ದೇಶ

ಭಯಾನಕ ವಿಡಿಯೋ: ಮುಳುಗುತ್ತಿರುವ ಬೋಟ್ ನಿಂದ  ಜೀವ ರಕ್ಷಿಸಿಕೊಳ್ಳಲು ನದಿಗೆ ಹಾರಿದ ಪ್ರಯಾಣಿಕರು!

ಅಸ್ಸಾಂನ ಮಜುಲಿ ಬಳಿ ಬುಧವಾರ ಭಯಾನಕ ಘಟನೆಯೊಂದು ನಡೆದಿದೆ. 100 ಪ್ರಯಾಣಿಕರಿದ್ದ ಎರಡು ಬೋಟ್ ಗಳು ಬ್ರಹ್ಮಾಪುತ್ರ ನದಿಯಲ್ಲಿ ಪರಸ್ಪರ ಡಿಕ್ಕಿಯಾಗಿ ಅನೇಕ ಮಂದಿ ನಾಪತ್ತೆಯಾಗಿದ್ದಾರೆ. ಮುಳುಗುತ್ತಿರುವ ಬೋಟ್ ನಿಂದ ಪ್ರಯಾಣಿಕರು ಪ್ರಾಣ ಭಯದಿಂದ ನದಿಗೆ ಹಾರುತ್ತಿರುವ ದೃಶ್ಯ ವಿಡಿಯೋದಲ್ಲಿದೆ.

ಭಯಾನಕ ವಿಡಿಯೋ: ಮುಳುಗುತ್ತಿರುವ ಬೋಟ್ ನಿಂದ  ಜೀವ ರಕ್ಷಿಸಿಕೊಳ್ಳಲು ನದಿಗೆ ಹಾರಿದ ಪ್ರಯಾಣಿಕರು!
ನದಿ ಮಧ್ಯದಲ್ಲಿ ಮುಳುಗುತ್ತಿರುವ ದೋಣಿಯಲ್ಲಿರುವ ಪ್ರಯಾಣಿಕರು
Published On :

ಮಜುಲಿ: ಅಸ್ಸಾಂನ ಮಜುಲಿ ಬಳಿ ಬುಧವಾರ ಭಯಾನಕ ಘಟನೆಯೊಂದು ನಡೆದಿದೆ. 100 ಪ್ರಯಾಣಿಕರಿದ್ದ ಎರಡು ಬೋಟ್ ಗಳು ಬ್ರಹ್ಮಾಪುತ್ರ ನದಿಯಲ್ಲಿ ಪರಸ್ಪರ ಡಿಕ್ಕಿಯಾಗಿ ಅನೇಕ ಮಂದಿ ನಾಪತ್ತೆಯಾಗಿದ್ದಾರೆ. ಮುಳುಗುತ್ತಿರುವ ಬೋಟ್ ನಿಂದ ಪ್ರಯಾಣಿಕರು ಪ್ರಾಣ ಭಯದಿಂದ ನದಿಗೆ ಹಾರುತ್ತಿರುವ ದೃಶ್ಯ ವಿಡಿಯೋದಲ್ಲಿದೆ.

ದೋಣಿಯ ಮೇಲಿದ್ದ ಕೆಲ ಪ್ರಯಾಣಿಕರು ಅತ್ತಿಂದತ್ತಾ ಕಿರುಚಾಡುತ್ತಾ, ಓಡಾಡುತ್ತಾ, ಅಲ್ಲಿಂದ ತೆರಳಲು ಪ್ರಯತ್ನಿಸುತ್ತಿದ್ದರೆ, ಮತ್ತೆ ಕೆಲವರು ಒಂದು ಕಡೆಗೆ ಓರೆಯಾದ ಬೋಟ್  ಮೇಲಿನಿಂದ ನದಿಗೆ ಹಾರಿ  ಮತ್ತೊಂದು ದೋಣಿಯತ್ತ ಬರುವ ದೃಶ್ಯವಿದೆ. ಮಹಿಳೆಯರು ಕೂಡಾ ಪ್ರಾಣ ಭಯದಿಂದ ನೀರಿಗೆ ಹಾರಿದ್ದಾರೆ.

ಅಸ್ಸಾಂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಈ ದುರಂತದಿಂದ 82 ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಈಗಲೂ ಕೂಡಾ ಭಾರತೀಯ ಸೈನಿಕರು ಹಾಗೂ ವಾಯುಪಡೆ ರಕ್ಷಣಾ ಕಾರ್ಯಾಚರಣೆಯಲ್ಲಿ ಕೈ ಜೋಡಿಸಿದ್ದು, ನಾಪತ್ತೆಯಾದವರ ಹುಡುಕಾಟ ನಡೆಸಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.