ತಮಿಳು ದೇವ ಭಾಷೆ: ಮದ್ರಾಸ್ ಹೈಕೋರ್ಟ್
ತಮಿಳು ಭಾಷೆ ದೇವರುಗಳ ಭಾಷೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿದ್ದು, ದೇಶಾದ್ಯಂತ ಇರುವ ದೇವಾಲಯಗಳಲ್ಲಿ ಅರುಣಗಿರಿನಾಥರ್ ಸೇರಿದಂತೆ ಆಳ್ವಾರರು ಮತ್ತು ನಯನ್ಮಾರರು ರಚಿಸಿದ ತಮಿಳು ಸ್ತುತಿಗೀತೆಗಳನ್ನು ಬಳಕೆ ಮಾಡಬೇಕೆಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಚೆನ್ನೈ: ತಮಿಳು ಭಾಷೆ ದೇವರುಗಳ ಭಾಷೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿದ್ದು, ದೇಶಾದ್ಯಂತ ಇರುವ ದೇವಾಲಯಗಳಲ್ಲಿ ಅರುಣಗಿರಿನಾಥರ್ ಸೇರಿದಂತೆ ಆಳ್ವಾರರು ಮತ್ತು ನಯನ್ಮಾರರು ರಚಿಸಿದ ತಮಿಳು ಸ್ತುತಿಗೀತೆಗಳನ್ನು ಬಳಕೆ ಮಾಡಬೇಕೆಂದು ಹೇಳಿದೆ.
"ನ್ಯಾ. ಎನ್ ಕೃಪಾಕರನ್, ನ್ಯಾ. ಪುಗಲೆಂದಿ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ತಮ್ಮ ಇತ್ತೀಚಿನ ಆದೇಶದಲ್ಲಿ ಸಂಸ್ಕೃತ ಮಾತ್ರವೇ ದೇವ ಭಾಷೆ" ಎಂದು ನಂಬಿಸಲಾಗಿದೆ ಎಂದು ಹೇಳಿದೆ.
ಹಲವು ದೇಶ, ಧರ್ಮಗಳಲ್ಲಿ, ಹಲವು ರೀತಿಯ ನಂಬಿಕೆಗಳಿವೆ ಹಾಗೂ ಸಂಸ್ಕೃತಿ ಹಾಗೂ ಧರ್ಮದ ಪ್ರಕಾರ ಪೂಜೆಯ ಸ್ಥಳಗಳೂ ಬದಲಾವಣೆಯಾಗಿವೆ, ಇಂತಹ ಪ್ರದೇಶಗಳಲ್ಲಿ ಕೇವಲ ಸ್ಥಳೀಯ ಭಾಷೆಗಳಲ್ಲಿ ಪೂಜೆಗಳನ್ನು ಮಾಡಲಾಗುತ್ತದೆ. ಆದರೆ ದೇಶದಲ್ಲಿ ಸಂಸ್ಕೃತ ಮಾತ್ರವೇ ದೇವ ಭಾಷೆ, ಉಳಿದದ್ದು ಯಾವುದೂ ಸಮಾನವಲ್ಲವೆಂದು ನಂಬಿಸಲಾಗಿದೆ ಎಂದು ಹೈಕೋರ್ಟ್ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


