ಭೋಪಾಲ್‌ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಬಿಜೆಪಿ, ಜೆಡಿಯು ನಾಯಕರು ಸೇರಿ ನಾಲ್ವರ ಬಂಧನ
ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟಿದ್ದ ಹರ್ಯಾಣ ಮೂಲದ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಿಜೆಪಿ ನಾಯಕ ಮತ್ತು ಜೆಡಿಯು ನಾಯಕನನ್ನು....

ಭೋಪಾಲ್: ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟಿದ್ದ ಹರ್ಯಾಣ ಮೂಲದ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಿಜೆಪಿ ನಾಯಕ ಮತ್ತು ಜೆಡಿಯು ನಾಯಕನನ್ನು ಭೋಪಾಲ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಕಳೆದ ತಿಂಗಳು ಭೋಪಾಲ್‌ನ ಟಿಟಿ ನಗರ ಪ್ರದೇಶದ ಹೋಟೆಲ್‌ನಲ್ಲಿ ಹದಿಹರೆಯದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮೂವರನ್ನು(ಎಲ್ಲರೂ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯವರು) ಅಶೋಕ್ ಗಾರ್ಡನ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಮೂವರಲ್ಲಿ ಆಡಳಿತಾರೂ ಬಿಜೆಪಿಯ ಮಾಜಿ ಮಂಡಲ ಅಧ್ಯಕ್ಷರು ಮತ್ತು ದಿಂಡೋರಿ ಜಿಲ್ಲೆಯ ಪ್ರಸ್ತುತ ಕಚೇರಿ ಕಾರ್ಯದರ್ಶಿ ಮನೀಶ್ ನಾಯಕ್, ಜೆಡಿಯು ದಿಂಡೋರಿ ಜಿಲ್ಲಾ ಅಧ್ಯಕ್ಷ ದಿನೇಶ್ ಅವಧಿಯಾ ಮತ್ತು ಪೆಟ್ರೋಲ್ ಪಂಪ್ ಮಾಲೀಕ ಅಮಿತ್ ಸೋನಿ ಸೇರಿದ್ದಾರೆ. ಬಂಧಿತ ಬಿಜೆಪಿ ನಾಯಕನ ಪತ್ನಿ ದಿಂಡೋರಿ ನಗರ ಪಾಲಿಕೆ ಪರಿಷತ್ ನಲ್ಲಿ ಕಾರ್ಪೊರೇಟರ್ ಆಗಿದ್ದಾರೆ.
ಬಂಧಿತ ಮೂವರ ಮೇಲೆ ಐಪಿಸಿ ಸೆಕ್ಷನ್ ಮತ್ತು ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ(ಪೋಕ್ಸೊ)ಕಾಯ್ದೆ 2012 ರ ಅಡಿಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಎಸ್‌ಪಿ (ಎಎಸ್‌ಪಿ-ಭೋಪಾಲ್) ರಾಜೇಶ್ ಭಡೋರಿಯಾ ಬುಧವಾರ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ಮೊದಲಿಗೆ, ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟಿದ್ದ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದರು. ನಂತರ ಅಶೋಕ್ ಗಾರ್ಡನ್ ಪ್ರದೇಶದ ಹೋಟೆಲ್‌ನಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಒಬ್ಬ ವ್ಯಕ್ತಿಯನ್ನು ಮತ್ತು ಟಿಟಿ ನಗರ ಪ್ರದೇಶದ ಹೋಟೆಲ್‌ನಲ್ಲಿ ಅತ್ಯಾಚಾರ ಎಸಗಿದ ಇತರ ಮೂವರು ಆರೋಪಿಗಳನ್ನು ದಿಂಡೋರಿ ಜಿಲ್ಲೆಯಲ್ಲಿ ಮಂಗಳವಾರ ಬಂಧಿಸಲಾಯಿತು ಎಂದು ಹೇಳಿದ್ದಾರೆ.
ಹರ್ಯಾಣದ ಪಲ್ವಾಲ್ ಜಿಲ್ಲೆಯ ನಿವಾಸಿಯಾದ 16 ವರ್ಷದ ಬಾಲಕಿ ಆಗಸ್ಟ್ 13 ರಂದು ಕುಟುಂಬದವರು ಗದರಿಸಿದ್ದರಿಂದ ಮನೆಯಿಂದ ಪರಾರಿಯಾಗಿದ್ದಳು. ಆಕೆ ಆಗ್ರಾ ರೈಲನ್ನು ಹತ್ತಿದಳು, ಅಲ್ಲಿ ಆಕೆ ಇಬ್ಬರು ಮಹಿಳೆಯರಾದ ಸೀಮಾ ಮತ್ತು ಪಾರುಲ್(ಇಬ್ಬರೂ ಭೋಪಾಲ್ ನಿವಾಸಿಗಳು) ಅವರನ್ನು ಭೇಟಿಯಾದಳು. ಅವರಿಗೆ ಕೆಲಸ ಹುಡುಕಿಕೊಂಡು ಮುಂಬೈಗೆ ಹೋಗುತ್ತಿದ್ದೇನೆ ಎಂದು ಹುಡುಗಿ ಹೇಳಿದಾಗ, ಇಬ್ಬರು ಮಹಿಳೆಯರು ಭೋಪಾಲ್‌ನಲ್ಲಿ ತನಗಾಗಿ ಉತ್ತಮ ಉದ್ಯೋಗವನ್ನು ಒದಗಿಸುವುದಾಗಿ ಭರವಸೆ ನೀಡಿದರು, ನಂತರ ಅವರೊಂದಿಗೆ ಭೋಪಾಲ್‌ಗೆ ಕರೆದುಕೊಂಡು ಹೋದರು.
ಆದರೆ ಹರಿಯಾಣದ ಹುಡುಗಿಗೆ ಭೋಪಾಲ್ ನಲ್ಲಿ ಕೆಲಸ ಕೊಡಿಸುವ ಬದಲು, ಇಬ್ಬರು ಮಹಿಳೆಯರು ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳಿದರು ಎಂದು ಭಡೋರಿಯಾ ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


