನು ನೆಡಲಾಗಿತ್ತು.

ತಿರುವನಂತಪುರಂ: 36 ವರ್ಷದ ಯುವಕನೋರ್ವ ಸೆಲ್ಫಿ ತೆಗೆಯುವಾಗ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ಕೇರಳದ ಅಳಿಮಳ ಬೀಚಿನಲ್ಲಿ ನಡೆದಿದೆ. ತಿರುವಲ್ಲಂ ನಗರ ನಿವಾಸಿ ಜಯನ್ ಮೃತಪಟ್ತ ಯುವಕ.
ಜಯನ್ ಸ್ನೇಹಿತರೊಡನೆ ಬೀಚಿಗೆ ಬಂದಿದ್ದ. ಆತನ ಸ್ನೇಹಿತರು ಬೀಚಿನಲ್ಲಿ ಆಟವಾಡುತ್ತಿರಬೇಕಾರೆ ಈತ ಒಬ್ಬನೇ ಸೆಲ್ಫಿ ತೆಗೆದುಕೊಳ್ಳಲು ಕಲ್ಲುಬಂಡೆಗಳ ರಾಶಿಯಿದ್ದಲ್ಲಿಗೆ ಹೋಗಿದ್ದ. ಅಲೆಗಳ ಹೊಡೆತಕ್ಕೆ ಸಿಕ್ಕು ಕಡಿದಾದ ಕಲ್ಲುಬಂಡೆ ಜಾರುತ್ತಿದ್ದವು.
ಈ ಹಿಂದೆ ಕಲ್ಲುಬಂಡೆಗಳ ಮೇಲೆ ಕಾಲು ಜಾರಿ ಹಲವು ಪ್ರವಾಸಿಗರು ಮೃತಪಟ್ಟಿದ್ದರು. ಹೀಗಾಗಿ ಆ ಜಾಗಕ್ಕೆ ಹೋಗಬೇಡಿ ಎಂಡು ಎಚ್ಚರಿಕೆ ಸಂದೇಶ ಬರೆದ ಸೂಚನಾಫಲಕವೊಂದನ್ನು ಅಲ್ಲಿ ನೆಡಲಾಗಿತ್ತು. ಜಯನ್ ಎಚ್ಚರಿಕೆ ಕಡೆಗಣಿಸಿ ಬಂಡೆ ಮೇಲೆ ಹೋಗಿದ್ದ.
ಬಂಡೆ ತುದಿಗೆ ಹೋಗಿ ಸೆಲ್ಫಿ ತೆಗೆದುಕೊಳ್ಳುವ ಸಮಯದಲ್ಲಿ ದೊಡ್ಡ ಅಲೆಯೊಂದು ಅಪ್ಪಳಿಸಿತ್ತು. ಇದರಿಂದಾಗಿ ಜಯನ್ ಆಯತಪ್ಪಿದ್ದ. ಈ ಸಂದರ್ಭದಲ್ಲಿ ಕಾಲು ಜಾರಿ ಸಮುದ್ರಕ್ಕೆ ಬಿದ್ದಿದ್ದ. ಸಮುದ್ರದಲೆಗಳು ತೀವ್ರವಾಗಿದ್ದರಿಂದ ಆತ ಬಿದ್ದಿದ್ದ ಸ್ಥಳ ತಲುಪಲು ಆಗಲಿಲ್ಲ ಎಂದು ಸ್ನೇಹಿತರು ತಿಳಿಸಿದ್ದಾರೆ.
Related Article
ಪ್ರವಾಸಿಗರು, ಚಾರಣಿಗರನ್ನು ಕೈಬೀಸಿ ಕರೆಯುತ್ತಿದೆ ಉಡುಪಿ ಜಿಲ್ಲೆಯ ಕುಂದಾಪುರದ ಮ್ಯಾಂಗ್ರೋವ್ ಕಾಡುಗಳು!
ನಿಗೂಢ ಆಯಸ್ಕಾಂತೀಯ ಶಕ್ತಿ ಇರುವ ಜಗತ್ತಿನ ಮೂರು ಶಕ್ತಿ ಸ್ಥಳಗಳಲ್ಲಿ ಭಾರತದ ಕಸರ್ ದೇವಿ ಗುಡಿ
ಬಂಡೀಪುರ ಅಭಯಾರಣ್ಯ ಮೂಲಕ ರೋಚಕ ಪ್ರಯಾಣದ ಅನುಭವ!
ವಯನಾಡ್: ಚಹಾದ ಸುವಾಸನೆ ಸವಿಯುತ್ತ, ಮೋಡಗಳ ಬೆನ್ನಟ್ಟಿ ಸಾಗುವ ರೋಮಾಂಚಕ ಪ್ರಯಾಣ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


