ಹರ್ಯಾಣದ ಟಿಕ್ರಿ ಗಡಿಭಾಗದಲ್ಲಿ ಭೀಕರ ಅಪಘಾತ: ಮೂವರು ರೈತ ಮಹಿಳೆಯರು ಸಾವು, ಇಬ್ಬರಿಗೆ ಗಾಯ
ಹರ್ಯಾಣ ರಾಜ್ಯದ ಬಹದುರ್ಗರ್ ನ ಟಿಕ್ರಿ ಗಡಿಭಾಗದಲ್ಲಿ ಗುರುವಾರ ನಸುಕಿನ ಜಾವ ಟ್ರಕ್ ಢಿಕ್ಕಿ ಹೊಡೆದು ಮೂವರು ರೈತ ಮಹಿಳೆಯರು ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ನಡೆದಿದೆ.

ಬಹದುರ್ಗರ್: ಹರ್ಯಾಣ ರಾಜ್ಯದ ಬಹದುರ್ಗರ್ ನ ಟಿಕ್ರಿ ಗಡಿಭಾಗದಲ್ಲಿ ಗುರುವಾರ ನಸುಕಿನ ಜಾವ ಟ್ರಕ್ ಢಿಕ್ಕಿ ಹೊಡೆದು ಮೂವರು ರೈತ ಮಹಿಳೆಯರು ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ನಡೆದಿದೆ.
ರೈತ ಮಹಿಳೆಯರು ಆಟೋರಿಕ್ಷಾಕ್ಕೆ ಬಹದುರ್ಗರ್ ರೈಲ್ವೆ ನಿಲ್ದಾಣಕ್ಕೆ ಹೋಗಲು ಕಾಯುತ್ತಿದ್ದ ವೇಳೆ ಪಕೊಡಾ ಚೌಕ್ ನಲ್ಲಿ ಈ ಅಪಘಾತ ನಡೆದಿದೆ.
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ಟಿಕ್ರಿ ಗಡಿಭಾಗದಲ್ಲಿ ಪ್ರತಿಭಟನೆ ನಡೆಸಿ ರೈತ ಮಹಿಳೆಯರು ತಮ್ಮ ಊರಿಗೆ ಹಿಂತಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಮೃತಪಟ್ಟವರನ್ನು 60 ವರ್ಷದ ಛಿಂದರ್ ಕೌರ್, 58 ವರ್ಷದ ಅಮರ್ಜೀತ್ ಕೌರ್ ಮತ್ತು 60 ವರ್ಷದ ಗುರ್ಮೈಲ್ ಕೌರ್ ಎಂದು ಗುರುತಿಸಲಾಗಿದೆ. ಇವರು ಪಂಜಾಬ್ ನ ಮಾನ್ಸ ಜಿಲ್ಲೆಯ ದ್ಯಾಲುವಾಲ ಗ್ರಾಮಕ್ಕೆ ಸೇರಿದವರಾಗಿದ್ದಾರೆ.
ಗಾಯಗೊಂಡವರನ್ನು ಕೂಡಲೇ ಪಿಜಿಐ ರೊಹ್ಟಕ್ ಕೆ ದಾಖಲಿಸಲಾಗಿದೆ. ದೆಹಲಿಯ ಹೊರವಲಯದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿ ನೂರಾರು ಮಹಿಳೆಯರು ಕೂಡ ಭಾಗವಹಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


